ಪ್ರಮುಖ ಮುಖ್ಯಾಂಶಗಳು
- SSLC, PUC, ಡಿಗ್ರಿ ಮುಗಿಸಿದವರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ.
- ತಿಂಗಳಿಗೆ 29,600 ದಿಂದ 83,700 ರೂ. ವರೆಗೆ ಆಕರ್ಷಕ ವೇತನ.
- ಮೇ 6, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ.
ಡಿಗ್ರಿ ಅಥವಾ ಪಿಯುಸಿ ಮುಗಿಸಿ, ಊರು ಬಿಟ್ಟು ಬೆಂಗಳೂರಿಗೆ ಹೋಗದೆ ತಮ್ಮದೇ ಜಿಲ್ಲೆಯಲ್ಲಿ ಯಾವುದಾದರೂ ಒಳ್ಳೆ ಕೆಲಸ ಸಿಕ್ಕರೆ ಸಾಕು ಅಂತ ಕಾಯ್ತಿದ್ದೀರಾ? ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (Bellary DCCB) ಇದೀಗ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಬ್ಯಾಂಕ್‌ನಲ್ಲಿ ಖಾಲಿ ಇರುವ ಒಟ್ಟು 82 ಹುದ್ದೆಗಳಿಗೆ ಇದೀಗ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಉತ್ತಮ ಸಂಬಳದ ಜೊತೆಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ.
ಹೆಚ್ಚಿನ ಜನರಿಗೆ ಬ್ಯಾಂಕ್ ಕೆಲಸ ಅಂದರೆ ಬಹಳ ಕಷ್ಟ, ಬರೀ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಇರುತ್ತದೆ ಎನ್ನುವ ಭಯವಿರುತ್ತದೆ. ಆದರೆ, ಸಹಕಾರ ಬ್ಯಾಂಕ್‌ಗಳ (DCC Bank) ಪರೀಕ್ಷೆಗಳು ಬಹುತೇಕ ನಮ್ಮ ಕನ್ನಡ ಭಾಷೆ ಮತ್ತು ಬ್ಯಾಂಕಿಂಗ್ ಸಾಮಾನ್ಯ ಜ್ಞಾನದ ಮೇಲೆಯೇ ಇರುವುದರಿಂದ ಹಳ್ಳಿಗಳಲ್ಲಿ ಓದಿದ ವಿದ್ಯಾರ್ಥಿಗಳು ಕೂಡ ಸುಲಭವಾಗಿ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದು.

ಬಳ್ಳಾರಿ ಡಿಸಿಸಿ ಬ್ಯಾಂಕ್ ಹುದ್ದೆಗಳ ಸಂಪೂರ್ಣ ವಿವರ
ವಯೋಮಿತಿ (Age Limit):
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCCB) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ (Age Relaxation):
- OBC (2A, 2B, 3A, 3B) ಅಭ್ಯರ್ಥಿಗಳಿಗೆ: 3 ವರ್ಷ
- SC/ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷ
- ಮಹಿಳೆಯರು ಹಾಗೂ ಅಂಗವಿಕಲ (PWD) ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ (Application Fee):
- ಸಾಮಾನ್ಯ ಮತ್ತು ಇತರೆ (2A, 2B, 3A, 3B) ವರ್ಗದ ಅಭ್ಯರ್ಥಿಗಳಿಗೆ: ₹1000/-
- ಪ.ಜಾ/ಪ.ಪಂ (SC/ST), ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ₹500/-
- ಪಾವತಿಸುವ ವಿಧಾನ (Mode of Payment): ಡಿಮ್ಯಾಂಡ್ ಡ್ರಾಫ್ಟ್ (DD) / ಪೋಸ್ಟಲ್ ಆರ್ಡರ್ / ಮನಿ ಆರ್ಡರ್ ಮೂಲಕ ಮಾತ್ರ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ (Selection Process):
- ಲಿಖಿತ ಪರೀಕ್ಷೆ (Written Test) ಮತ್ತು ಸಂದರ್ಶನ (Interview)
ಪರೀಕ್ಷಾ ಮಾದರಿ (Examination Pattern):
1. ಮ್ಯಾನೇಜರ್ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ: (ವಿಷಯವಾರು ಒಟ್ಟು 200 ಅಂಕಗಳು)
- ಸಾಮಾನ್ಯ ಕನ್ನಡ (General Kannada): 50 ಅಂಕಗಳು
- ಸಾಮಾನ್ಯ ಇಂಗ್ಲಿಷ್ (General English): 25 ಅಂಕಗಳು
- ಸಾಮಾನ್ಯ ಜ್ಞಾನ (General Knowledge): 25 ಅಂಕಗಳು
- ಸಹಕಾರ ವಿಷಯಕ್ಕೆ: 50 ಅಂಕಗಳು
- ಭಾರತ ಸಂವಿಧಾನ: 25 ಅಂಕಗಳು
- ಬ್ಯಾಂಕಿಂಗ್, ಸಮಾಜುಕ್ತವಾದ ಚಟುವಟಿಕೆ ಮತ್ತು ವಸ್ತುನಿಷ್ಠ ವಿಷಯ: 25 ಅಂಕಗಳು
2. ವಾಹನ ಚಾಲಕ (Driver) ಮತ್ತು ಕಿರಿಯ ಸಹಾಯಕ (Junior Assistant) ಹುದ್ದೆಗಳಿಗೆ: (ಒಟ್ಟು 100 ಅಂಕಗಳು)
- ಸಾಮಾನ್ಯ ಕನ್ನಡ (General Kannada): 50 ಅಂಕಗಳು
- ಸಾಮಾನ್ಯ ಇಂಗ್ಲಿಷ್ (General English): 50 ಅಂಕಗಳು
ಹುದ್ದೆಗಳ ವಿವರ ಮತ್ತು ಅರ್ಜಿ ಸಲ್ಲಿಸುವ ವಿಧಾನ (How-To Apply)
ಬ್ಯಾಂಕ್ ಮ್ಯಾನೇಜರ್ (FDA), ದ್ವಿತೀಯ ದರ್ಜೆ ಸಹಾಯಕ (SDA), ಜೂನಿಯರ್ ಅಸಿಸ್ಟೆಂಟ್ ಮತ್ತು ವಾಹನ ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದೆ:
- ಅಧಿಕೃತ ಲಿಂಕ್ ಓಪನ್ ಮಾಡಿ: ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ
bellarydcc.bank.inವೆಬ್‌ಸೈಟ್‌ಗೆ ಭೇಟಿ ನೀಡಿ. ನೇರವಾದ ಅರ್ಜಿ ಲಿಂಕ್ ಕೆಳಗೆ ಕೊಡಲಾಗಿದೆ - ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ: ನಿಮ್ಮ ಆಧಾರ್ ಕಾರ್ಡ್, ಮಾರ್ಕ್ಸ್‌ಕಾರ್ಡ್ (SSLC/PUC/Degree), ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
- ಶುಲ್ಕ ಪಾವತಿ (ಮುಖ್ಯವಾದ ಹಂತ): ಆನ್‌ಲೈನ್ ಅರ್ಜಿ ತುಂಬುವ ಮುನ್ನವೇ ಅರ್ಜಿ ಶುಲ್ಕವನ್ನು ಡಿಡಿ (DD) ಅಥವಾ ಪೋಸ್ಟಲ್ ಆರ್ಡರ್ ಮೂಲಕ ಪಾವತಿಸಬೇಕು.
- ಅರ್ಜಿ ಸಲ್ಲಿಕೆ: ಅಂತಿಮವಾಗಿ ಡಿಡಿ ನಂಬರ್ ಸೇರಿದಂತೆ ಎಲ್ಲಾ ಮಾಹಿತಿ ಭರ್ತಿ ಮಾಡಿ ಫಾರ್ಮ್ ‘Submit’ ಕೊಡಿ ಮತ್ತು ಅಪ್ಲಿಕೇಶನ್ ನಂಬರ್ ಸೇವ್ ಮಾಡಿಕೊಳ್ಳಿ.
| 🗓️ ಪ್ರಮುಖ ದಿನಾಂಕಗಳು (Important Dates) | |
|---|---|
| ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: | 06 ಏಪ್ರಿಲ್ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | 06 ಮೇ 2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: | 06 ಮೇ 2026 |
| 🔗 ಪ್ರಮುಖ ಲಿಂಕ್ಗಳು (Important Links) | |
|---|---|
| ಅಧಿಕೃತ ಅಧಿಸೂಚನೆ (Official Notification PDF) | 📄 ಪಿಡಿಎಫ್ ಡೌನ್ಲೋಡ್ |
| ಆನ್‌ಲೈನ್ ಅರ್ಜಿ ಸಲ್ಲಿಕೆ (Apply Online) | ✅ ಇಲ್ಲಿ ಅರ್ಜಿ ಸಲ್ಲಿಸಿ |
| ಅಧಿಕೃತ ವೆಬ್ಸೈಟ್ (Official Website) | 🌐 ವೆಬ್ಸೈಟ್ ಓಪನ್ ಮಾಡಿ |
ನೀಡ್ಸ್ ಆಫ್ ಪಬ್ಲಿಕ್ ಸಲಹೆ (Editor’s Tip)
ನಮ್ಮ ವಿಶೇಷ ಸಲಹೆ: ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿದೆ ಅಂದ ತಕ್ಷಣ, ಬಹುತೇಕರು ಸೈಬರ್ ಸೆಂಟರ್‌ಗೆ ಹೋಗಿ ಆನ್‌ಲೈನ್‌ನಲ್ಲೇ ಫೋನ್ ಪೇ (PhonePe) ಅಥವಾ ಗೂಗಲ್ ಪೇ ಮೂಲಕ ದುಡ್ಡು ಕಟ್ಟಬಹುದು ಅಂದುಕೊಳ್ಳುತ್ತಾರೆ. ಆದರೆ ಇಲ್ಲಿ ದೊಡ್ಡ ಟ್ವಿಸ್ಟ್ ಇದೆ! ಅರ್ಜಿ ಶುಲ್ಕವನ್ನು ನೀವು ಕಡ್ಡಾಯವಾಗಿ ಡಿಮ್ಯಾಂಡ್ ಡ್ರಾಫ್ಟ್ (DD) ಅಥವಾ ಪೋಸ್ಟಲ್ ಆರ್ಡರ್ ಮೂಲಕವೇ ಕಟ್ಟಬೇಕು (ಸಾಮಾನ್ಯ ವರ್ಗಕ್ಕೆ ₹1000 ಹಾಗೂ SC/ST ವರ್ಗಕ್ಕೆ ₹500). ಹಾಗಾಗಿ ದಯವಿಟ್ಟು ಮೊದಲು ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹಾಗೂ ಅಂಚೆ ಕಚೇರಿಗೆ ಹೋಗಿ DD ತೆಗೆಯಿರಿ, ನಂತರವಷ್ಟೇ ಆನ್‌ಲೈನ್ ಅರ್ಜಿ ತುಂಬಲು ಸೈಬರ್ ಸೆಂಟರ್‌ಗೆ ಭೇಟಿ ನೀಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
1. ಪರೀಕ್ಷೆಯ ಪಠ್ಯಕ್ರಮ (Syllabus) ಹೇಗಿರುತ್ತದೆ? ಇಂಗ್ಲಿಷ್ ಕಡ್ಡಾಯವೇ?
2. ಅರ್ಜಿ ಸಲ್ಲಿಸಲು ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ ಬಿತ್ತರಿಸುವುದಿ

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




