ಮೊಬೈಲ್ ಬ್ಯಾಟರಿ ಶೀಘ್ರವಾಗಿ ಖಾಲಿಯಾಗುತ್ತಿದೆ? ನಿಮಗೆ ಬೇಕಾಗಿರುವ ಎಲ್ಲಾ ಪರಿಹಾರ ಇಲ್ಲಿದೆ!
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್(smartphone)ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಕ್ಷಣವೂ ಅದು ಕೈಯಿಂದ ದೂರವಾದರೆ ಅನೇಕರು ತಾಳ್ಮೆ ಕಳೆದುಕೊಳ್ಳುವಂತಹ ಸ್ಥಿತಿಯಿದೆ. ಆದರೆ, ಮೊಬೈಲ್ ಬಳಕೆಯೊಂದಿಗೆ ಮತ್ತೊಂದು ಸಾಮಾನ್ಯ ಸಮಸ್ಯೆ ಎದುರಾಗುತ್ತಿದ್ದುದು – ಬ್ಯಾಟರಿ ಶೀಘ್ರವಾಗಿ ಖಾಲಿಯಾಗುವುದು. ಹೊಸ ಮೊಬೈಲ್ ಖರೀದಿಸಿದರೂ ಕೆಲವೇ ತಿಂಗಳಲ್ಲಿ ಅದರಲ್ಲಿ ಬ್ಯಾಟರಿ ಡ್ರೈನ್(Battery Drain) ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದುದು ಬಳಕೆದಾರರಿಗೆ ತೀವ್ರ ಅಸಹನೀಯವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೀಗಿರುವಾಗ, ಹೊಸ ಬ್ಯಾಟರಿ ಹಾಕಿಸಿಕೊಳ್ಳುವ ಬದಲು ಅಥವಾ ಮೊಬೈಲ್ ಬದಲಾಯಿಸುವ ಮುನ್ನ, ಈ ಕೆಳಗಿನ ಪ್ರಮುಖ ಸೆಟ್ಟಿಂಗ್‌ಗಳನ್ನು(Settings) ಪರಿಷ್ಕರಿಸುವ ಮೂಲಕ ನೀವು ಬ್ಯಾಟರಿ ಬಳಕೆಯ ಮೇಲೆ ನಿಯಂತ್ರಣ ಪಡೆಯಬಹುದು. ಇದರ ಜೊತೆಗೆ ನೀವು ನಿಮ್ಮ ಮೊಬೈಲ್‌ನ ಡಿಜಿಟಲ್ ಆರೋಗ್ಯವನ್ನೂ ಕಾಪಾಡಬಹುದು.
ಡಿಸ್ಪ್ಲೇ ಬೈಟ್ನೆಸ್ ನಿಯಂತ್ರಣ(Display brightness control):
ಅನೇಕರು ಫೋನ್ ಡಿಸ್ಪ್ಲೇ ಬೈಟ್ನೆಸ್ ಅನ್ನು ಹೆಚ್ಚು ಮಟ್ಟದಲ್ಲಿ ಇಡುತ್ತಾರೆ, ವಿಶೇಷವಾಗಿ ಮುಂಜಾನೆ ಅಥವಾ ರಾತ್ರಿ ಸಮಯದಲ್ಲೂ. ಹೀಗೆ ಬೆಳಕಿನ ತೀವ್ರತೆಯನ್ನು ಅಧಿಕವಾಗಿ ಇಡುವುದು ಬ್ಯಾಟರಿ ಖರ್ಚಾಗುವುದಕ್ಕೆ ಪ್ರಮುಖ ಕಾರಣ.
ಪರಿಹಾರ:
Auto-Brightness ಅಥವಾ Adaptive Brightness ಸೆಟ್ಟಿಂಗ್ ಅನ್ನು ಆನ್ ಮಾಡಿ. ಇದು ಸುತ್ತಲಿನ ಬೆಳಕಿನ ಆಧಾರದ ಮೇಲೆ ಡಿಸ್ಪ್ಲೇ ಪರಿವರ್ತನೆಗೊಳ್ಳುತ್ತದೆ.
Dark Mode ಬಳಸಿದರೆ, OLED ಅಥವಾ AMOLED ಸ್ಕ್ರೀನ್ ಹೊಂದಿರುವ ಫೋನ್‌ಗಳಲ್ಲಿ ಬ್ಯಾಟರಿ ಉಳಿಯುತ್ತದೆ.
ಲೊಕೇಶನ್ ಸರ್ವಿಸ್(Location Service):
ಲೊಕೇಶನ್ ಸೆರ್ವಿಸ್ ಸಕ್ರೀಯವಾಗಿರುವಾಗ, ಅದು ಬ್ಯಾಕ್‌ಗ್ರೌಂಡ್‌ನಲ್ಲಿ ನಿರಂತರವಾಗಿ GPS ಸಿಗ್ನಲ್‌ಗಳನ್ನು ಶೋಧಿಸುತ್ತಿರುತ್ತದೆ. ಈ ಪ್ರಕ್ರಿಯೆ ತೀವ್ರ ಬ್ಯಾಟರಿ ಉಪಯೋಗಕ್ಕೆ ಕಾರಣವಾಗುತ್ತದೆ.
ಪರಿಹಾರ:
ಲೊಕೇಶನ್ ಸೆಟ್ಟಿಂಗ್‌ನ್ನು Only While Using the App ಎಂದು ಬದಲಾಯಿಸಿ.
ನೀವು ನ್ಯಾವಿಗೇಶನ್ ಅಥವಾ ಫುಡ್ ಡೆಲಿವರಿ ಆ್ಯಪ್ ಬಳಸದಿದ್ದಾಗ ಲೊಕೇಶನ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ.
Google Location History ಅಥವಾ Location Sharing ಅಂಶಗಳನ್ನು ಪರಿಶೀಲಿಸಿ ಮತ್ತು ಅಗತ್ಯವಿಲ್ಲದಿದ್ದರೆ ಡಿಸೇಬಲ್ ಮಾಡಿ.
ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು(Background Apps):
ಅನೇಕ ಆ್ಯಪ್‌ಗಳು ತೆರೆದಿರುವುದು ಇಲ್ಲದಿದ್ದರೂ ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತವೆ – ಸಂದೇಶ ತಲುಪಿಸಲು, ನೋಟಿಫಿಕೇಶನ್ ನೀಡಲು, ಸಿಂಕ್ ಮಾಡಲು.
ಪರಿಹಾರ:
Battery Usage ಸೆಕ್ಷನ್‌ನಲ್ಲಿ ಯಾವ ಆ್ಯಪ್ ಹೆಚ್ಚು ಬ್ಯಾಟರಿ ಉಪಯೋಗಿಸುತ್ತಿದೆ ಎಂಬುದನ್ನು ನೋಡಿ.
ಅಗತ್ಯವಿಲ್ಲದ ಆ್ಯಪ್‌ಗಳ Background Activity ಅನ್ನು ನಿಷ್ಕ್ರಿಯಗೊಳಿಸಿ.
Battery Saver Mode ಅನ್ನು ಆನ್ ಮಾಡಿ, ಇದು ಬ್ಯಾಕ್‌ಗ್ರೌಂಡ್ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ.
ವೈಫೈ, ಬ್ಲೂಟೂತ್ ಮತ್ತು ಮೊಬೈಲ್ ಡೇಟಾ(WiFi, Bluetooth and mobile data):
ಈ ಸೇವೆಗಳು ನಿರಂತರವಾಗಿ ಸಿಗ್ನಲ್ ಶೋಧಿಸುತ್ತಿರುತ್ತವೆ, ಹೀಗಾಗಿ ಬ್ಯಾಟರಿ ಹೆಚ್ಚು ಖಾಲಿಯಾಗುತ್ತದೆ.
ಪರಿಹಾರ:
ಕೆಲಸ ಮುಗಿದ ನಂತರ Wi-Fi, Bluetooth ಅಥವಾ Mobile Data ಅನ್ನು ಆಫ್ ಮಾಡಿ.
Airplane Mode ಅನ್ನು ನಿದ್ದೆ ಸಮಯದಲ್ಲಿ ಬಳಸಬಹುದು.
ನೋಟಿಫಿಕೇಶನ್ ಗಳು(Notifications):
ಅನಗತ್ಯ ಆ್ಯಪ್‌ಗಳಿಂದ ಬರುವ ನಿರಂತರ ನೋಟಿಫಿಕೇಶನ್‌ಗಳು ನಿಮ್ಮ ಸ್ಕ್ರೀನ್ ಅನ್ನು ಪುನಃ ಪುನಃ ಆನ್ ಮಾಡುತ್ತವೆ, ಇದು ಕೂಡ ಬ್ಯಾಟರಿ ದುರ್ಬಳಕೆಗೆ ಕಾರಣ.
ಪರಿಹಾರ:
ಸೆಟ್ಟಿಂಗ್‌ನಲ್ಲಿ ಹೋಗಿ Notifications ವಿಭಾಗದಲ್ಲಿ ಅಗತ್ಯವಿಲ್ಲದ ಆ್ಯಪ್‌ಗಳ ನೋಟಿಫಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ.
ಒಟ್ಟಾರೆ, ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ಒಬ್ಬರಿಗಿಂತ ಒಬ್ಬರಿಗೂ ಹೆಚ್ಚು ಅವಲಂಬಿತನಾಗಿದ್ದೇವೆ. ಆದರೆ, ಈ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದು ನಮ್ಮದೇ ಹೊಣೆ. ಮೊಬೈಲ್ ಅನ್ನು ಎಷ್ಟು ಸಮರ್ಪಕವಾಗಿ ಬಳಸುತ್ತೇವೋ ಅಷ್ಟೇ ಉತ್ತಮವಾಗಿ ಅದು ನಾವು ಇಚ್ಛಿಸುವ ಸ್ಪಂದನ ನೀಡುತ್ತದೆ.
ಅನೇಕ ಬಾರಿ ನಮ್ಮದೇ ಅಜಾಗರೂಕತೆಯಿಂದಾಗಿ ಮೊಬೈಲ್ ಬ್ಯಾಟರಿ ಶೀಘ್ರವಾಗಿ ಖಾಲಿಯಾಗುತ್ತದೆ. ತಕ್ಷಣವೇ ಹೊಸ ಫೋನ್ ಅಥವಾ ಬ್ಯಾಟರಿ ಖರೀದಿಸುವ ಬದಲು, ಈ ನಿರ್ದಿಷ್ಟ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ಸರಿಪಡಿಸಿ. ಇದರೊಂದಿಗೆ ನಿಮ್ಮ ಫೋನ್‌ನ ಕಾರ್ಯಕ್ಷಮತೆ ಕೂಡ ಸುಧಾರಣೆಯಾಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.