ಬ್ಯಾಂಕ್ ನಲ್ಲಿ ಹೊಸ ರೂಲ್ಸ್, ಬ್ಯಾಂಕ್ ಖಾತೆಯಲ್ಲಿ 1000 ರೂಪಾಯಿಗಳಿಗಿಂತ ಕೆಡಿಮೆ ಇದ್ದರೆ ದಂಡ!
ಇಂದು ಪ್ರತಿಯೊಬ್ಬರು ವಿವಿಧ ಬ್ಯಾಂಕ್ ಗಳಲ್ಲಿ ತಮ್ಮ ತಮ್ಮ ಖಾತೆ(account)ಯನ್ನು ತೆರೆದಿರುತ್ತಾರೆ. ಯಾಕೆಂದರೆ ಬ್ಯಾಂಕ್(bank) ನಲ್ಲಿ ಖಾತೆಯನ್ನು ಹೊಂದುವುದು ಅತೀ ಮುಖ್ಯವಾಗಿದೆ. ಹಣವನ್ನು ಹೂಡಿಕೆ(invest) ಮಾಡಲು ಅಥವಾ ವಿವಿಧ ರೀತಿಯ ಹಣಕಾಸು ವಹಿವಾಟುಗಳಿಗೆ ಬ್ಯಾಂಕ್ ಖಾತೆ ಅತೀ ಅವಶ್ಯಕ. ಹಾಗೆಯೇ ಇಂದು ನಮ್ಮ ಹಣಕಾಸಿನ ವಿಷಯಗಳಲ್ಲಿ ಎಚ್ಚರ ವಹಿಸಬೇಕಾಗಿದೆ ಕಾರಣ ದೊಡ್ಡ ಮೊತ್ತದ ಹಣ ನಮ್ಮ ಕೈಯಲ್ಲಿ ಅಥವಾ ಮನೆಯಲ್ಲಿ ಇರುವುದು ಒಳ್ಳೆಯದಲ್ಲ. ಈ ಎಲ್ಲಾ ಕಾರಣಗಗೆ ಬ್ಯಾಂಕ್ ನಲ್ಲಿ ಖಾತೆ ಇದ್ದರೆ ಒಳ್ಳೆಯದು. ಹಾಗೆಯೇ ಬ್ಯಾಂಕ್ ನಲ್ಲಿ ಹಲವು ನಿಯಮಗಳನ್ನು ಕೂಡ ನಾವು ಅನುಸರಿಸಬೇಕು.
ಬ್ಯಾಂಕ್ ಖಾತೆಯನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದು ಬ್ಯಾಂಕ್ ನ ಜವಾಬ್ದಾರಿಯಲ್ಲ :
ಬ್ಯಾಂಕ್ ನಲ್ಲಿ ಖಾತೆ (Bank account) ತೆರೆದು ನಂತರ ಅದರ ಉಪಯೋಗ ಮಾಡದೇ, ಬ್ಯಾಂಕ್ ಖಾತೆ ರದ್ದಾದ ಬಳಿಕ ಜನರು ಬ್ಯಾಂಕ್ ಗಳನ್ನೇ ದೂರುತ್ತಾರೆ. ಇದರ ಬದಲು ಬ್ಯಾಂಕ್ ನಿಯಮಗಳಂತೆ ಆ ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ (Minimum balance) ಎಷ್ಟಿದೆ ಎನ್ನುವುದನ್ನು ತಿಳಿದುಕೊಂಡು ಯಾವಾಗಲೂ ಅಷ್ಟು ಹಣವು ಖಾತೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಉತ್ತಮ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆಯ ಅನಿವಾರ್ಯವಿದೆ :
ಹೌದು, ಇಂದು ಎಲ್ಲರೂ ಬ್ಯಾಂಕ್ ಖಾತೆಯನ್ನು ಹೊಂಡುವುದು ಬಹಳ ಅವಶ್ಯಕವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ ದಶಕಗಳಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಹಲವು ನಿಯಮಗಳು ಜಾರಿಯಾಗಿವೆ. ಇಂದು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥನಿಗೂ, ಉದ್ಯಮಿಗೂ ಹೀಗೆ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಎನ್ನುವುದು ಅನಿವಾರ್ಯ.
ಬ್ಯಾಂಕ್ ನಲ್ಲಿ ಖಾತೆ ತೆರೆಯುವುದರಿಂದ ಹಲವಾರು ಅನುಕೂಲಗಳಿವೆ :
ಸರ್ಕಾರ ನೀಡುವ ಸ್ಕಾಲರ್ಶಿಪ್, ಸಹಾಯಧನಗಳು, ಪಿಂಚಣಿ ಪಡೆಯುವುದಕ್ಕೆ ಅಥವಾ ಬ್ಯಾಂಕ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಕಾರಣದಿಂದ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ಹಣಕಾಸಿನ ವಿನಿಮಯ ಸರಾಗವಾಗಲಿ ಎನ್ನುವ ಉದ್ದೇಶದಿಂದ ಅಥವಾ ಬ್ಯಾಂಕ್ ಗಳಿಂದ ಸಾಲ(loan) ಪಡೆಯುವುದಕ್ಕೆ ಹೀಗೆ ಒಂದಲ್ಲ ಒಂದು ಕಾರಣದಿಂದ ಪ್ರತಿಯೊಬ್ಬರು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಇದರಿಂದ ಹಲವಾರು ರೀತಿಯಲ್ಲಿ ಅನುಕೂಲವಾಗುತ್ತದೆ.
ಬ್ಯಾಂಕ್ ನಲ್ಲಿ ಖಾತೆ ತೆರೆದು ನಂತರ ಅದರ ಉಪಯೋಗ ಮಾಡದೇ ಇರುವುದು ತಪ್ಪು :
ಆದರೆ ನಂತರವೂ ಆ ಖಾತೆಗಳನ್ನು ನಿರ್ವಹಿಸುವುದು ಕೂಡ ಅಷ್ಟೇ ಜವಾಬ್ದಾರಿ ಕೆಲಸವಾಗಿದೆ. ಯಾಕೆಂದರೆ ಹೆಚ್ಚಿನ ಜನರು ತಮ್ಮ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಆ ಖಾತೆ ಮೂಲಕ ತಮ್ಮ ಕಾರ್ಯ ಮುಗಿದ ಮೇಲೆ ಅವುಗಳಿಗೆ ಹಣ ಹಾಕದೆ ಅವುಗಳನ್ನು ಸರಿಯಾಗಿ ನಿರ್ವಹಿಸದೇ ಹಾಗೆ ಬಿಡುತ್ತಾರೆ. ಇದರಿಂದ ಬ್ಯಾಂಕ್ ನಲ್ಲಿರುವ ಖಾತೆಗಳು ಮುಚ್ಚಲ್ಪಡುತ್ತಾವೆ. ಕ್ರಮೇಣ ಖಾತೆ ರದ್ದಾಗುವ ಅಥವಾ ಬ್ಯಾಂಕ್ ರೂಲ್ಸ್ (bank rules) ಗಳ ಪ್ರಕಾರವಾಗಿ ನಿಗದಿತ ಹಣ ಖಾತೆಯಲ್ಲಿ ಉಳಿಸದ ಕಾರಣ ದಂಡ ಕಡಿತ ವಾಗಿರುವ ಸಾಧ್ಯತೆ ಇರುತ್ತದೆ.
ಹಣ ಹೂಡಿಕೆ ಮಾಡಲು ಅಷ್ಟೇ ಅಲ್ಲದೆ ಇತರ ವಿಷಯಗಳಿಗೂ ಕೂಡ ಬ್ಯಾಂಕ್ ಖಾತೆ ಉತ್ತಮ ಪಾತ್ರ ವಹಿಸುತ್ತದೆ :
ಈಗ ಬ್ಯಾಂಕ್ ಖಾತೆಗಳಲ್ಲಿ ಹಣ ಹೂಡಿಕೆ ಮಾಡುವುದು ಅಥವಾ ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳುವುದಕ್ಕಾಗಿ ಖಾತೆ ತೆರೆಯುವುದು ಮಾತ್ರವಲ್ಲ ಇನ್ನು ಅನೇಕ ವಿಚಾರಗಳಿಗಾಗಿ ಒಂದು ಅಗತ್ಯ ದಾಖಲೆಯಾಗಿ ಬ್ಯಾಂಕ್ ಖಾತೆ ಪಾತ್ರ ವಹುಸುತ್ತದೆ.
ಬ್ಯಾಂಕ್ ನಲ್ಲಿ ನೀಡಿರುವ ನಿಯಮಗಳ ಪಾಲನೆ ಅತೀ ಅವಶ್ಯಕ :
ಯಾವುದೋ ವೆಹಿಕಲ್ ಲೋನ್ ಅಥವಾ ಗೃಹ ಸಾಲ ಅಥವಾ ಇನ್ಯಾವುದೇ ಸಾಲ ಮಾಡಿದ್ದರೆ ಮತ್ತು ಪ್ರತಿ ತಿಂಗಳು EMI ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುವಂತೆ ಒಪ್ಪಂದ ಮಾಡಿಕೊಂಡಿದ್ದರೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಆ ತಿಂಗಳಿನ EMI ಹಣ ಆಟೋ ಡಿಡೆಕ್ಟ್ ಆಗಲು ಬೇಕಾದಷ್ಟು ಹಣ ಉಳಿಸಿಕೊಂಡಿರಲೇಬೇಕು ಖಾತೆಯಲ್ಲಿ ಹಣ ಇಲ್ಲದಿದ್ದರೆ ಇಂಥ ಪ್ರಕರಣಗಳಾದ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಕೂಡ ಕುಸಿಯುತ್ತದೆ ಮತ್ತು ಇದರೊಂದಿಗೆ ಇನ್ನಷ್ಟು ದಂಡ ಹೆಚ್ಚಾಗಬಹುದಾದ ಸಾಧ್ಯತೆಯೂ ಕೂಡ ಇರುತ್ತದೆ.
ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯ :
ಹೌದು, ಪ್ರಧಾನಮಂತ್ರಿ ಜನ ಧನ್ ಖಾತೆ ಅಂದರೆ ಜೀರೋ ಬ್ಯಾಲೆನ್ಸ್ ಅಕೌಂಟ್ ಹೊರತುಪಡಿಸಿ, ವಿವಿಧ ರೀತಿಯ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಆ ಬ್ಯಾಂಕ್ ನಿಯಮದ ಪ್ರಕಾರವಾಗಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಎಂದು ತಿಳಿದುಕೊಂಡು ಮತ್ತು ನಿಮ್ಮ ಮಾಸಿಕ ಅಥವಾ ವಾರ್ಷಿಕ ವಹಿವಾಟು ಹೇಗಿದೆ ಎನ್ನುವುದರ ಮೇಲೆ ಬ್ಯಾಂಕ್ ಖಾತೆಯನ್ನು ನಿರ್ವಹಿಸಬೇಕಾಗುತ್ತದೆ.
ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಲೇಬೇಕು ಮತ್ತು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಅನೇಕರು ಇಡುತ್ತಾರೆ. ಇದರಿಂದ ಕಡಿಮೆ ಬಡ್ಡಿದರ ಸಿಗುತ್ತದೆ ಅದರ ಬದಲು ಬ್ಯಾಂಕ್ ಗಳಲ್ಲಿಯೇ ಇರುವ ಸುರಕ್ಷಿತ (safety) ಇನ್ನಿತರ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉಳಿದ ಖಾತೆ ಮೇಲಿನ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ದರದ(interest rate) ಲಾಭವನ್ನು ಪಡೆಯಬಹುದು. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೂ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




