WhatsApp Image 2025 11 11 at 6.22.39 PM

ಬ್ಯಾಂಕ್ ಉದ್ಯೋಗ: ಪದವಿ ಆದವರಿಗೆ ಬಂಪರ್ ಸುದ್ದಿ! ಬ್ಯಾಂಕ್ ಆಫ್ ಬರೋಡಾದಲ್ಲಿ 2,700 ಹುದ್ದೆಗೆ ಅರ್ಜಿ ಪ್ರಾರಂಭ!

Categories:
WhatsApp Group Telegram Group

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಒಂದು ಮಹತ್ವದ ಸುದ್ದಿ ಇಲ್ಲಿದೆ. ಬ್ಯಾಂಕ್ ಆಫ್ ಬರೋಡಾ (Bank of Baroda – BoB) ಒಟ್ಟು 2,700 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ಅರ್ಹತೆಗಳು ಮತ್ತು ವಯೋಮಿತಿ

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 28 ವರ್ಷಗಳು ಇರಬೇಕು.

ವಯೋಮಿತಿ ಸಡಿಲಿಕೆ

ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ:

ಎಸ್ಸಿ (SC) ಮತ್ತು ಎಸ್ಟಿ (ST) ಅಭ್ಯರ್ಥಿಗಳಿಗೆ: 5 ವರ್ಷಗಳು.

ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ: 3 ವರ್ಷಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: ಡಿಸೆಂಬರ್ 1, 2025.

ಸಾಮಾನ್ಯ (General), ಒಬಿಸಿ (OBC), ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ: ₹800/-

ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ: ₹400/-

ಎಸ್ಸಿ (SC) ಮತ್ತು ಎಸ್ಟಿ (ST) ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ ಮತ್ತು ಸ್ಟೈಪೆಂಡ್

ಅಭ್ಯರ್ಥಿಗಳ ಆಯ್ಕೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

  1. ಆನ್‌ಲೈನ್ ಪರೀಕ್ಷೆ (Online Test)
  2. ಸ್ಥಳೀಯ ಭಾಷಾ ಪರೀಕ್ಷೆ (Local Language Test)
  3. ದಾಖಲೆಗಳ ಪರಿಶೀಲನೆ (Document Verification)

ಸ್ಟೈಪೆಂಡ್: ಆಯ್ಕೆಯಾದ ಅಪ್ರೆಂಟಿಸ್‌ಗಳಿಗೆ ಮಾಸಿಕ ₹15,000/- ಸ್ಟೈಪೆಂಡ್ ನೀಡಲಾಗುತ್ತದೆ.

ರಾಜ್ಯವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ಕರ್ನಾಟಕ440ಉತ್ತರಪ್ರದೇಶ307
ಗುಜರಾತ್400ಮಹಾರಾಷ್ಟ್ರ297
ರಾಜಸ್ಥಾನ215ತಮಿಳುನಾಡು159
ದೆಹಲಿ119ಪಶ್ಚಿಮ ಬಂಗಾಳ104
ಪಂಜಾಬ್96ಮಧ್ಯಪ್ರದೇಶ56
ಕೇರಳ52ಛತ್ತೀಸ್‌ಗಢ್48
ಬಿಹಾರ47ಹರಿಯಾಣ36
ಆಂಧ್ರಪ್ರದೇಶ38ಒಡಿಶಾ29
ಉತ್ತರಾಖಂಡ22ಅಸ್ಸಾಂ21
ಜಾರ್ಖಂಡ್15ಚಂಡೀಗಢ್12
ಗೋವಾ10ಪಾಂಡಿಚೇರಿ6
ಮಿಜೋರಾಂ5ದಾದ್ರಾ ಮತ್ತು ನಗರ ಹವೇಲಿ5
ಜಮ್ಮು ಕಾಶ್ಮೀರ5ಮಣಿಪುರ2
WhatsApp Image 2025 09 05 at 10.22.29 AM 21

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories