ಬೆಂಗಳೂರು ಮಹಾನಗರದಲ್ಲಿ ಹಳದಿ ಮೆಟ್ರೊ ಮಾರ್ಗದ ಸೇವೆ 10ನೇ ತಾರೀಕಿನಂದು ಪ್ರಾರಂಭವಾಗಲಿದೆ. ಈ ಹೊಸ ಮಾರ್ಗವು ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್.ವಿ. ರಸ್ತೆ) ಮತ್ತು ಬೊಮ್ಮಸಂದ್ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಳದಿ ಮಾರ್ಗದ ಮುಖ್ಯ ವಿಶೇಷತೆ ಎಂದರೆ ಇಲ್ಲಿ ಚಾಲಕರಿಲ್ಲದ (ಡ್ರೈವರ್ಲೆಸ್) ಮೆಟ್ರೊ ರೈಲುಗಳು ಸಂಚರಿಸುತ್ತವೆ. ಆರಂಭದ ಹಂತದಲ್ಲಿ ಈ ಮಾರ್ಗದಲ್ಲಿ ಮೂರು ರೈಲುಗಳು ಮಾತ್ರ ಕಾರ್ಯನಿರ್ವಹಿಸಲಿವೆ.
ಹಳದಿ ಮಾರ್ಗದ ನಿಲ್ದಾಣಗಳು:
- ಬೊಮ್ಮಸಂದ್ರ
- ಹೆಬ್ಬಗೋಡಿ
- ಹುಸ್ಕೂರು ರಸ್ತೆ
- ಇನ್ಫೋಸಿಸ್ ಫೌಂಡೇಷನ್ (ಕೋನಪ್ಪನ ಅಗ್ರಹಾರ)
- ಎಲೆಕ್ಟ್ರಾನಿಕ್ ಸಿಟಿ
- ಬೆರಟೇನ ಅಗ್ರಹಾರ
- ಹೊಸ ರಸ್ತೆ
- ಸಿಂಗಸಂದ್ರ
- ಕೂಡ್ಲು ಗೇಟ್
- ಹೊಂಗಸಂದ್ರ
- ಬೊಮ್ಮನಹಳ್ಳಿ
- ಸೆಂಟ್ರಲ್ ಸಿಲ್ಕ್ ಬೋರ್ಡ್
- ಬಿಟಿಎಂ ಲೇಔಟ್
- ಜಯದೇವ ಆಸ್ಪತ್ರೆ
- ರಾಗಿಗುಡ್ಡ
- ಆರ್.ವಿ. ರಸ್ತೆ
ಈ ಮಾರ್ಗವು ಬೆಂಗಳೂರಿನ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವುದರೊಂದಿಗೆ ನಗರದ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಸುಗಮವಾಗಿಸಲಿದೆ. ಪ್ರಯಾಣಿಕರು ಈ ಹೊಸ ಸೇವೆಯನ್ನು ಬಳಸಿಕೊಂಡು ನಗರದ ಟ್ರಾಫಿಕ್ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.