Picsart 25 11 19 23 09 21 388 scaled

ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಫೈನಲ್ ಹಂತಕ್ಕೆ: ದಕ್ಷಿಣ ಜಿಲ್ಲೆಗೆ ಹೆಚ್ಚು ಆದ್ಯತೆ

Categories:
WhatsApp Group Telegram Group

ಬೆಂಗಳೂರು ದೇಶದ ತಂತ್ರಜ್ಞಾನದಲ್ಲಿ ಮುಂದುವರೆದ ನಗರ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ವೇಗವಾಗಿ ವಿಸ್ತರಿಸುತ್ತಿರುವ ಮಹಾನಗರ. ಐಟಿ, ಕೈಗಾರಿಕೆ, ಸ್ಟಾರ್ಟ್‌ಅಪ್, ಪ್ರವಾಸೋದ್ಯಮ, ಹೂಡಿಕೆ ಎಲ್ಲದರಲ್ಲಿಯೂ ನಗರವು ದಾಖಲೆ ಮಟ್ಟದ ಬೆಳವಣಿಗೆ ಕಾಣುತ್ತಿದೆ. ಆದರೆ ಈ ವೇಗಕ್ಕೆ ತಕ್ಕಂತೆ ಮೂಲಸೌಕರ್ಯವೂ ವಿಸ್ತರಿಸಬೇಕಾದ ಅಗತ್ಯ ದೊಡ್ಡ ಸವಾಲಾಗಿ ತಲೆದೋರಿದೆ. ಈಗಾಗಲೇ ಕಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಅತ್ಯಂತ ಬ್ಯುಸಿ ಏರ್‌ಪೋರ್ಟ್‌ಗಳಲ್ಲಿ ಒಂದಾಗಿ ಪರಿಣಮಿಸಿದ್ದು, ದಿನೇ ದಿನೇ ಹೆಚ್ಚುತ್ತಿರುವ ಸಂಚಾರಕ್ಕೆ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯ ತುರ್ತಾಗಿದೆ.

ಇದಕ್ಕಾಗಿ ಕರ್ನಾಟಕ ಸರ್ಕಾರ ಹಲವು ತಿಂಗಳಿಂದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಗುರುತಿಸುವ ಕಾರ್ಯವನ್ನು ನಡೆಸುತ್ತಿದ್ದು, ಕೊನೆಗೂ ಬೆಂಗಳೂರು ದಕ್ಷಿಣ ಜಿಲ್ಲಾ ಭಾಗವೇ ಆಯ್ಕೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಇದರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಬೆಂಗಳೂರು 2ನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಸ್ಥಳ ಫೈನಲ್ ಹಂತಕ್ಕೆ:

ಡಿ.ಕೆ. ಶಿವಕುಮಾರ್ ತಿಳಿಸಿದಂತೆ, ಸರ್ಕಾರ ಮೂರು ಸ್ಥಳಗಳನ್ನು ಪರಿಶೀಲಿಸಿದ ಬಳಿಕ, ಹವಾಮಾನ, ಸಂಪರ್ಕ, ಭೂಮಿ ಲಭ್ಯತೆ, ಭವಿಷ್ಯದ ವಿಸ್ತರಣೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ದಕ್ಷಿಣ ಬೆಂಗಳೂರು ಸೂಕ್ತವೆಂದು ಕಂಡು ಬಂದಿದೆ. ಶೀಘ್ರದಲ್ಲೇ ಈ ಬಗ್ಗೆ ಅಂತಿಮ ಘೋಷಣೆ ಅಧಿಕೃತವಾಗಿ ಬಿಡುಗಡೆಯಾಗಲಿದೆ.

1.5 ಲಕ್ಷ ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿ ಯೋಜನೆ:

ಡಿ.ಕೆ. ಶಿವಕುಮಾರ್ ತಿಳಿಸಿರುವಂತೆ ನಗರ ಪರಿವರ್ತನೆಗೆ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದರು, 1.5 ಲಕ್ಷ ಕೋಟಿ ರೂ. ಮೂಲಸೌಕರ್ಯಕ್ಕೆ ಮೀಸಲು, 41 ಕಿಮೀ ಡಬಲ್ ಡೆಕ್ಕರ್ ಮೆಲ್ಲೇತುವೆ, ಅವಳಿ ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್‌ಗಳು, 117 ಕಿಮೀ ಬೆಂಗುಳೂರು ಬಿಸಿನೆಸ್ ಕಾರಿಡಾರ್ ಯೋಜನೆ, ಬಿದದಿಯಲ್ಲಿ AI City ನಿರ್ಮಾಣ ಇವೆಲ್ಲವೂ ನಗರದ ಭವಿಷ್ಯ ಅಭಿವೃದ್ಧಿಗೆ ಗಟ್ಟಿಯಾದ ಅಡಿಪಾಯವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಎನ್‌ಆರ್‌ಐಗಳಿಗಾಗಿ ಪ್ರತ್ಯೇಕ ಇಲಾಖೆಯ ಘೋಷಣೆ:

ಬೆಂಗಳೂರು ಜಾಗತಿಕ ನಗರವಾಗಿರುವುದರಿಂದ ಅನಿವಾಸಿ ಭಾರತೀಯರ ಹೂಡಿಕೆ ಹೆಚ್ಚುತ್ತಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರವು ಪ್ರತ್ಯೇಕ ಎನ್‌ಆರ್‌ಐ ಇಲಾಖೆ ಸ್ಥಾಪಿಸಲು ಮುಂದಾಗಿದೆ ಎಂದು ಡಿಸಿಎಂ ಹೇಳಿದರು. ಇದರಿಂದ ಗ್ರಾಮೀಣ ಶಿಕ್ಷಣ, ಕೈಗಾರಿಕಾ ವಿಸ್ತರಣೆಗಳಿಗೂ ಆದ್ಯತೆ ನೀಡಲಾಗುತ್ತದೆ, ಗ್ರಾಮೀಣ ಮಕ್ಕಳಿಗಾಗಿ CSR ಶಾಲೆಗಳು ನಿರ್ಮಾಣ, ಬೆಂಗಳೂರಿನಿಂದಾಚೆಗೆ ಕೈಗಾರಿಕಾ ಅಭಿವೃದ್ಧಿಗೆ ಹೊಸ ಕೈಗಾರಿಕಾ ನೀತಿ, ಬಂಡವಾಳ ಹೂಡಿಕೆದಾರರಿಗೆ ಉತ್ತಮ ಪರಿಸರ ಒದಗಿಸುವ ಭರವಸೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡಿಕೆ ಶಿವಕುಮಾರ್ ಹೈಲೈಟ್ ಮಾಡಿದ ಅಂಶಗಳು ಹೀಗಿವೆ :

ಭಾರತದ ಐಟಿ ರಫ್ತಿನಲ್ಲಿ 40–45% ಪಾಲು ಬೆಂಗಳೂರಿಗೆ,
ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್ ಕಾಲೇಜುಗಳು ಇಲ್ಲಿವೆ,
ಉನ್ನತ ಮಾನವ ಸಂಪನ್ಮೂಲ, ಸ್ಟಾರ್ಟ್‌ಅಪ್ ಸಂಸ್ಕೃತಿ, ಜಾಗತಿಕ ಹೂಡಿಕೆ ಕೇಂದ್ರ,

Bengaluru Tech Summit — ಏಷ್ಯಾದ ಅತಿ ದೊಡ್ಡ ಟೆಕ್ ಸಮ್ಮೇಳನ:

ಈ ವರ್ಷ 28ನೇ ಟೆಕ್ ಸಮ್ಮೇಳನ ನಡೆಯುತ್ತಿದ್ದು, 10,000 ಸ್ಟಾರ್ಟ್‌ಅಪ್ಸ್ ಪಾಲ್ಗೊಳ್ಳುವ ನಿರೀಕ್ಷೆ ಇದೆ, 60,000ಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ, ಮೊದಲ ಬಾರಿಗೆ ಅರಮನೆ ಮೈದಾನದಿಂದ IESC ಗೆ ಸ್ಥಳಾಂತರ ಮಾಡಲಾಗಿದೆ, ಜಾಗತಿಕ ಐಟಿ ರಾಜಧಾನಿಯಾಗಿ ಬೆಂಗಳೂರಿನ ಸ್ಥಾನ ಮತ್ತಷ್ಟು ಗಟ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.

ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕದ ಪಾತ್ರ:

ಪ್ಯೂಚರೈಸ್ ಕೇವಲ ಘೋಷವಾಕ್ಯವಲ್ಲ, ಇದು ನಾಳೆಯ ಭವಿಷ್ಯದ ದಿಕ್ಕು. ಬಂಡವಾಳ ಹೂಡಿಕೆದಾರರ ಧ್ವನಿಯಾಗಿ ನಾನು ನಿಂತಿದ್ದೇನೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಬೆಂಗಳೂರು ಅಭಿವೃದ್ಧಿಯ ಹೊಸ ಅಧ್ಯಾಯ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭವಾಗಲಿದೆ. ಇದು ನಗರ ಮೂಲಸೌಕರ್ಯ, ಆರ್ಥಿಕತೆ ಹಾಗೂ ಜಾಗತಿಕ ಹೂಡಿಕೆಗಳಿಗೆ ದೊಡ್ಡ ಬದಲಾವಣೆಯುತ ನಿರ್ಣಯವಾಗಲಿದೆ. ಸರ್ಕಾರದ ಭಾರಿ ಮೂಲಸೌಕರ್ಯ ಯೋಜನೆಗಳು ನಗರವನ್ನ ಮುಂದಿನ ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ರೂಪಿಸಲಿವೆ.

WhatsApp Image 2025 09 05 at 10.22.29 AM 3

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories