ಕಾಲೇಜು ಸ್ಟೂಡೆಂಟ್ಸ್ ಗಾಗಿ ಸಕ್ಕತ್ ಸ್ಟೈಲಿಶ್ ಬೈಕ್. ಮಾರುಕಟ್ಟೆ ಯಲ್ಲಿ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಹೊಸ ಬಜಾಜ್ ಸಿಟಿ 110 ಎಕ್ಸ್ (Bajaj CT110X)!
ಮಾರುಕಟ್ಟೆಗೆ ಅದೆಷ್ಟೋ ಹೊಸ ಹೊಸ ಬೈಕ್ ಗಳು ಬಿಡುಗಡೆಯಾಗುತ್ತವೆ. ಅದರಲ್ಲೂ ಹೆಚ್ಚು CCಯುಳ್ಳ ಬೈಕ್ ಗಳಂತೂ ಇಂದು ಕಾಲೇಜ್ ಯುವಕರ ಕ್ರೇಜ್ ಆಗಿಬಿಟ್ಟಿದೆ. ದುಬಾರಿ ಬೆಲೆಯ ಬೈಕ್ (High price bike) ಗಳಾಗಿರುವುದರಿಂದ ಅವುಗಳನ್ನು ಕೊಂಡುಕೊಳ್ಳಲು ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಆದರೆ ಇದೀಗ ಕಾಲೇಜ್ ಸ್ಟೂಡೆಂಟ್ಸ್ ಗಳಿಗೆ ಉತ್ತಮ ಆಕರ್ಷಕ ಮತ್ತು ಅತಿ ಕಡಿಮೆ ಬೆಲೆಗೆ ಬೈಕೊಂದನ್ನು ಬಜಾಜ್ ಕಂಪನಿ ಬಿಡುಗಡೆ ಮಾಡಿದೆ ಅದರ ಫೀಚರ್ಸ್ ಗಳೇನು (features) ? ಅದರ ಬೆಲೆ (price) ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಉತ್ತಮ ಮೈಲೇಜ್ (mileage) ನೀಡುವ ಬೈಕ್ ಬಜಾಜ್ CT110x :

ಈ bajaj CT110x ಬೈಕ್ ಅತಿ ಕಡಿಮೆ ಬೆಲೆಗೆ ದೊರೆಯಲಿದ್ದು, ಒಂದು ಉತ್ತಮ ಸೆಗ್ಮೆಂಟ್ ಬೈಕ್ ಆಗಿದೆ. ಹಾಗೆ ಇದರ ಕಾರ್ಯಕ್ಷಮತೆ ಕೂಡ ಹೆಚ್ಚಿದೆ. ನೋಡಲು ಆಕರ್ಷಕವಾಗಿದ್,ದು ಈ ಬೈಕ್ ಒಂದು ಲೀಟರ್ ಪೆಟ್ರೋಲ್ ಗೆ (petrol) 70 ಕಿ.ಮೀ ವರೆಗೂ ಮೈಲೇಜ್ ನೀಡುತ್ತದೆ. ಹಾಗಾಗಿ ಬಹು ದೂರ ಚಲಿಸಲು ಹೆಚ್ಚಿನ ಹಣವೇನು ಬೇಕಾಗಿಲ್ಲ. ಕಾಲೇಜು ಸ್ಟೂಡೆಂಟ್ಸ್ ಗಳಿಗಾಗಿ ಹೇಳಿ ಮಾಡಿಸಿದಂತಿದೆ ಈ ಬೈಕ್.
115.45 ಸಿಸಿ ಎಂಜಿನ್ ( engine) ಹೊಂದಿರುವ ಈ ಬೈಕ್ ನಗರದ ರಸ್ತೆಗಳು ಅಥವಾ ಹಳ್ಳಿಗಳಲ್ಲಿನ ಕಲ್ಲು ಮಣ್ಣಿನ ರಸ್ತೆಗಳಲ್ಲಿ ಕೂಡ ಸಲೀಸಾಗಿ ಚಲಿಸಬಹುದು.ಹಾಗಾಗಿ ಈ ಒಂದು ಬೈಕ್ ಉತ್ತಮ ಮತ್ತು ಆಕರ್ಷಕವಾಗಿದೆ.
ಬಜಾಜ್ ಸಿಟಿ 110 ಎಕ್ಸ್ ಬೈಕ್ ನ ವೈಶಿಷ್ಟ್ಯಗಳು: (features) :
ಬಜಾಜ್ ಸಿಟಿ 110 ಎಕ್ಸ್ ಬೈಕ್ ನ ವೈಶಿಷ್ಟ್ಯಗಳು ಇತರೆ ಎಲ್ಲಾ ಬೈಕ್ ಗಳಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನವಾಗಿದ್ದು. 115.45 cc 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್, DTS-i ಎಂಜಿನ್ ಹೊಂದಿದೆ. ಬಜಾಜ್ ಸಿಟಿ 110 ಎಕ್ಸ್ ಬೈಕ್ ನ ಟಾರ್ಕ್ 7500 rpm ನಲ್ಲಿ 8.6 PS ಮತ್ತು 7000 rpm ನಲ್ಲಿ 9.81 nm ನ ಟ್ರಾಕ್ ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ 170mm ನಷ್ಟಿದೆ. 130mm ಫ್ರಂಟ್ ಡ್ರಮ್ ಬ್ರೇಕ್ ಮತ್ತು 110mm ಹಿಂಭಾಗದ ಡ್ರಮ್ ಬ್ರೇಕ್ ಹೊಂದಿರುವ ಈ ಬೈಕ್ ನ ಸಿಬಿಎಸ್ (ಸಂಯೋಜಿತ ಬ್ರೇಕಿಂಗ್ ಸಿಸ್ಟಮ್) ಹಿಂದಿನ ಚಕ್ರದಲ್ಲಿ ಹಾಗೂ ಎಸ್‌ಎನ್‌ಎಸ್ ಹಿಂಭಾಗದ ಸಸ್ಪೆನ್ಷನ್ ನಲ್ಲಿದೆ.ಆಧುನಿಕ ಹೆಡ್‌ಲೈಟ್‌ಗಳು, ಟೈಲ್‌ಲೈಟ್‌ಗಳು ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಳನ್ನೂ ಕೂಡ ಹೊಂದಿದೆ.
ಬಜಾಜ್ CT110X ಬೆಲೆಯನ್ನು (price) ನೋಡುವುದಾದರೆ :
ಬಜಾಜ್ CT110X ನ ಆರಂಭಿಕ ಬೆಲೆ ಸುಮಾರು ₹59,626 ಆಗಿರುತ್ತದೆ. ಹಾಗೆಯೇ ನಿಮ್ಮ ಆಯ್ಕೆಯ ರೂಪಾಂತರದ (series) ಮೇಲೆ ಬೈಕಿನ ಬೆಲೆಯು ನಿಗದಿಯಾಗಿರುತ್ತದೆ. ಬಜಾಜ್ ಕಂಪನಿಯ ಸಿಟಿ 110 ಎಕ್ಸ್ ಬೈಕ್ ನಲ್ಲಿರುವ ರೂಪಾಂತರಗಳಲ್ಲಿ ನಿಮಗೆ ಯಾವ ಬೈಕ್ ಬೇಕು ಅದನ್ನೇ ಆರಿಸಿಕೊಳ್ಳಿ. ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಇದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




