ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಚೇತಕ್ (Bajaj Chetak) ಗೇಮ್ ಚೇಂಜರ್ ಎಲೆಕ್ಟ್ರಿಕ್ ಸ್ಕೂಟರ್.
ಬಜಾಜ್ ಆಟೋ ಲಿಮಿಟೆಡ್ (bajaj auto limited) ಭಾರತೀಯ ದ್ವಿಚಕ್ರ ವಾಹನ ಮತ್ತು ಮೂರು ದ್ವಿಚಕ್ರ ತಯಾರಿಕಾ ಕಂಪನಿಯಾಗಿದೆ. ಬಜಾಜ್, ಸೈಕಲ್, ಸ್ಕೂಟರ್ ಮತ್ತು ಆಟೋ ರಿಕ್ಷಾಗಳನ್ನು ತಯಾರಿಸುತ್ತದೆ ಮತ್ತು ಮಾರುತ್ತದೆ. ಬಜಾಜ್ ಆಟೋ ಬಜಾಜ್ ಸಮೂಹದ ಒಂದು ಭಾಗವಾಗಿದೆ. ಬಜಾಜ್ ಆಟೋ ಇದೀಗ ಹಲವಾರು ತಂತ್ರಜ್ಞಾನ (technology) ಅಳವಡಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ತನ್ನ ಹೊಸ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ (bajaj electric scooter) ಅನ್ನು ಬಿಡುಗಡೆ ಮಾಡಿದೆ.
ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಚೇತಕ್ (Chetak) ಗೇಮ್ ಚೇಂಜರ್ ಎಲೆಕ್ಟ್ರಿಕ್ ಸ್ಕೂಟರ್(electric scooter) :
ಬಜಾಜ್ ಆಟೋ (Bajaj Auto) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಎಂದು ಗುರುತಿಸಿಕೊಂಡು, ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಗೊಳಿಸಿರುವ ಚೇತಕ್ (Chetak) ಗೇಮ್ ಚೇಂಜರ್ ಎಲೆಕ್ಟ್ರಿಕ್ ಸ್ಕೂಟರ್. ಅತೀ ಹೆಚ್ಚು ಖರೀದಿ ಆಗಿರುವ ಸ್ಕೂಟರ್ ಗಳಲ್ಲಿ ಒಂದಾಗಿದೆ. ಗ್ರಾಹಕರು ಹೆಚ್ಚು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದುವರೆಗೆ ಅತೀ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ :
ಜನವರಿ 2020ರಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸಲಾಗಿತ್ತು. ಕೋವಿಡ್- 19ನಿಂದ ಮಾರಾಟ ಪ್ರಮಾಣ ತೀವ್ರತರವಾಗಿ ಕುಸಿತವಾಗಿತ್ತು. ಸಾಕಷ್ಟು ಏಳು ಬೀಳುಗಳ ನಡುವೆಯೂ ಜೂನ್ 2024ರವರೆಗೆ ಸುಮಾರು 2 ಲಕ್ಷ ಯುನಿಟ್ ಚೇತಕ್ ಸ್ಕೂಟರ್‌ಗಳು ಮಾರಾಟವಾಗಿದ್ದವು. ಪ್ರಸ್ತುತ ದೇಶೀಯವಾಗಿ ಈ ಚೇತಕ್ ಎಲೆಕ್ಟ್ರಿಕ್ ಹಲವು ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ ಚೇತಕ್ 3201 ಸ್ಪೆಷಲ್ ಎಡಿಷನ್, ಚೇತಕ್ 2901, ಅರ್ಬೇನ್ ಹಾಗೂ ಪ್ರೀಮಿಯಂ.
ಬಜಾಜ್ ಚೇತಕ್ 3201 (bajaj chethak 3201) :
ಬಜಾಜ್ ಚೇತಕ್ 3201 ಸ್ಪೆಷಲ್ ಎಡಿಷನ್ ರೂಪಾಂತರ ಮಾರಾಟಕ್ಕೆ ಬಜಾಜ್ ಒಂದು ರೂಪಾತರವಾಗಿದ್ದು, ಇದು 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 136 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 73 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇದರ ಬೆಲೆ ರೂ.1.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಬಜಾಜ್ ಚೇತಕ್ 2901 (bajaj chethak 2901) :
ಬಜಾಜ್ ಚೇತಕ್ 2901 ರೂಪಾಂತರವು 2.88 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 123 ಕಿಲೋಮೀಟರ್ ಕ್ರಮಿಸುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಅಜೂರ್ ಬ್ಲೂ, ಸೈಬರ್ ವೈಟ್, ಎಬೊನಿ ಬ್ಲಾಕ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ. ಇದು ರೂ.95,998 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.
ಬಜಾಜ್ ಚೇತಕ್ ಪ್ರೀಮಿಯಂ (bajaj chetak premiem) :
ಬಜಾಜ್ ಚೇತಕ್ ಪ್ರೀಮಿಯಂ ರೂಪಾಂತರವು 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 127 ಕಿಲೋಮೀಟರ್ ಓಡುತ್ತದೆ. 73 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ 3.15 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗಗುತ್ತದೆ. ಹಾಗು ಇದರ ರೂ.1.47 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ.
ಬಜಾಜ್ ಚೇತಕ್ ಅರ್ಬೇನ್ (bajaj chetak urban) :
ಬಜಾಜ್ ಚೇತಕ್ ಅರ್ಬೇನ್ ರೂಪಾಂತರವು 2.9 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 113 ರಿಂದ 127 ಕಿಲೋಮೀಟರ್ ಕ್ರಮಿಸುತ್ತದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್ ಶೇಕಡ 0-80% ಚಾರ್ಜ್ ಆಗಲು ಸುಮಾರು 3.15 ಗಂಟೆ ತೆಗೆದುಕೊಳ್ಳುತ್ತದೆ. ಇದರ ಎಕ್ಸ್ ಶೋರೂಂ
ಬೆಲೆ ರೂ.1.23 ಲಕ್ಷ ವಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




