Picsart 25 10 09 23 01 29 279 scaled

ಹದಿಹರೆಯದವರಲ್ಲೇ ಹೆಚ್ಚುತ್ತಿರುವ ಬೆನ್ನು ಹಾಗೂ ಸೊಂಟ ನೋವು!. ಇದಕ್ಕೆ ಪರಿಹಾರ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

Categories:
WhatsApp Group Telegram Group

ಈಗಿನ ವೇಗದ ಯುಗದಲ್ಲಿ ತಂತ್ರಜ್ಞಾನ ನಮ್ಮ ಜೀವನದ ಭಾಗವಾಗಿರುವಂತೆ, ಸ್ಮಾರ್ಟ್‌ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ದೀರ್ಘ ಸಮಯ ಕುಳಿತು ಕೆಲಸ ಮಾಡುವುದು ಸಹಜವಾಗಿದೆ. ಕೆಲಸದ ಒತ್ತಡ, ಚಟುವಟಿಕೆಯ ಕೊರತೆ, ತಪ್ಪಾದ ಭಂಗಿ, ನಿತ್ಯದ ಚಿಕ್ಕಪುಟ್ಟ ತಪ್ಪು ಅಭ್ಯಾಸಗಳು, ಇವೆಲ್ಲವೂ ನಿಧಾನವಾಗಿ ದೇಹದ ಬೆನ್ನೆಲುಬಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿವೆ. ಅದರ ಪರಿಣಾಮವಾಗಿ, ವಯಸ್ಸು ನೋಡದೇ  ಹದಿಹರೆಯದವರಿಂದ ಹಿಡಿದು ಹಿರಿಯರ ತನಕ ಅನೇಕರು ಬೆನ್ನು ಹಾಗೂ ಸೊಂಟದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸ್ಪೈನ್ ಸರ್ಜನ್ ಡಾ. ಈಶ್ವರ್ ಕೀರ್ತಿಯವರ ಪ್ರಕಾರ ಬಹುತೇಕ ಜನರಲ್ಲಿ ಕಾಣಸಿಗುವ ಬೆನ್ನು ಹಾಗೂ ಸೊಂಟ ನೋವಿನ ಸಮಸ್ಯೆಯನ್ನು ಗಾಯ ಎಂದು ಪರಿಗಣಿಸಿರುತ್ತಾರೆ, ಆದರೆ ಇದಕ್ಕೆ ದಿನನಿತ್ಯದ ಜೀವನ ಶೈಲಿಯೇ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ. ಈ ರೀತಿಯ ನೋವುಗಳನ್ನು ಸರಳ ಬದಲಾವಣೆಗಳ ಮೂಲಕ ತಡೆಯಬಹುದು ಎಂಬುದಾಗಿ ಸಲಹೆ ಕೂಡ ನೀಡಿದ್ದಾರೆ. ಹಾಗಾದರೆ  ಬೆನ್ನುನೋವಿಗೆ ಕಾರಣವಾಗುವ ಪ್ರಮುಖ ಅಭ್ಯಾಸಗಳು ಯಾವುವು? ಅವುಗಳನ್ನು ತಡೆಯಲು ಇರುವ ಪರಿಣಾಮಕಾರಿ ಪರಿಹಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದೀರ್ಘಕಾಲದವರೆಗೆ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು:

ಕಂಪ್ಯೂಟರ್ ಅಥವಾ ಫೋನ್ ಪರದೆಗೆ ಬಾಗಿ ಗಂಟೆಗಳ ಕಾಲ ಕುಳಿತುಕೊಳ್ಳುವುದು ಸ್ಟೈನಲ್ ಡಿಸ್ಕ್‌ಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ. ಇದರಿಂದ ಸ್ನಾಯುಗಳು ಬಿಗಿಯಾಗಿ ಬೆನ್ನು ಹಾಗೂ ಸೊಂಟ ನೋವಿಗೆ ಕಾರಣವಾಗುತ್ತದೆ.
ಪರಿಹಾರ ಏನು?
ಬೆನ್ನಿಗೆ ಸರಿಯಾದ ನೆರವು ಅಥವಾ ಸಪೋರ್ಟ್‌ ಸಿಗುವಂತೆ ಕುಳಿತುಕೊಳ್ಳಿ.
ಪರದೆ ಕಣ್ಣಿನ ಮಟ್ಟದಲ್ಲಿ ಇರಲಿ.
ಪ್ರತಿ 30–40 ನಿಮಿಷಕ್ಕೆ 1–2 ನಿಮಿಷ ಸ್ಟ್ರೆಚ್ ಬ್ರೇಕ್ ತೆಗೆದುಕೊಳ್ಳಿ.

ಟೆಕ್ಸ್ಟ್ ನೆಕ್ ಸಮಸ್ಯೆ:

ಮೊಬೈಲ್ ಫೋನ್ ನೋಡಲು ಕುತ್ತಿಗೆಯನ್ನು ಬಾಗಿಸುವ ಅಭ್ಯಾಸದಿಂದ ಸರ್ವೈಕಲ್ ಸ್ಪೈನ್ ಮೇಲೆ 25 ಕೆ.ಜಿ. ಒತ್ತಡ ಬೀಳುತ್ತದೆ. ಇದರಿಂದ ಕುತ್ತಿಗೆ, ಭುಜ ಹಾಗೂ ಬೆನ್ನು ಭಾಗದಲ್ಲಿ ನೋವು ಕಾಣಿಸುತ್ತದೆ. ಈಗ ಹದಿಹರೆಯದವರಲ್ಲೂ ಈ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ.
ಪರಿಹಾರ ಏನು?:
ಫೋನ್ ಕಣ್ಣಿನ ಮಟ್ಟದಲ್ಲಿ ಹಿಡಿದುಕೊಳ್ಳಿ.
ಆಗಾಗೆ ಕುತ್ತಿಗೆಯನ್ನು ನಿಧಾನವಾಗಿ ತಿರುಗಿಸುವ ವ್ಯಾಯಾಮ ಮಾಡಿ.

ಮನೆ ಕೆಲಸ ಮಾಡುವ ವೇಳೆ ತಪ್ಪಾದ ಭಂಗಿ:

ಅಡುಗೆ, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಅಥವಾ ಹಾಸಿಗೆ ಸರಿಪಡಿಸುವಾಗ ಸರಿಯಾದ ಭಂಗಿ ಕಾಪಾಡದೇ ಕೆಲಸ ಮಾಡುವುದರಿಂದ ಬೆನ್ನು ಮೂಳೆಗೆ ಹಾನಿ ಆಗಬಹುದು.
ಪರಿಹಾರ ಏನು?:
ಸಿಂಕ್ ಅಥವಾ ಸ್ಟವ್ ಹತ್ತಿರ ನಿಂತುಕೊಂಡು, ಒಂದು ಕಾಲು ಸಣ್ಣ ಸ್ಟೂಲ್ ಮೇಲೆ ಇಟ್ಟು ಕೆಲಸ ಮಾಡಿ.
ನೆಲ ಒರೆಸುವಾಗ ಉದ್ದ ಹಿಡಿಕೆಯ ಸಾಧನ ಬಳಸಿ.
ಭಾರವಾದ ವಸ್ತುಗಳನ್ನು ಎತ್ತುವಾಗ ಮೊಣಕಾಲು ಬಾಗಿಸಿ ಹತ್ತಿರದಿಂದ ಎತ್ತಿ.
ತಗ್ಗು ಪ್ರದೇಶದಲ್ಲಿ ಕೆಲಸ ಮಾಡುವಾಗ ಸ್ಕ್ವಾಟ್ ಅಥವಾ ಮಂಡಿಯೂರಿ ಮಾಡಿ.

ತಪ್ಪಾದ ನಿದ್ದೆಯ ಭಂಗಿ:

ಸರಿಯಾದ ಬೆಂಬಲ ನೀಡದ ಹಾಸಿಗೆ ಅಥವಾ ದಿಂಬುಗಳು ಬೆಳಿಗ್ಗೆ ಎದ್ದಾಗ ಬೆನ್ನು ನೋವಿಗೆ ಕಾರಣವಾಗುತ್ತವೆ.
ಪರಿಹಾರ ಏನು?
ಬೆನ್ನಿನ ಮೇಲೆ (ಅಂಗಾತ) ಅಥವಾ ಪಕ್ಕಕ್ಕೆ ಒರಗಿ ಮಲಗಿ, ಹೊಟ್ಟೆಯ ಮೇಲೆ ಭಾರ ಹಾಕಿ ಮಲಗಬೇಡಿ.
ಹಾಸಿಗೆ ದೇಹದ ರಚನೆಗೆ ಹೊಂದುವಂತಿರಲಿ.
ಕುತ್ತಿಗೆ ದೇಹಕ್ಕೆ ಸಮನಾಗಿರಲಿ.

ಸ್ನಾಯು ದುರ್ಬಲತೆ:

ಬೆನ್ನು ಮೂಳೆ ಕೋರ್ ಸ್ನಾಯುಗಳ ಮೇಲೆ ಅವಲಂಬಿತವಾಗಿರುತ್ತದೆ. ಸ್ನಾಯುಗಳು ದುರ್ಬಲವಾದರೆ ಭಾರ ನೇರವಾಗಿ ಮೂಳೆ ಹಾಗೂ ಡಿಸ್ಕ್ ಮೇಲೆ ಬೀಳುತ್ತದೆ.
ಪರಿಹಾರ ಏನು?
ಪ್ಲಾಂಕ್ಸ್ (30 ಸೆಕೆಂಡು, 3 ಬಾರಿ)
ಬ್ರಿಡ್ಜ್‌ಸ್ (10 ಬಾರಿ, 3 ಸೆಟ್)
ಬರ್ಡ್-ಡಾಗ್ ಸ್ಟ್ರೆಚ್ (10 ಬಾರಿ, 3 ಸೆಟ್)
ಪೆಲ್ವಿಕ್ ಟಿಲ್ಸ್ (10 ನಿಧಾನ ಪುನರಾವರ್ತನೆ)
ವಾರದಲ್ಲಿ ಒಮ್ಮೆ 1 ಗಂಟೆ ವ್ಯಾಯಾಮ ಮಾಡುವುದಕ್ಕಿಂತ, ನಿತ್ಯ 10 ನಿಮಿಷ ಮಾಡುವುದೇ ಹೆಚ್ಚು ಪರಿಣಾಮಕಾರಿ.

ನಿತ್ಯ ವ್ಯಾಯಾಮದ ಮಹತ್ವವೇನು?:

ನಿತ್ಯ ವ್ಯಾಯಾಮದಿಂದ ಸ್ಟೈನಲ್ ಡಿಸ್ಕ್ ಆರೋಗ್ಯ ಕಾಪಾಡಿಕೊಳ್ಳಬಹುದು, ಸ್ನಾಯು ಬಲ ಹೆಚ್ಚುತ್ತದೆ ಹಾಗೂ ಭಂಗಿ ಸರಿಯಾಗುತ್ತದೆ.
ಯೋಗ -ದೇಹದ ನಮ್ಯತೆ ಹಾಗೂ ಭಂಗಿಯ ಅರಿವನ್ನು ಹೆಚ್ಚಿಸುತ್ತದೆ.
ವೇಗದ ವಾಕಿಂಗ್ – ರಕ್ತ ಸಂಚಾರ ಹೆಚ್ಚಿಸುತ್ತದೆ.
ಸ್ಟೆಚಿಂಗ್ – ದೀರ್ಘ ಕಾಳ ಕುಳಿತ ಬಳಿಕ ಸ್ನಾಯು ಸೆಳೆತ ತಡೆಗಟ್ಟಲು ನೆರವಾಗುತ್ತದೆ.
ಪ್ರತಿ ಗಂಟೆಗೆ 2 ನಿಮಿಷ ನಿಂತು ನಡೆಯುವುದು, ಕೈ ಮೇಲಕ್ಕೆ ಎತ್ತಿ ಸ್ಟ್ರೆಚ್ ಮಾಡುವುದು, ಭುಜ ತಿರುಗಿಸುವುದು ಉತ್ತಮ ಅಭ್ಯಾಸ.

ಕೆಳಗಿನ ಲಕ್ಷಣಗಳನ್ನು ಕಡೆಗಣಿಸಬೇಡಿ?:

ಬೆನ್ನು ನೋವನ್ನು ಸಾಮಾನ್ಯ ಎಂದು ಕಡೆಗಣಿಸುವುದು ತಪ್ಪು.
2 ವಾರಕ್ಕಿಂತ ಹೆಚ್ಚು ನೋವು ಮುಂದುವರಿದರೆ
ನೋವು ಕಾಲು/ಕೈಗೆ ಹರಡುತ್ತಿದ್ದರೆ
ಅಶಕ್ತತೆ, ಸ್ಪರ್ಶ ಜ್ಞಾನ ಇಲ್ಲದೇ ಇರುವುದು, ನಿದ್ದೆಗೆ ಸಮಸ್ಯೆ ಉಂಟಾದಲ್ಲಿ ತಕ್ಷಣ ವೈದ್ಯರನ್ನ ಭೇಟಿ ಮಾಡಿ.

ಒಟ್ಟಾರೆಯಾಗಿ, ನಿತ್ಯದ ಚಿಕ್ಕ ಚಿಕ್ಕ ಅಭ್ಯಾಸಗಳು ವರ್ಷಗಳ ನಂತರ ಡಿ-ಜನರೇಟಿವ್ ಡಿಸ್ಕ್ ರೋಗ, ನರ ಸಂಕುಚಿತಗೊಳ್ಳುವಿಕೆ ಮತ್ತು ನಿರಂತರ ನೋವಿಗೆ ಕಾರಣವಾಗಬಹುದು. ಆದರೆ ನಿಯಮಿತ ವ್ಯಾಯಾಮ, ಸರಿಯಾದ ಭಂಗಿ ಮತ್ತು ಜಾಗೃತಿಯಿಂದ ಬೆನ್ನುಮೂಳೆಯ ಆರೋಗ್ಯವನ್ನು ಜೀವನಪರ್ಯಂತ ಕಾಪಾಡಬಹುದು. ದುಬಾರಿ ಚಿಕಿತ್ಸೆಗಳಿಗಿಂತ, ದೈನಂದಿನ ಚಟುವಟಿಕೆಗಳಲ್ಲಿ ಕ್ರಮಬದ್ಧತೆ ಹಾಗೂ ಶಿಸ್ತು ಮುಖ್ಯ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories