ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಎಲೆಕ್ಟ್ರಿಕ್ ಓನ್ (Electric one) ಸ್ಕೂಟರ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಗುಜರಾತ್ ನ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಿಕಾ ಸಂಸ್ಥೆಯಾದ ಎಲೆಕ್ಟ್ರಿಕ್ ಓನ್ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಓನ್ ಸರಣಿಯಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ E 1Astro pro ಮತ್ತು E 1 Astro pro 10 ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದೆ.
Astro Pro ಮತ್ತು Astro Pro 10 ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿವರಗಳು :
Astro Pro ಮತ್ತು Astro Pro 10 ಎಲೆಕ್ಟ್ರಿಕ್ ಸ್ಕೂಟರ್‌ಗಳು ವಿವಿಧ ಅಂಶಗಳಲ್ಲಿ ಒಂದೇ ರೀತಿಯ ವಿಶೇಷಣಗಳನ್ನು ಹೊಂದಿವೆ.
ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳು 2400 W ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರುತ್ತವೆ ಮತ್ತು ಆದರ ಜೊತೆಗೆ 65 kmph ವೇಗವನ್ನು ಹೊಂದಿವೆ.
ಇವೆರಡೂ ಸಹ 2.99 ಸೆಕೆಂಡುಗಳಲ್ಲಿ 0 ರಿಂದ 40 kmph ವರೆಗೆ ಸ್ಪ್ರಿಂಟ್ ಮಾಡುತ್ತವೆ.
ಸ್ಕೂಟರ್‌ಗಳು 72 V ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ.
ಈ ಸ್ಕೂಟರ್ ಗಳನ್ನು ಸುಮಾರು 3-4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.
ಆದರೆ Astro pro ಮತ್ತು Astro pro 10 ಎಲೆಕ್ಟ್ರಿಕ್ ಸ್ಕೂಟರ್ ಗಳ ವ್ಯತ್ಯಾಸಗಳು ಬಹಳ ವೈಶಿಷ್ಟದೊಂದಿಗೆ ಹೊರ ಬಂದಿವೆ.
ಎಲೆಕ್ಟ್ರಿಕ್ ಒನ್ ಹೇಳುವಂತೆ ಆಸ್ಟ್ರೋ ಪ್ರೊ (Astro pro)ಒಂದೇ ಚಾರ್ಜ್‌ನಲ್ಲಿ 100 km ಪ್ರಮಾಣೀಕೃತ ಶ್ರೇಣಿಯನ್ನು ಹೊಂದಿದೆ.
ಆಸ್ಟ್ರೋ ಪ್ರೊ 10(Astro pro 10) ಸ್ವಲ್ಪ ಹೆಚ್ಚು ಅಂದರೆ 120 km ವ್ಯಾಪ್ತಿಯನ್ನು ನೀಡುತ್ತದೆ.
ಅಡ್ವೆಂಚರ್ ಎಸ್ ಬ್ಯಾಟರಿಯೊಂದಿಗೆ,(Adventure S battery) ಆಸ್ಟ್ರೋ ಪ್ರೊ 10 (Astro pro 10) ತನ್ನ ವ್ಯಾಪ್ತಿಯನ್ನು ಇನ್ನೂ 200 km ವರೆಗೆ ವಿಸ್ತರಿಸುತ್ತದೆ. ಆದರೆ ಅದೇ ಚಾರ್ಜಿಂಗ್ ವಿಷಯದಲ್ಲಿ, ಆಸ್ಟ್ರೋ ಪ್ರೊ(Astro pro) 72V 8 AMP ಚಾರ್ಜರ್‌ನೊಂದಿಗೆ ಚಾಲಿತವಾಗುತ್ತದೆ.
Astro Pro 10 ಹೆಚ್ಚು ಶಕ್ತಿಶಾಲಿ 72V 10 AMP ಚಾರ್ಜರ್ ದೊಂದಿಗೆ ಚಾಲಿತವಾಗುತ್ತದೆ.
ಎಲೆಕ್ಟ್ರಿಕ್ ಓನ್ ಸರಣಿಯ Astro Pro ಮತ್ತು Astro Pro 10 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ(price) ಮತ್ತು ಲಭ್ಯತೆ:
E1 ಆಸ್ಟ್ರೋ ಪ್ರೊ(Astro pro) ರೂ 1.00 ಲಕ್ಷದ ವರೆಗೂ ಬರುತ್ತದೆ.
E1 ಆಸ್ಟ್ರೋ ಪ್ರೊ 10. (Astro pro 10 ) ರೂ 1.25 ಲಕ್ಷದ ಸ್ವಲ್ಪ ಹೆಚ್ಚಿನ ಸ್ಟಿಕ್ಕರ್ ಬೆಲೆಯೊಂದಿಗೆ ಬರುತ್ತದೆ.
ಎಲ್ಲಾ ಬೆಲೆಗಳು ಎಕ್ಸ್ ಶೋರೂಂನಂತಯೆ ಇರುತ್ತವೆ.
ಎರಡೂ ಸ್ಕೂಟರ್‌ಗಳು ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತವೆ:
ರೆಡ್ ಬೆರ್ರಿ
ಬ್ಲೇಜ್ ಆರೆಂಜ್
ಎಲಿಗಂಟ್ ವೈಟ್
ಮೆಟಾಲಿಕ್ ಗ್ರೇ ಮತ್ತು
ರೇಸಿಂಗ್ ಗ್ರೀನ್
ನೀವೇನಾದರೂ ಒಂದು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟಿಯನ್ನು ಹುಡುಕುತ್ತಿದ್ದರೆ ಇದು ಒಂದು ಉತ್ತಮ ಆಯ್ಕೆ ಎನ್ನಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







