WhatsApp Image 2025 10 06 at 1.49.58 PM

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಕ್ವಿಂಟಲ್‌ಗೆ ಬರೋಬ್ಬರಿ ₹65,000 ಗಡಿ ದಾಟಿದ ಅಡಿಕೆ ಬೆಲೆ.!

Categories:
WhatsApp Group Telegram Group

ಒಂದು ವಾರದಿಂದ ಅಡಿಕೆ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಅಡಿಕೆ ದರ ₹ 65,000 ಗಡಿ ದಾಟಿ ದಾಖಲೆ ಮಟ್ಟಕ್ಕೆ ತಲುಪಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಚನ್ನಗಿರಿ ತಾಲ್ಲೂಕಿನಲ್ಲಿ ಸುಮಾರು 36,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಇತ್ತೀಚೆಗೆ ತುಮ್ಕೋಸ್ ಮಾರುಕಟ್ಟೆಯಲ್ಲಿ ನಡೆದ ವಹಿವಾಟಿನಲ್ಲಿ ಅಡಿಕೆಯ ಕನಿಷ್ಠ ದರ ₹ 59,000 ಮತ್ತು ಗರಿಷ್ಠ ದರ ₹ 65,069 ರಂತೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಡಿಕೆ ದರ ಕೇವಲ ₹ 49,000 ಇತ್ತು.

ದರ ಏರಿಕೆಗೆ ಕಾರಣವೇನು?

ತುಮ್ಕೋಸ್ ಅಧ್ಯಕ್ಷರಾದ ಎಚ್.ಎಸ್. ಶಿವಕುಮಾರ್ ಅವರ ಪ್ರಕಾರ, ಮಾರುಕಟ್ಟೆಗೆ ಹೊಸ ಅಡಿಕೆಯ ಪ್ರಮಾಣ ಕಡಿಮೆಯಾಗಿರುವುದೇ ದರ ಏರಿಕೆಗೆ ಮುಖ್ಯ ಕಾರಣ. “ಹೆಚ್ಚು ಮಳೆಯಾದ ಕಾರಣ ಹೊಸ ಅಡಿಕೆ ಕೊಯ್ಲು ಮಾಡಲು ಸಾಧ್ಯವಾಗಲಿಲ್ಲ. ಕೊಯ್ಲು ಮಾಡಿದ ಅಡಿಕೆಯನ್ನು ಬೇಯಿಸಿದ ನಂತರ ಒಣಗಿಸಲು ಬೇಕಾದ ಬಿಸಿಲಿನ ಕೊರತೆಯೂ ಇತ್ತು. ಈ ಕಾರಣಗಳಿಂದ ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಉಂಟಾಗಿದ್ದು, ದರ ಹೆಚ್ಚಾಗಿದೆ” ಎಂದು ಅವರು ವಿವರಿಸಿದರು.

ಕಳೆದ ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿ ಬಿಸಿಲು ಬಂದಿದ್ದು, ರೈತರು ಅಡಿಕೆ ಕೊಯ್ಲು ಆರಂಭಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ಅಡಿಕೆಯ ಪ್ರಮಾಣ ಹೆಚ್ಚಾದರೆ ಮಾತ್ರ ಬೆಲೆಯಲ್ಲಿ ಕೊಂಚ ಇಳಿಕೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಳೆಗಾರರ ನಿರೀಕ್ಷೆ

ಹಸಿ ಅಡಿಕೆಯ ದರವೂ ಸಹ ಕ್ವಿಂಟಲ್‌ಗೆ ₹ 7,700 ತಲುಪಿರುವುದು ರೈತರಿಗೆ ಮತ್ತಷ್ಟು ಸಂತಸ ತಂದಿದೆ. ತಾಲ್ಲೂಕಿನ ಕಾಕನೂರು ಗ್ರಾಮದ ಅಡಿಕೆ ಬೆಳೆಗಾರ ಕೆ.ಸಿ. ಸತೀಶ್ ಅವರು ಮಾತನಾಡಿ, “ಮಳೆಯ ಕಾರಣದಿಂದ ಈ ಬಾರಿ ಅಡಿಕೆ ಕೊಯ್ಲು ತಡವಾಯಿತು. ಆದರೆ, ಪ್ರತಿ ಎಕರೆಗೆ 13 ರಿಂದ 15 ಕ್ವಿಂಟಲ್‌ನಷ್ಟು ಇಳುವರಿ ದೊರೆತಿದೆ. ಇಡೀ ತಿಂಗಳು ಅಡಿಕೆ ದರ ಇದೇ ರೀತಿ ಸ್ಥಿರವಾಗಿದ್ದರೆ, ಅಡಿಕೆ ಬೆಳೆಗಾರರು ನೆಮ್ಮದಿಯಾಗಿ ಬದುಕಬಹುದು” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

WhatsApp Image 2025 09 05 at 11.51.16 AM 12

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories