Picsart 25 09 28 22 05 43 0751 scaled

ವಯಸ್ಸು 30 ಆಯ್ತಾ..? ಈ ತಿಂಡಿಗಳನ್ನು ಮುಟ್ಟಲೇಬೇಡಿ.! ಆರೋಗ್ಯ ಕಾಪಾಡಲು ತಿಳಿಯಲೇಬೇಕಾದ ಮಾಹಿತಿ

Categories:
WhatsApp Group Telegram Group

ವಯಸ್ಸು 30 ದಾಟಿದ ಮೇಲೆ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಪ್ರಾರಂಭವಾಗುತ್ತವೆ. ದೇಹದ Metabolism ನಿಧಾನಗೊಳ್ಳುತ್ತದೆ, ಹಾರ್ಮೋನ್‌ಗಳಲ್ಲಿ (In Harmones) ಸ್ವಲ್ಪಸ್ವಲ್ಪ ಬದಲಾವಣೆ ಆಗುತ್ತದೆ, ಮತ್ತು ದೇಹದ ಪುನರುತ್ಪಾದನಾ ಶಕ್ತಿ ಕುಗ್ಗಲು ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ತಪ್ಪಾದ ಆಹಾರ ಪದ್ಧತಿಗಳು ದೇಹವನ್ನು ಬೇಗನೇ ಸುಸ್ತುಗೊಳಿಸುತ್ತವೆ, ಚರ್ಮದ ಹೊಳಪನ್ನು (skin glow) ಕಳೆದುಕೊಳ್ಳುತ್ತವೆ, ಜೊತೆಗೆ ಕೀಲು ನೋವು, ಮೈಕೈ ನೋವು, ಹೃದಯ ಸಂಬಂಧಿ ತೊಂದರೆಗಳು, ಮಧುಮೇಹ, ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದ್ದರಿಂದ 30ರ ಹರೆಯ ದಾಟಿದವರು ತಮ್ಮ ದಿನನಿತ್ಯದ ಆಹಾರದಲ್ಲಿ ಜಾಗ್ರತೆ ವಹಿಸಿ, ಕೆಲವು ತಿನಿಸುಗಳನ್ನು ಸಂಪೂರ್ಣವಾಗಿ ದೂರವಿಡುವುದು ಬಹಳ ಮುಖ್ಯ. ಇಲ್ಲವಾದರೆ ಹರೆಯದಲ್ಲೇ ‘ವೃದ್ಧಾಪ್ಯ’ದ ಲಕ್ಷಣಗಳು (Symptoms of old age) ಕಾಣಿಸಿಕೊಳ್ಳಬಹುದು. ಯಾವ ಆಹಾರಗಳನ್ನು ತಪ್ಪಿಸಬೇಕುಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಲೂಗಡ್ಡೆ ಚಿಪ್ಸ್(Potato Chips) :
ಚಿಪ್ಸ್ ಎಲ್ಲರಿಗೂ ಇಷ್ಟವಾದರೂ, 30ರ ನಂತರ ಇದು ದೇಹಕ್ಕೆ ವಿಷದಂತೆ ಕೆಲಸ ಮಾಡುತ್ತದೆ. ಚಿಪ್ಸ್ ತಯಾರಿಸಲು ಸಿಂಥೆಟಿಕ್ ವಸ್ತುಗಳನ್ನು ಬಳಸಲಾಗುತ್ತದೆ, ಜೊತೆಗೆ ಸೋಡಿಯಂ ಅಂಶವು (Sodium content) ಅತಿಯಾಗಿ ಇರುತ್ತದೆ. ಇದರಿಂದ ರಕ್ತದೊತ್ತಡ ಏರಿಕೆ, ಹೃದಯ ಸಂಬಂಧಿ ತೊಂದರೆಗಳು ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುತ್ತವೆ.

ಸುವಾಸನೆಯ ಮೊಸರು (Flavoured Yogurt):
ಸಾಧಾರಣ ಮೊಸರು ದೇಹಕ್ಕೆ ಶ್ರೇಷ್ಠವಾದ ಪೌಷ್ಟಿಕಾಂಶಗಳನ್ನು ನೀಡುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಫ್ಲೇವರ್ಡ್ ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಮಧುಮೇಹದ ಅಪಾಯ ಹೆಚ್ಚುತ್ತದೆ ಮತ್ತು ತೂಕವೂ (Weight) ನಿಯಂತ್ರಣದಿಂದ ತಪ್ಪುತ್ತದೆ.

ಪಾಪ್ ಕಾರ್ನ್(Pop Corn) :
ಮನೆಯಲ್ಲಾದರೂ ಅಥವಾ ಸಿನಿಮಾ ನೋಡಲು ಹೋದಾಗಲಾದರೂ ಪಾಪ್ ಕಾರ್ನ್ ತಿನ್ನುವುದು ಬಹಳ ಜನರಿಗೆ ಅಭ್ಯಾಸ. ಮನೆಯಲ್ಲೇ ಕಡಿಮೆ ಉಪ್ಪು ಮತ್ತು ಎಣ್ಣೆ (Low Salt and Oil) ಬಳಸಿ ತಯಾರಿಸಿದರೆ ಇದು ಆರೋಗ್ಯಕರವಾಗಿರಬಹುದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪಾಪ್ ಕಾರ್ನ್‌ಗಳಲ್ಲಿ ಹೆಚ್ಚಾಗಿ ಉಪ್ಪು, ಬೆಣ್ಣೆ, ಸ್ಯಾಚುರೇಟೆಡ್ ಕೊಬ್ಬು ಸೇರಿರುತ್ತದೆ. ಇದರಿಂದ ಕೊಲೆಸ್ಟ್ರಾಲ್ ಏರಿಕೆ, ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳಬಹುದು.

ಒಟ್ಟಾರೆಯಾಗಿ, 30ರ ಹರೆಯ ದಾಟಿದ ಬಳಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳನ್ನು (Lifestyle and Dietary habits) ಸರಿಪಡಿಸುವುದು ಅನಿವಾರ್ಯ. ಸಂಸ್ಕರಿತ, ಪ್ಯಾಕೇಜ್ಡ್ ಹಾಗೂ ಹೆಚ್ಚು ಉಪ್ಪು–ಸಕ್ಕರೆ ಹೊಂದಿರುವ ತಿನಿಸುಗಳನ್ನು ದೂರವಿಡಿ. ಬದಲಿಗೆ ಹಣ್ಣು, ತರಕಾರಿ, ಕಡಿಮೆ ಎಣ್ಣೆಯ ಆಹಾರಗಳನ್ನು (Fruits, vegetables, low-fat foods) ಸೇವಿಸುವುದರಿಂದ ದೇಹ ಆರೋಗ್ಯಕರವಾಗಿರುತ್ತದೆ ಮತ್ತು ವೃದ್ಧಾಪ್ಯದಲ್ಲಿ ಒಳ್ಳೆಯದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories