WhatsApp Image 2025 12 01 at 12.32.21 PM

ಕರ್ನಾಟಕದ ರೈತರಿಗೆ ಸಿಹಿ ಸುದ್ದಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗಳಿಗೆ ಅರ್ಜಿ ಆಹ್ವಾನ!

WhatsApp Group Telegram Group

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂ-ಕುಸುಮ್ ಯೋಜನೆಯ ‘ಬಿ’ ಘಟಕದ ಅಡಿಯಲ್ಲಿ ರಾಜ್ಯದ ರೈತರಿಗೆ ದೊಡ್ಡ ಅವಕಾಶ. ಈ ಯೋಜನೆಯ ಮೂಲಕ ರೈತರು ತಮ್ಮ ಕೊಳವೆ ಬಾವಿ ಅಥವಾ ತೆರದ ಬಾವಿಗಳಿಗೆ ಸಬ್ಸಿಡಿ ರಿಯಾಯಿತಿಯೊಂದಿಗೆ ಸೌರಶಕ್ತಿ ಆಧಾರಿತ ಪಂಪ್ ಸೆಟ್ಟುಗಳನ್ನು (ಸೋಲಾರ್ ಪಂಪ್-ಸೆಟ್) ಸ್ಥಾಪಿಸಬಹುದು. ಈ ಸೌಲಭ್ಯಕ್ಕಾಗಿ ಈಗ ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……..

WhatsApp Image 2025 12 01 at 12.25.28 PM

ಅರ್ಜಿ ಸಲ್ಲಿಸುವ ವಿಧಾನ:

ರೈತರು www.souramitra.com ಎಂಬ ವೆಬ್‌ ಸೈಟ್‌ ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ಪೋರ್ಟಲ್ ಮೂಲಕ ರೈತರು ಸೌರಶಕ್ತಿ ಪಂಪ್ ಸೆಟ್‌ ಗೆ ಅರ್ಜಿ ಸಲ್ಲಿಸುವುದರ ಜೊತೆಗೆ, ಅನುಮೋದಿತ ವೆಂಡರ್ ಅಥವಾ ಏಜೆನ್ಸಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕೂಡಾ ಇದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಅಧಿಕೃತ ಮಾಹಿತಿಗೆ :

ರೈತ ಸಮುದಾಯವನ್ನು ಎಚ್ಚರಿಸುವಂತೆ, ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಅಧಿಕೃತ ಮಾಹಿತಿ ಮತ್ತು ಅಧಿಸೂಚನೆಗಳನ್ನು ಕರ್ನಾಟಕ ನವೀಕರಿಸಬಹುದಾದ ಶಕ್ತಿ ಅಭಿವೃದ್ಧಿ ನಿಗಮ ಲಿಮಿಟೆಡ್ (KREDL) ವತಿಯಿಂದ www.kredi.karnataka.gov.in ವೆಬ್‌ ಸೈಟ್‌ ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ. ಅಂತೆಯೇ, ರೈತರು ಯೋಜನೆಯ ನೋಂದಣಿ, ಪಾವತಿ ಅಥವಾ ಇತರ ವಿವರಗಳಿಗೆ ಸಂಬಂಧಿಸಿದಂತೆ www.souramitra.com ಪೋರ್ಟಲ್ ಅಥವಾ KREDLನ ಸಹಾಯವಾಣಿ ಸಂಖ್ಯೆಗಳಾದ 080-22202100 ಮತ್ತು 8095132100 ಮೂಲಕ ಮಾತ್ರ ಸಂಪರ್ಕಿಸುವಂತೆ ಕೋರಲಾಗಿದೆ.

ಸುರಕ್ಷತಾ ಎಚ್ಚರಿಕೆ:

ಈ ಯೋಜನೆಯಡಿಯಲ್ಲಿ ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ರೈತರ ಮೊಬೈಲ್ ಫೋನ್ಗೆ ಬರುವ OTP (ಏಕ-ಬಾರಿ ಪಾಸ್ವರ್ಡ್) ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಈ ಸಂಖ್ಯೆಯನ್ನು ರಹಸ್ಯವಾಗಿಟ್ಟುಕೊಂಡು, ನೋಂದಣಿಯನ್ನು ರೈತರು ತಮ್ಮಿಂದ ತಾವೇ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ವಂಚನೆ ಅಥವಾ ದುರುಪಯೋಗದಿಂದ ರಕ್ಷಣೆ ನೀಡುವುದು ಎಂದು ತಿಳಿಸಿದ್ದಾರೆ.

ಯೋಜನೆಯ ಪ್ರಯೋಜನಗಳು:

ಪಿಎಂ-ಕುಸುಮ್ ಯೋಜನೆಯ ಮೂಲಕ ಸೌರಶಕ್ತಿ ಪಂಪ್‌ ಗಳನ್ನು ಸ್ಥಾಪಿಸುವ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಸಹಾಯಧನ ದೊರೆಯುತ್ತದೆ. ಇದರಿಂದ ರೈತರ ವಿದ್ಯುತ್ ಬಿಲ್ಲಿನ ಭಾರ ಕಡಿಮೆಯಾಗುವುದಲ್ಲದೆ, ಡೀಸಲ್ ಅಥವಾ ವಿದ್ಯುತ್ ಅಧಾರಿತ ಸಾಂಪ್ರದಾಯಿಕ ಪಂಪ್‌ ಗಳನ್ನು ಹೋಲಿಸಿದರೆ ದೀರ್ಘಕಾಲದಲ್ಲಿ ಸಾಕಷ್ಟು ಹಣದ ಉಳಿತಾಯವಾಗುತ್ತದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಸೌರಶಕ್ತಿ ಪಂಪ್ ದೊರಕಲಿದ್ದು, ಇದು ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಲಾಭಾಂಶವನ್ನು ಹೆಚ್ಚಿಸಲು ಸಹಾಯಕವಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories