WhatsApp Image 2025 12 13 at 5.49.27 PM

ಮತ್ತೇ 2ಜಿಲ್ಲೆಗಳಲ್ಲಿ 571 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಧಿಸೂಚನೆ ಪ್ರಕಟ ಅಪ್ಲೈ ಮಾಡಿ

Categories:
WhatsApp Group Telegram Group

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (DWCD) ಯಿಂದ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ (Anganwadi Worker) ಮತ್ತು ಸಹಾಯಕಿಯರ (Anganwadi Helper) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಈ ಮಹತ್ವದ ಅವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿ ಪ್ರಕ್ರಿಯೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ.

ಯಾವ ಹುದ್ದೆ? ಯಾವ ಜಿಲ್ಲಿಗೆ ಎಷ್ಟು? (Job Details)

ವಿವರ (Details) ಮಾಹಿತಿ (Info)
ಹುದ್ದೆ ಕಾರ್ಯಕರ್ತೆ ಮತ್ತು ಸಹಾಯಕಿ
ವಿದ್ಯಾರ್ಹತೆ ಕಾರ್ಯಕರ್ತೆ PUC ಮತ್ತು ಸಹಾಯಕಿ SSLC
ಅರ್ಜಿ ವಿಧಾನ  ಆನ್‌ ಲೈನ್ (Online)
ಕೊನೆಯ ದಿನಾಂಕ 31 ಮತ್ತು 30 ಡಿಸೆಂಬರ್ 2025
ಕೆಲಸದ ಸ್ಥಳ ಉತ್ತರ ಕನ್ನಡ ಜಿಲ್ಲೆ ಮತ್ತು ಮೈಸೂರು ಜಿಲ್ಲೆ
ಹುದ್ದೆ ಸಂಖ್ಯೆ 571 (299 ಉತ್ತರ ಕನ್ನಡ ಜಿಲ್ಲೆ, 272 ಮೈಸೂರು ಜಿಲ್ಲೆ).

ಸದ್ಯಕ್ಕೆ ಎರಡು ಪ್ರಮುಖ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  • ಉತ್ತರ ಕನ್ನಡ ಜಿಲ್ಲೆ : 299 ಹುದ್ದೆಗಳು
  • ಮೈಸೂರು ಜಿಲ್ಲೆ : 272 ಹುದ್ದೆಗಳು
  • ಒಟ್ಟು : 571 ಹುದ್ದೆಗಳು

ವಿದ್ಯಾರ್ಹತೆ ಮತ್ತು ವಯೋಮಿತಿ

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆ ಮತ್ತು ವಯೋಮಿತಿ ಈ ಕೆಳಗಿನಂತಿದೆ:

  • ಅಂಗನವಾಡಿ ಕಾರ್ಯಕರ್ತೆ ಹುದ್ದೆ: ಕನಿಷ್ಠ ದ್ವಿತೀಯ ಪಿಯುಸಿ (PUC) ಪೂರ್ಣಗೊಳಿಸಿರಬೇಕು.
  • ಅಂಗನವಾಡಿ ಸಹಾಯಕಿಯರ ಹುದ್ದೆ: ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC) ಪೂರ್ಣಗೊಳಿಸಿರಬೇಕು.
  • ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
  • ವಯೋಮಿತಿ ಸಡಿಲಿಕೆ: ಮೀಸಲು ವರ್ಗದ ಅಭ್ಯರ್ಥಿಗಳಿಗೆ 3 ರಿಂದ 5 ವರ್ಷಗಳವರೆಗೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ

  • ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್ (Merit) ಮತ್ತು ಮೀಸಲಾತಿ (Reservation) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸ್ಥಳೀಯ ಅಭ್ಯರ್ಥಿಗಳಿಗೆ ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
  • ಅರ್ಜಿ ಶುಲ್ಕ: ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅಭ್ಯರ್ಥಿಗಳು ಆಯಾ ಜಿಲ್ಲೆಗಳಿಗೆ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

  • ಉತ್ತರ ಕನ್ನಡ ಜಿಲ್ಲೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31-12-2025
  • ಮೈಸೂರು ಜಿಲ್ಲೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30-12-2025

ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾರ್ಗಸೂಚಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದುವುದು ಉತ್ತಮ.

ಪ್ರಮುಖ ದಿನಾಂಕಗಳು:

ಪ್ರಮುಖ ಲಿಂಕ್‌ಗಳು (Important Links) ಲಿಂಕ್
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಕಿಕ್‌ ಮಾಡಿ
ಅಧಿಕೃತ ಮಾರ್ಗಸೂಚಿಗಳು ಡೌನ್‌ಲೋಡ್ ಮಾಡಿ
ಅರ್ಜಿ ನಮೂನೆ ಅಪ್ಲೈ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್‌ ಮಾಡಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories