ಬೆಂಗಳೂರು: ಕನ್ನಡದ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಇಂದು ವಿವಾಹ ಬಂಧನದಲ್ಲಿ ಬಂದಿದ್ದಾರೆ. ಅನುಶ್ರೀ ಅವರ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ.
ಇದುವರೆಗೆ ಅನುಶ್ರೀ ಅವರನ್ನು ಭೇಟಿಯಾದಾಗಲೆಲ್ಲಾ ಅವರ ಅಭಿಮಾನಿಗಳು ಮತ್ತು ಮಾಧ್ಯಮದವರು “ಮದುವೆ ಯಾವಾಗ?” ಎಂದು ಕೇಳುತ್ತಿದ್ದರು. ಆ ಸಮಯಕ್ಕೆಲ್ಲಾ ‘ಸೂಕ್ತ ಹುಡುಗ ಸಿಕ್ಕಾಗ’ ಎಂದು ನಗುತ್ತಾ ಉತ್ತರಿಸುತ್ತಿದ್ದ ಅನುಶ್ರೀ ಅವರು ಕೊನೆಗೂ ರೋಷನ್ ಅವರ ಜೊತೆ ವಿವಾಹವಾದ್ದರಿಂದ ಅವರ ಈ ಸ್ವಪ್ನ ನಿಜವಾಗಿದೆ.
ನಿರೂಪಕಿ ಅನುಶ್ರೀ ಮತ್ತು ರೋಷನ್ ಅವರ ಈ ಅದ್ಭುತ ಮದುವೆಗೆ ಶಿವರಾಜ್ ಕುಮಾರ್, ರಾಜ್ ಬಿ. ಶೆಟ್ಟಿ, ಶರಣ್, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ. ಆಚಾರ್ ಸೇರಿದಂತೆ ಅನೇಕ ಸಿನಿಮಾ ಹಾಗೂ ಟಿವಿ ವಲಯದ ಹೆಸರಾಂತ ವ್ಯಕ್ತಿತ್ವಗಳು ಹಾಜರಿದ್ದು ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ತಾಳಿ ಕಟ್ಟುವ ಸಮಯದಲ್ಲಿ ಅನುಶ್ರೀ ಭಾವುಕರಾದರು. ಶಾಲಾ-ಕಾಲೇಜು ದಿನಗಳಲ್ಲಿ ಕಷ್ಟಪಟ್ಟು, ತಮ್ಮ ಶಕ್ತಿಯಿಂದಲೇ ಜೀವನ ನಡೆಸಿ, ಬೆಂಗಳೂರಿಗೆ ಬಂದು ಚಲನಚಿತ್ರ ಮತ್ತು ಕನ್ನಡ ಟಿವಿ ಉದ್ಯಮದಲ್ಲಿ ಕಷ್ಟಪಟ್ಟು ಕೆಲಸ ಗಳಿಸಿ, ಇಂದು ಒಬ್ಬ ಪ್ರಸಿದ್ಧ ನಿರೂಪಕಿಯಾಗಿ ಬೆಳೆದು ನಿಂತಿರುವ ಅನುಶ್ರೀ, ತಮ್ಮ ವೈಯಕ್ತಿಕ ಜೀವನದಲ್ಲಿ ತಾಯಿ ಮತ್ತು ತಮ್ಮನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇಷ್ಟು ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿಪರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಶ್ರೀ, ತಮ್ಮ ಮದುವೆಯ ಸಮಯದಲ್ಲಿ ಭಾವುಕರಾಗಿದ್ದರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.