ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ ಹಣ ಬಿಡುಗಡೆಯಾಗಿದ್ರು ಅದು ನಿಮ್ಮ ಖಾತೆಗೆ ಬಂದಿಲ್ಲವಾದರೆ ಮುಂದಿನ ತಿಂಗಳು ಹಣ ಪಡೆದುಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ
ಅನ್ನಭಾಗ್ಯದ ಹಣವು ಬಂದಿದೆಯೇ ಎಂದು ಈಗಲೇ ಚೆಕ್ ಮಾಡಿ :
ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮಕ್ಕೆ ಚಾಲನೆ ನೀಡಿ ಫಲನುಭವಿಗಳ ಖಾತೆ ಹಣ ವರ್ಗಾವಣೆ ಮಾಡಿದರು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದೇವೆಯೇ?, ಎಷ್ಟು ಹಣ ಬಂದಿದೆ?, ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿಯಲು ಸರ್ಕಾರವು ಒಂದು ಅಧಿಕೃತ ಜಾಲತಾಣ(ವೆಬ್ಸೈಟ್)ವನ್ನು ಬಿಡುಗಡೆ ಮಾಡಿದೆ.
1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣ ವರ್ಗಾವಣೆ:
ಅನ್ನಭಾಗ್ಯ ಯೋಜನೆ (Annabhagya Scheme) ಅಡಿ ಈವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಅಂತ ಆಹಾರ ಸಚಿವ ಮುನಿಯಪ್ಪ (KH Muniyappa) ತಿಳಿಸಿದ್ದಾರೆ.
ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ (Ration Card) ಕುಟುಂಬಗಳಲ್ಲಿ 4.42. ಕೋಟಿ ಫಲಾನುಭವಿಗಳು ಇದ್ದಾರೆ. ಈವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಅಂತ ಮಾಹಿತಿ ನೀಡಿದರು.
ಹಣ ಬಿಡುಗಡೆ ಆದ್ರೂ ಬಂದಿಲ್ವಾ? ಕೆಳಗಿನ ಟಿಪ್ಸ್ ಫಾಲೋ ಮಾಡಿ.
28 ಲಕ್ಷ ಕುಟುಂಬಗಳಲ್ಲಿ ಕಳೆದ 3 ತಿಂಗಳಲ್ಲಿ ಒಂದೂ ತಿಂಗಳು ಪಡಿತರ ಪಡೆದಿಲ್ಲ. 5,32,349 ಫಲಾನುಭವಿಗಳಿ ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಸದಸ್ಯರು ಇದ್ದಾರೆ. 3,40,425 ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ. 19,27,225 ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಆಗಿಲ್ಲ ಮತ್ತು ಅನರ್ಹ ಪಡಿತರ ಚೀಟಿ ಆಗಿವೆ. ಇವರಿಗೆ ಹಣ ಖಾತೆಗೆ ಹಾಕಿಲ್ಲ ಅಂತ ಮಾಹಿತಿ ನೀಡಿದರು.
ಇನ್ನು ಕೆಲವರ ಖಾತೆಗೆ ಮಾತ್ರ ಈ ಹಣ ಬಂದಿಲ್ಲ. ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯು ಇಲ್ಲ. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಲಿಂಕ್ ಆಗಿದ್ದರೂ ಕೂಡ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಎನ್ನುವ ಆತಂಕ ಹಲವರಲ್ಲಿ ಸೃಷ್ಟಿಯಾಗಿದೆ.
ಮೊದಲನೇದಾಗಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕಿ ಕಳೆದ ತಿಂಗಳ ಅನ್ನಭಾಗ್ಯದ ಹಣದ ಸ್ಥಿತಿ ಏನಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಹೇಗೆ ತಿಳಿದುಕೊಳ್ಳಬೇಕು ಎಂಬುದನ್ನು ಕೆಳಗೆ ಕೊಡಲಾಗಿದೆ ದಯವಿಟ್ಟು ಒಮ್ಮೆ ನೋಡಿ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇದ್ದಲ್ಲಿ ಬ್ಯಾಂಕಿಗೆ ಹೋಗಿ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು. ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿನೂ ಸಹಿತ ದುಡ್ಡು ಬರದೇ ಇದ್ದಲ್ಲಿ, ನಿಮ್ಮ ರೇಷನ್ ಕಾರ್ಡಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅಂದರೆ e-kyc ಆಗಿರಬೇಕು ಆದ್ದರಿಂದ ನಿಮ್ಮ ಆಹಾರ ಇಲಾಖೆಯ ಸೇವಾ ಕೇಂದ್ರಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ನಿಮಗೆ ನೆನಪಿರಲಿ ಸರ್ಕಾರ ಮೊದಲೇ ತಿಳಿಸಿರುವಂತೆ ನಿಮ್ಮ ಬಿಪಿಎಲ್ ಅಥವಾ ಅಂತೋದಯ ರೇಷನ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಇರುವ ಆಧಾರ ಜೋಡಣೆ ಆಗದೇ ಇರುವ ಪಕ್ಷದಲ್ಲಿ ನಿಮಗೆ ಹಣ ಬರಲು ಸಾಧ್ಯವಿಲ್ಲ. ಹಾಗಾಗಿ ಅನ್ನಭಾಗ್ಯ ಹಣದ ಸ್ಟೇಟಸ್ ಅನ್ನು ತಿಳಿದುಕೊಂಡು ಈಗಲೇ ಏನಾದ್ರೂ ತಿದ್ದುಪಡಿ ಇದ್ದಲ್ಲಿ ಅಥವಾ ಜೋಡಣೆ ಮಾಡುವುದು ಬಾಕಿ ಇದ್ದಲ್ಲಿ ಈಗಲೇ ಎಲ್ಲಾ ಕೆಲಸವನ್ನು ಮುಗಿಸಿಕೊಂಡು ಮುಂದಿನ ತಿಂಗಳು ಹಣವನ್ನು ನೀವು ಪಡೆದುಕೊಳ್ಳಬಹುದು
ಅನ್ನಭಾಗ್ಯದ ಹಣದ ಸ್ಥಿತಿಯನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ಕೆಳಗೆ ಕೊಡಲಾಗಿದೆ ಗಮನಿಸಿ
ಅನ್ನಭಾಗ್ಯ ಯೋಜನೆಯ ಹಣ ಪಡೆಯಲು 3 ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು?
- ಪಡಿತರ ಚೀಟಿಯಲ್ಲಿ ಇರುವ ಮುಕ್ಯಸ್ತನ ಹೆಸರಲ್ಲಿ ಮುಖ್ಯಸ್ಥರ ( ಯಜಮಾನಿಯ ) ಬ್ಯಾಂಕ್ ಅಕೌಂಟ್ ಇರಬೇಕು
- ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು
- ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು ( NPCI mapping ಆಗಿರಬೇಕು)
ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :
ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
https://ahara.kar.nic.in/Home/Eservices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಮುಖ ಪುಟ ತೆಗೆಯುತ್ತದೆ ಅದರಲ್ಲಿ ಈ ಸ್ಟೇಟಸ್ ಎಂಬ ಆಯ್ಕೆಯನ್ನು ಒತ್ತಿ, ನಂತರ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.
ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದುವರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.
ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.
ಹಣ ಬಂದ ತಕ್ಷಣ ಮೆಸೇಜ್ ಕೂಡ ಬರಲಿದೆ :
ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದ ತಕ್ಷಣ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇದ್ದ ಮೊಬೈಲ್ ನಂಬರಿಗೆ ಹಣ ಜಮಾ ಆಗಿರುವುದರ ಬಗ್ಗೆ ಮೆಸೇಜ್ ಕೂಡ ಬರುತ್ತದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಮೈಸೂರು ಜಿಲ್ಲೆಯ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ದೊರೆತಿದೆ. ಜಿಲ್ಲೆಯಲ್ಲಿ 50432 ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ದಾರ ಕುಟುಂಬದ ಒಟ್ಟು 2,17,199 ಫಲಾನುಭವಿಗಳು, 6,61,290 ಬಿಪಿಎಲ್ ಕಾರ್ಡ್‌ಗಳ 20,83,627 ಜನರಿಗೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ವಿತರಿಸ ಬೇಕಿದೆ. ಅದರಂತೆ ಎಂದಿನಂತೆ ತಲಾ ಐದು ಕೆಜಿ ಅಕ್ಕಿ ವಿತರಿಸಲಾಗಿದೆ. ಇನ್ನುಳಿದ ಐದು ಕೆಜಿ ಅಕ್ಕಿಗೆ ಬದಲಾಗಿ 170 ರೂ.ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಎಲ್ಲಾ ಹಂತಗಳಲ್ಲಿಯೂ ಪ್ರತಿ ಜಿಲ್ಲೆಗೆ ಅನ್ನ ಭಾಗ್ಯದ ಹಣವನ್ನು ಜಮಾ ಮಾಡಲಾಗುತ್ತದೆ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ