45 ದಿನಗಳ ವ್ಯಾಲಿಡಿಟಿ ಗಳೊಂದಿಗೆ ಏರ್ಟೆಲ್ (Airtel) ನೀಡುತ್ತಿದೆ ಬಂಫರ್ ಆಫರ್!
ಇಂದು ಅನೇಕ ಟೆಲಿಕಾಂ ಸಂಸ್ಥೆಗಳು (Telecom Company) ಗ್ರಾಹಕರಿಗೆ ವಿಶೇಷ ಆಫರ್ ಮತ್ತು ಪ್ಲಾನ್ ಗಳನ್ನು ನೀಡುತ್ತಿವೆ. ಆಫರ್(offers) ಗಳಲ್ಲಿ ವಿವಿಧ ರೀತಿಯ ರಿಯಾಯಿತಿ, ಎಕ್ಟ್ರಾ ಟಾಕ್ ಟೈಮ್ (Extra talk time) ನಂತಹ ಅನೇಕ ಆಫರ್ ಗಳು ಲಭ್ಯವಿವೆ. ಹಾಗೇ ಇತ್ತೀಚೆಗೆ ಟೆಲಿಕಾಂ ಕಂಪನಿಗಳು ತಮ್ಮ ಪ್ರೀಪೇಡ್ ಪ್ಲಾನ್‌ಗಳ(prepaid plans) ದರ ಏರಿಕೆ ಮಾಡಿವೆ. ಆದರೂ ಕೂಡ ವಿಶೇಷ ಆಫರ್ ನೀಡುವ ಮೂಲಕ ತಮ್ಮತ್ತ ಗಮನ ಸೆಳೆಯುತ್ತವೆ. ಹಾಗೆಯೇ ಇದೀಗ ಭಾರ್ತಿ ಏರ್‌ಟೆಲ್ (Airtel) ಸಂಸ್ಥೆಯು ವಿಭಿನ್ನ ಆಫರ್ ನೀಡಲು ಮುಂದಾಗಿದೆ. ಏರ್ಟೆಲ್ ಕೆಲವು ಪ್ಲಾನ್ ಅತ್ಯುತ್ತಮ ಡೇಟಾ ಸೌಲಭ್ಯ ಹೊಂದಿದ್ದು, ಮತ್ತೆ ಕೆಲವು ಯೋಜನೆಗಳು ಅಧಿಕ ದೈನಂದಿನ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿಯ ಸೌಲಭ್ಯ ನೀಡುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸದ್ದಿಲ್ಲದೆ ಬಿಡುಗಡೆ ಮಾಡಿದ 279 ರೂ.ನ ಪ್ರಿಪೇಯ್ಡ್ ಯೋಜನೆ (prepaid scheme) :
ಏರ್‌ಟೆಲ್ ತನ್ನ ಯೋಜನೆಗಳ ಪಟ್ಟಿಗೆ ಹೊಸ 279 ರೂ.ನ ಪ್ರಿಪೇಯ್ಡ್ ಯೋಜನೆಯನ್ನು ಸದ್ದಿಲ್ಲದೆ ಸೇರಿಸಿದೆ. ಹೌದು, ಭಾರತೀಯ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಟೆಲಿಕಾಂ ಕಂಪನಿಯಾದ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಗಳ ಪಟ್ಟಿಗೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಅದೇ 279 ರೂ.ನ ಯೋಜನೆ. ಏರ್‌ಟೆಲ್ ಪ್ಲಾನ್‌ಗಳಲ್ಲಿ (Airtel plan) ವ್ಯಾಲಿಡಿಟಿಗಾಗಿ ನೀವು ಹೆಚ್ಚು ಪಾವತಿಸಬೇಕಾಗುತ್ತದೆ ಎಂಬ ಆರೋಪವಿದೆ. ಇದನ್ನು ಪರಿಹರಿಸುವ ಉದ್ದೇಶದಿಂದ ಏರ್‌ಟೆಲ್ 279 ರೂ.ನ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
ಏರ್‌ಟೆಲ್ 279 ರೂ. ಪ್ಲಾನ್‌ನ ಪ್ರಯೋಜನಗಳು (plan benefits) ಈ ಕೆಳಗಿನಂತಿವೆ :
ನೀವೇನಾದರೂ ಈ ಹೊಸ ಪ್ಲಾನ್ ಅನ್ನು ರೀಚಾರ್ಜ್ ಮಾಡಿಕೊಳ್ಳಬೇಕಿದ್ದರೆ, ಈ ಪ್ಲಾನ್ ನ ಪ್ರಯೋಜನ ಮತ್ತು ಮಾಹಿತಿ ಹೀಗಿದೆ :
ಈ ಏರ್‌ಟೆಲ್ 279 ರೂ. ಪ್ಲಾನ್ ನಲ್ಲಿ 2GB ಡೇಟಾ ದೊರೆಯುತ್ತದೆ.
ಅನ್‌ಲಿಮಿಟೆಡ್ ವಾಯ್ಸ್ ಕಾಲ್ (unlimited voice call) ಮತ್ತು 600 ಎಸ್‌ಎಂಎಸ್ (SMS) ಸೌಲಭ್ಯ ಪಡೆಯಬಹುದು.
ಹಾಗೂ ಈ ಪ್ಲಾನ್‌ನ ವ್ಯಾಲಿಡಿಟಿ 45 ದಿನಗಳು ಆಗಿರುತ್ತದೆ.
279 ರೂ. ನಾ ಪ್ಲಾನ್ ನಲ್ಲಿ 2GB ಡೇಟಾ ಖಾಲಿ ಆದರೆ ಅದರ ಬದಲಿಗೆ ಇರುವ ಪ್ಲಾನ್ :
ಈ 279 ರೂಪಾಯಿಯ ಪ್ಲಾನ್ ಅನ್ನು 45 ದಿನಗಳವರೆಗೆ ಬಳಸುವ ಸರಾಸರಿ ದೈನಂದಿನ ವೆಚ್ಚ 6.2 ರೂ. ಆಗಿದೆ. ಹಾಗೆಯೇ ಒಟ್ಟು 2GB ಡೇಟಾ ಖಾಲಿಯಾದ ನಂತರ, 19 ರೂ. ನಿಂದ ಪ್ರಾರಂಭವಾಗುವ ಡೇಟಾ ಬೂಸ್ಟರ್ ಯೋಜನೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
279 ರೂ. ಪ್ಲಾನ್ ಲಾಭದಾಯಕ ಪ್ಲಾನ್ ಆಗಿದೆ :
ಹೌದು, ಈ ಪ್ಲಾನ್ ನಲ್ಲಿ ಅನ್‌ಲಿಮಿಡೆಟ್ ವಾಯ್ಸ್ ಕಾಲ್ ಇರುತ್ತವೆ. ಹಾಗೆಯೇ ಡೇಟಾ ಕಡಿಮೆ ಆದರೆ, ಡೇಟಾ ಬೂಸ್ಟರ್ (data booster) ಯೋಜನೆಗಳನ್ನು ಪಡೆಯಬಹುದು. ಮತ್ತು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಏರ್‌ಟೆಲ್ ಯೋಜನೆಯು ಸಾಮಾನ್ಯವಾಗಿ 250 ರೂ. ಆಗಿರುತ್ತದೆ. 45 ದಿನಗಳ ವ್ಯಾಲಿಡಿಟಿಯೊಂದಿಗೆ 279 ರೂ. ರೀಚಾರ್ಜ್ ಪ್ಲಾನ್ ಹೆಚ್ಚು ಲಾಭದಾಯಕವಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




