Picsart 25 11 16 22 27 33 658 scaled

ಚಾಣಕ್ಯರ ಪ್ರಕಾರ ಯಶಸ್ಸಿನ ಮೂಲ ಗುಟ್ಟು: ಜೀವನದಲ್ಲಿ ಪಾಲಿಸಬೇಕಾದ 4 ಅಭ್ಯಾಸಗಳು ಹೀಗಿವೆ 

Categories:
WhatsApp Group Telegram Group

ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸು ಎಂಬುದು ಒಂದು ಮಹತ್ವದ ಗುರಿ. ಸಮಾಜದಲ್ಲಿ ಗೌರವವನ್ನು ಗಳಿಸುವುದು, ವೃತ್ತಿಜೀವನದಲ್ಲಿ ಬೆಳವಣಿಗೆ, ಕುಟುಂಬದಲ್ಲಿ ಸಂತೋಷ ಇವೆಲ್ಲವೂ ಯಶಸ್ಸಿನ ಭಾಗಗಳೇ. ಆದರೆ ಯಶಸ್ಸು ಒಂದೇ ದಿನದಲ್ಲಿ, ಒಂದೇ ಹೆಜ್ಜೆಯಲ್ಲಿ ದೊರೆಯುವುದಿಲ್ಲ. ಅದನ್ನು ಸಾಧಿಸಲು ಶಿಸ್ತು, ಸರಿಯಾದ ಚಿಂತನೆ ಮತ್ತು ಪರಿಣಾಮಕಾರಿಯಾದ ಕೆಲವು ಅಭ್ಯಾಸಗಳನ್ನು ಜೀವನಪಾಠಗಳಂತೆ ಅಳವಡಿಸಿಕೊಳ್ಳಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಸಾವಿರಾರು ವರ್ಷಗಳ ಹಿಂದೆಯೇ ಮಹಾನ್ ಚಿಂತಕ, ಆರ್ಥಿಕ ತಜ್ಞರಾದ ಚಾಣಕ್ಯ, ಮಾನವ ಜೀವನಕ್ಕೆ ಅಗತ್ಯವಾದ ಅನೇಕ ಸೂತ್ರಗಳನ್ನು ನೀಡಿದ್ದಾರೆ. ಅವರ ಚಾಣಕ್ಯ ನೀತಿಯಲ್ಲಿ ವ್ಯಕ್ತಿ ಯಶಸ್ವಿಯಾಗಲು ಅವಶ್ಯಕವಾದ ಅನೇಕ ಉಪದೇಶಗಳಿದ್ದು, ಅವುಗಳಲ್ಲಿ ನಾಲ್ಕು ಅತ್ಯಂತ ಮುಖ್ಯವಾದ ಅಭ್ಯಾಸಗಳನ್ನು ಅವರು ಯಶಸ್ಸಿನ ಮೂಲ ಗುಟ್ಟು ಎಂದು ಹೇಳಿದ್ದಾರೆ. ಇಂದಿನ ವೇಗದ ಯುಗದಲ್ಲೂ, ಸ್ಪರ್ಧೆಯ ಸಮಯದಲ್ಲೂ, ಸಾಮಾಜಿಕ ಹಾಗೂ ವೃತ್ತಿಜೀವನದ ಒತ್ತಡಗಳ ನಡುವೆ ಈ ನಾಲ್ಕು ಅಭ್ಯಾಸಗಳು ಒಬ್ಬ ವ್ಯಕ್ತಿಗೆ ದೃಢತೆ, ಶಿಸ್ತು ಮತ್ತು ನಿಖರ ಚಿಂತನೆಯ ಸಾಮರ್ಥ್ಯವನ್ನು ನೀಡುತ್ತವೆ. ಹಾಗಿದ್ದರೆ, ಚಾಣಕ್ಯರ ಪ್ರಕಾರ ಯಶಸ್ಸು ತಂದುಕೊಡುವ ಪ್ರಮುಖ ನಾಲ್ಕು ಅಭ್ಯಾಸಗಳು ಯಾವುವು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುವ ಅಭ್ಯಾಸ:

ಚಾಣಕ್ಯರು ಹೇಳುವಂತೆ ಸಮಯವೇ ವ್ಯಕ್ತಿಯ ದೊಡ್ಡ ಬಂಡವಾಳ. ಸಮಯವನ್ನು ವ್ಯರ್ಥ ಮಾಡದೆ, ಅದನ್ನು ಸರಿಯಾಗಿ ಯೋಜಿಸಿ ಬಳಸುವವರು ಜೀವನದಲ್ಲಿ ವೇಗವಾಗಿ ಮುಂದುವರೆಯುತ್ತಾರೆ.
ಸೋಮಾರಿತನದಿಂದ ದೂರ ಇರಬೇಕು,
ಕೆಲಸವನ್ನು ಸಮಯಕ್ಕೆ ಮುಗಿಸುವ ಶಿಸ್ತು ಬೆಳೆಸಿಕೊಳ್ಳಬೇಕು, ಏಕೆಂದರೆ ಸಮಯ ನಿರ್ವಹಣೆ ಸರಿಯಾಗಿದ್ದರೆ, ಯಶಸ್ಸು ಕಾಣಬಹುದು.

ಮನಸ್ಸನ್ನು ನಿಯಂತ್ರಿಸುವುದು:

ಚಾಣಕ್ಯರ ಪ್ರಕಾರ, ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವವನು ಅತ್ಯಂತ ಶಕ್ತಿಶಾಲಿ ಅಸ್ತ್ರ.
ಮನಸ್ಸು ಗುರಿಯ ಕಡೆಗೆ ನಯವಾಗಿ ಹೆಜ್ಜೆ ಹಾಕುವಂತೆ ಮಾಡಿದರೆ ವ್ಯಕ್ತಿ ತಪ್ಪು ನಿರ್ಧಾರಗಳಿಂದಲೂ, ಕೆಟ್ಟ ಅಭ್ಯಾಸಗಳಿಂದಲೂ ದೂರ ಉಳಿಯುತ್ತಾನೆ.
ಮನಸ್ಸು ನಿಯಂತ್ರಿತವಾಗಿದ್ದರೆ ಭಾವನೆಗಳಿಗೆ ಒಳಗಾಗಿ ತಡವರಿಸುವುದಿಲ್ಲ, ಗುರಿ ಸ್ಪಷ್ಟವಾಗಿ ಕಾಣುತ್ತದೆ, ಶಾಂತಿ, ಶಿಸ್ತು, ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ವಯಂ ನಿಯಂತ್ರಣವಿಲ್ಲದೆ ಯಾವುದೇ ದೊಡ್ಡ ಸಾಧನೆ ಸಾಧ್ಯವಿಲ್ಲ ಎಂದು ಚಾಣಕ್ಯರು ದೃಢವಾಗಿ ಹೇಳಿದ್ದಾರೆ.

ಇತರರಿಗೆ ಸಹಾಯ ಮಾಡುವ ಅಭ್ಯಾಸ:

ಮಾನವೀಯತೆ ಕೇವಲ ಒಳ್ಳೆಯ ಗುಣವಲ್ಲ, ಅದು ಯಶಸ್ಸಿನ ಮೂಲವೂ ಹೌದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಹೊಂದಿರುವ ವ್ಯಕ್ತಿಯನ್ನು ಸಮಾಜ ಯಾವಾಗಲೂ ಗೌರವಿಸುತ್ತದೆ.
ಇತರರ ನೋವು ಅರಿತು, ಕೈಲಾಗುವಷ್ಟು ನೆರವಾಗುವವನೇ ಶ್ರೇಷ್ಠನು ಎಂದು ಚಾಣುಕ್ಯರು ಹೇಳುತ್ತಾರೆ.
ಈ ಗುಣದಿಂದ ವ್ಯಕ್ತಿಯಲ್ಲಿ ದಯಾಭಾವ ಮೂಡುತ್ತದೆ, ಮಾನವೀಯ ದೃಷ್ಟಿಕೋನ ಬೆಳೆಸುತ್ತದೆ, ಸಮಾಜದಲ್ಲಿ ಹೆಸರು, ಗೌರವ, ವಿಶ್ವಾಸ ದೊರೆಯುತ್ತದೆ.

ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಯಶಸ್ಸು ಕೇವಲ ಪರಿಶ್ರಮದಿಂದ ಅಲ್ಲ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಿಂದ ಸಾಧ್ಯ. ಚಾಣಕ್ಯರ ಪ್ರಕಾರ, ಬುದ್ಧಿವಂತರು ಎಂದಿಗೂ ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಿರ್ಧಾರ ಮಾಡುವ ಮೊದಲು ಪರಿಸ್ತಿತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು, ಪರಿಣಾಮಗಳನ್ನು ಅಂದಾಜಿಸಬೇಕು, ಲಾಭ–ನಷ್ಟಗಳನ್ನು ವಿಶ್ಲೇಷಿಸಬೇಕು. ಚಿಂತನಶೀಲ ನಿರ್ಧಾರಗಳು ದೀರ್ಘಕಾಲದ ಯಶಸ್ಸಿನ ಆಧಾರವಾಗುತ್ತವೆ.

ಒಟ್ಟಾರೆಯಾಗಿ, ಸಮಯದ ಸರಿಯಾದ ಬಳಕೆ, ಮನಸ್ಸಿನ ನಿಯಂತ್ರಣ, ಇತರರ ಬಗ್ಗೆ ಮಾನವೀಯತೆ ಮತ್ತು ಚಿಂತನಶೀಲ ನಿರ್ಧಾರಗಳು ಹೀಗೆ ಕೆಲವೊಂದು ಅಭ್ಯಾಸಗಳನ್ನು ಜೀವನದಲ್ಲಿ ಅನುಸರಿಸಿದರೆ ಯಶಸ್ಸನ್ನು ಪಡೆಯಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯ

WhatsApp Group Join Now
Telegram Group Join Now

Popular Categories