- ಅನುಕಂಪದ ನೇಮಕಾತಿಗೆ ಈಗ ಜಾತಿ ಸಿಂಧುತ್ವ ಪ್ರಮಾಣಪತ್ರ ಕಡ್ಡಾಯವಿಲ್ಲ.
- ವಿದ್ಯಾರ್ಹತೆ ಮತ್ತು ವಯೋಮಿತಿ ಇದ್ದರೆ ಸಾಕು, ಮೆರಿಟ್ ಅಗತ್ಯವಿಲ್ಲ.
- ಕೇವಲ ಮುಂಬಡ್ತಿ ಪಡೆಯುವ ಸಂದರ್ಭದಲ್ಲಿ ಮಾತ್ರ ಸಿಂಧುತ್ವ ಕಡ್ಡಾಯ.
ನಮಸ್ಕಾರ ಓದುಗರೇ, ಮನೆಯಲ್ಲಿ ಕೆಲಸ ಮಾಡುವವರು ಅಕಾಲಿಕವಾಗಿ ಮೃತಪಟ್ಟಾಗ ಅವರ ಕುಟುಂಬಕ್ಕೆ ಆಸರೆಯಾಗುವುದು ‘ಅನುಕಂಪದ ಆಧಾರದ ನೇಮಕಾತಿ’. ಆದರೆ ಈ ಕೆಲಸ ಪಡೆಯಲು ಇಷ್ಟು ದಿನ ಇದ್ದ ಒಂದಷ್ಟು ಗೊಂದಲಗಳಿಗೆ ಈಗ ರಾಜ್ಯ ಸರ್ಕಾರ ತೆರೆ ಎಳೆದಿದೆ. ದಾಖಲೆಗಳಿಗಾಗಿ ಅಲೆದಾಡುವ ಜನರಿಗೆ ಇದೊಂದು ದೊಡ್ಡ ನಿರಾಳ ಸುದ್ದಿ ಎನ್ನಬಹುದು. ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವ ಸಂದರ್ಭದಲ್ಲಿ ಸಿಂಧುತ್ವ ಪ್ರಮಾಣ ಪತ್ರದ ಅವಶ್ಯಕತೆಯ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC 138) ಪ್ರಕರಣದಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಕರ್ನಾಟಕ ಸಿವಿಲ್ ಸೇವಾ (ಅನು
ಈ ನಿಯಮಗಳನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡಲಾಗಿರುತ್ತದೆ. ದಿನಾಂಕ: 09.04.2021ರ ಅಧಿಸೂಚನೆ ಸಂಖ್ಯೆ: ಸಿಆಸುಇ 26 ಸೇಅನೇ 2018ರಲ್ಲಿ 1996ರ ಸದರಿ ನಿಯಮಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ. ಈ ನಿಯಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ:12.11.2024ರ ಉಲ್ಲೇಖ (1) ರ ಸುತ್ತೋಲೆಯಲ್ಲಿ ಮತ್ತು ದಿನಾಂಕ:13.01.2025ರ ಉಲ್ಲೇಖ (2)8 ಸುತ್ತೋಲೆಯಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮ 4 ನ್ನು ನಿಯಮ 8 ರೊಂದಿಗೆ ಸಹವಾಚನ ಮಾಡಿಕೊಂಡಂತೆ, ಇವುಗಳನ್ವಯ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಸಂಬಂಧಿಸಿದ ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿಯ ಮುಖಾಂತರ ಭರ್ತಿ ಮಾಡುವ ಅರ್ಹತೆಯ ಆಧಾರದ ಮೇಲೆ ಜಾರಿಯಲ್ಲಿರುವ ಮೀಸಲಾತಿಯನ್ನು ಅನುಸರಿಸಿ(on the basis of merit-cum-reservation) ಮಾಡತಕ್ಕದ್ದಾಗಿದೆ. ಆದರೆ, ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996, ಈ ನಿಯಮಗಳನ್ವಯ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವ ಸಂದರ್ಭಗಳಲ್ಲಿ ಅಭ್ಯರ್ಥಿಯು ನಿಗದಿತ ವಿದ್ಯಾರ್ಹತೆಯನ್ನು ಹೊಂದಿದ್ದಾನೆಯೇ ಮತ್ತು ಗೊತ್ತುಪಡಿಸಿದ ವಯೋಮಿತಿಯೊಳಗೆ ಇದ್ದಾನೆಯೇ ಎಂಬುದನ್ನು ಮಾತ್ರ ಪರಿಗಣಿಸಲಾಗುತ್ತದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವಾಗ ಅಂತರ ಅರ್ಹತೆ (relative merit) ಯನ್ನು ನೋಡುವುದಿಲ್ಲ ಮತ್ತು ಮೀಸಲಾತಿಯನ್ನು ಅನುಸರಿಸುವುದಿಲ್ಲ. ಆದುದರಿಂದ, ಈ ವಿಧಾನವು ಒಂದು ವಿಶೇಷವಾದ ನೇಮಕಾತಿಯಾಗಿರುತ್ತದೆ.
ಅಲ್ಲದೆ, 1996 ರ ಸದರಿ ನಿಯಮಗಳ ನಿಯಮ 4 ರ ಉಪ ನಿಯಮ (5) ರಲ್ಲಿ “(5) Appointment shall be made only against a direct recruitment vacancy” w ಗೊತ್ತುಪಡಿಸಲಾಗಿರುತ್ತದೆ. ಅದರಂತೆ, ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಬಹುದಾದ ವೃಂದಗಳ ಹುದ್ದೆಗಳಿಗೆ ನೇಮಕಾತಿ ಮಾಡಲು ನೇರ ನೇಮಕಾತಿ ಮತ್ತು ಮುಂಬಡ್ತಿಯ ವಿಧಾನವನ್ನು ಗೊತ್ತುಪಡಿಸಿ, ಅನುಪಾತವನ್ನು ನಿಗದಿಪಡಿಸಿದ್ದಲ್ಲಿ, ಅದಕ್ಕೆ ಅನುಗುಣವಾಗಿ, ಹುದ್ದೆಗಳನ್ನು / ರಿಕ್ತಸ್ಥಾನಗಳನ್ನು ನೇರ ನೇಮಕಾತಿ ಹುದ್ದೆಗಳು / ರಿಕ್ತಸ್ಥಾನಗಳು ಮತ್ತು ಮುಂಬಡ್ತಿ ಹುದ್ದೆಗಳು / ರಿಕ್ತಸ್ಥಾನಗಳು ಎಂದು ವರ್ಗೀಕರಣ ಮಾಡಿ ಅನುಕಂಪದ ಆಧಾರದ ಮೇಲೆ ಮಾಡುವ ನೇಮಕಾತಿಗಳನ್ನು ನೇರ ನೇಮಕಾತಿಗೆ ವರ್ಗೀಕರಿಸಿದ ಹುದ್ದೆಗಳಿಗೆ / ರಿಕ್ತಸ್ಥಾನಗಳಿಗೆ ಎದುರಾಗಿ ಮಾತ್ರ ಪರಿಗಣಿಸಬೇಕಾಗುತ್ತದೆ. ಈ ರೀತಿ, ಅನುಕಂಪದ ಆಧಾರದ ಮೇಲೆ ಮಾಡುವ ನೇಮಕಾತಿಗಳನ್ನು ನೇರ ನೇಮಕಾತಿಗೆ ವರ್ಗೀಕರಿಸಿದ ಹುದ್ದೆಗಳಿಗೆ / ರಿಕ್ತ ಸ್ಥಾನಗಳಿಗೆ ಎದುರಾಗಿ ಪರಿಗಣಿಸಿದ ಮಾತ್ರಕ್ಕೆ ಆ ನೇಮಕಾತಿಗಳು ನೇರ ನೇಮಕಾತಿ ಆಗುವುದಿಲ್ಲ. ಆದುದರಿಂದ, ಅನುಕಂಪದ ಆಧಾರದ ಮೇಲೆ ಮಾಡುವ ನೇಮಕಾತಿಗಳಿಗೆ ಮೀಸಲಾತಿ ನೀತಿಯನ್ನು ಅನುಸರಿಸುವ ಸಂದರ್ಭ ಒದಗಿಬರುವುದಿಲ್ಲ.
ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿದವರು ಮೀಸಲಾತಿ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ, ಅವರು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿದ ನಂತರ, ಸಂವಿಧಾನದ ಅನುಚ್ಛೇದ 16 ರ ಖಂಡ (4-ಎ) ರಡಿ ಸರ್ಕಾರವು ನಿಗದಿಪಡಿಸಿರುವ ಮೀಸಲಾತಿಯ ಪ್ರಕಾರ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮುಂಬಡ್ತಿ ಮೂಲಕ ನೇಮಕಾತಿಯನ್ನು ಹೊಂದಲು ಅವರು ಮೀಸಲಾತಿ ಸೌಲಭ್ಯವನ್ನು ಕೋರಬಹುದಾಗಿರುತ್ತದೆ. ಆದರೆ, ಅಂತಹ ಸಂದರ್ಭದಲ್ಲಿ ಆ ನೌಕರನು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
ಅಭ್ಯರ್ಥಿಯು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಇತರೆ ರೀತಿಯಲ್ಲಿ ಅರ್ಹರಾಗಿದ್ದಲ್ಲಿ, ಮೀಸಲಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರವನ್ನು ಒದಗಿಸುವಂತೆ ಅವರನ್ನು ಒತ್ತಾಯಿಸದೇ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸಬಹುದಾಗಿರುತ್ತದೆ ಎಂದು ಎಲ್ಲಾ ಇಲಾಖೆ/ ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಸೂಚಿಸಲಾಗಿದೆ.



ನೇಮಕಾತಿ ವಿವರಗಳ ಪಟ್ಟಿ:
| ವಿವರ | ನಿಯಮಗಳು |
|---|---|
| ನೇಮಕಾತಿ ಆಧಾರ | ಅನುಕಂಪದ ಆಧಾರ (Compassionate Grounds) |
| ಮುಖ್ಯ ಮಾನದಂಡ | ವಿದ್ಯಾರ್ಹತೆ ಮತ್ತು ವಯೋಮಿತಿ ಮಾತ್ರ |
| ಮೀಸಲಾತಿ ಅನ್ವಯವೇ? | ಕೆಲಸಕ್ಕೆ ಸೇರುವಾಗ ಮೆರಿಟ್ ಅಥವಾ ಮೀಸಲಾತಿ ಅನ್ವಯಿಸುವುದಿಲ್ಲ |
| ಸಿಂಧುತ್ವ ಪತ್ರ (Validity) | ಕೆಲಸ ಸೇರಿದ ನಂತರ ಮುಂಬಡ್ತಿಗಾಗಿ ಮಾತ್ರ ಕಡ್ಡಾಯ |
ಗಮನಿಸಿ: ಅನುಕಂಪದ ನೇಮಕಾತಿಯನ್ನು ಕೇವಲ ‘ನೇರ ನೇಮಕಾತಿ’ ಕೋಟಾದಡಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಪರಿಗಣಿಸಲಾಗುತ್ತದೆ. ಇದನ್ನು ಮುಂಬಡ್ತಿ ಮೂಲಕ ಭರ್ತಿ ಮಾಡುವ ಹುದ್ದೆಗಳಿಗೆ ಬಳಸುವಂತಿಲ್ಲ.
ನಮ್ಮ ಸಲಹೆ
ನಮ್ಮ ಸಲಹೆ: ಅನುಕಂಪದ ನೇಮಕಾತಿಗಾಗಿ ಅರ್ಜಿ ಸಲ್ಲಿಸುವಾಗ ವಯೋಮಿತಿ ಮತ್ತು ವಿದ್ಯಾರ್ಹತೆಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಕೆಲಸಕ್ಕೆ ಸೇರಿದ ಮೇಲೆ ನಿರಾಳವಾಗಿ ಕೂಡಬೇಡಿ; ಕೂಡಲೇ ಸಿಂಧುತ್ವ ಪ್ರಮಾಣಪತ್ರಕ್ಕೆ (Validity) ಅರ್ಜಿ ಸಲ್ಲಿಸಿ ಇಟ್ಟುಕೊಳ್ಳಿ. ಇದರಿಂದ ಮುಂದೆ ನಿಮಗೆ ಮುಂಬಡ್ತಿ ಸಿಗುವ ಸಮಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
FAQs (ಸಾಮಾನ್ಯ ಪ್ರಶ್ನೆಗಳು)
ಪ್ರಶ್ನೆ 1: ಅನುಕಂಪದ ಕೆಲಸಕ್ಕೆ ಮೀಸಲಾತಿ ಪಟ್ಟಿ ನೋಡಿ ಕೆಲಸ ಕೊಡುತ್ತಾರೆಯೇ?
ಉತ್ತರ: ಇಲ್ಲ. ಅನುಕಂಪದ ನೇಮಕಾತಿಯಲ್ಲಿ ಮೆರಿಟ್ ಅಥವಾ ಮೀಸಲಾತಿ ನೀತಿಯನ್ನು ಅನುಸರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಅಭ್ಯರ್ಥಿಗೆ ಕೆಲಸ ನಿರ್ವಹಿಸಲು ಬೇಕಾದ ಅರ್ಹತೆ ಇದ್ದರೆ ಸಾಕು.
ಪ್ರಶ್ನೆ 2: ಸಿಂಧುತ್ವ ಪ್ರಮಾಣಪತ್ರ ನೀಡದಿದ್ದರೆ ಕೆಲಸ ಅಮಾನತು ಮಾಡುತ್ತಾರೆಯೇ?
ಉತ್ತರ: ಕೆಲಸಕ್ಕೆ ಸೇರುವ ಮೊದಲೇ ಇದನ್ನು ಕೇಳುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಆದರೆ ಭವಿಷ್ಯದ ಮುಂಬಡ್ತಿ ಸೌಲಭ್ಯಗಳಿಗಾಗಿ ನೀವು ಇದನ್ನು ನಂತರದ ದಿನಗಳಲ್ಲಿ ಸಲ್ಲಿಸಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




