WhatsApp Image 2025 12 28 at 12.27.28 PM

BIGNEWS: ರಾಜ್ಯದ ಜನತೆಗೆ ಸಿಹಿ ಸುದ್ದಿ: `ಗ್ರಾ.ಪಂ.ವ್ಯಾಪ್ತಿಯ `ಇ-ಸ್ವತ್ತು’ ವಿತರಣೆ’ ಕುರಿತು ಸರ್ಕಾರದಿಂದ ಮಹತ್ವದ ಆದೇಶ.!

Categories:
WhatsApp Group Telegram Group
ಮುಖ್ಯಾಂಶಗಳು
  • ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಇ-ಸ್ವತ್ತು ವಿತರಣೆ ಕಡ್ಡಾಯ.
  • ಮೊದಲು ಬಂದವರಿಗೆ ಮೊದಲ ಆದ್ಯತೆ; ಅರ್ಜಿ ತಡೆಹಿಡಿಯುವಂತಿಲ್ಲ.
  • ಕ್ರಮಬದ್ಧವಲ್ಲದ ಆಸ್ತಿಗಳಿಗೂ ನಮೂನೆ 11ಬಿ ವಿತರಣೆಗೆ ಸರ್ಕಾರದ ಆದೇಶ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಅಥವಾ ಸೈಟು ಹೊಂದಿರುವವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ! ಈ ಹಿಂದೆ ಒಂದು ಇ-ಸ್ವತ್ತು ದಾಖಲೆ (ನಮೂನೆ 9, 11ಎ) ಪಡೆಯಬೇಕೆಂದರೆ ಪಂಚಾಯತಿ ಕಚೇರಿಗಳಿಗೆ ತಿಂಗಳುಗಟ್ಟಲೆ ಅಲೆಯಬೇಕಿತ್ತು. ಆದರೆ ಈಗ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಇ-ಸ್ವತ್ತು ವಿತರಣಾ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ. ಅಷ್ಟೇ ಅಲ್ಲ, ಅಧಿಕಾರಿಗಳು ನಿಮ್ಮ ಅರ್ಜಿಯನ್ನು ವಿನಾಕಾರಣ ತಡೆಹಿಡಿಯುವಂತಿಲ್ಲ ಎಂದು ಇದೀಗ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ರಾಜ್ಯ ಸರ್ಕಾರ ಕೈಗೊಂಡ ಸರಳ ಕ್ರಮಗಳು ಈ ಕೆಳಕಂಡಂತಿವೆ.

1) ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸುವುದು ಸಕಾಲ ಸೇವೆಯ ಕಾರ್ಯ ವ್ಯಾಪ್ತಿಗೆ ಸೇರ್ಪಟ್ಟಿದ್ದು, 45 ದಿನಗಳೊಳಗೆ ಅರ್ಜಿದಾರರು ದಾಖಲಾತಿಗಳನ್ನು ನಿಯಮಗಳ ಪಕಾರ ಎಲ್ಲಾ ನೀಡಬೇಕಾಗಿರುತ್ತದೆ. ಅವರು ಒದಗಿಸಿದ್ದಲ್ಲಿ

2) ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು (ತೆರಿಗೆ ನಿರ್ಧರಣೆ ಪಟ್ಟಿ) ವಿತರಿಸಲು ಗ್ರಾಮ ಪಂಚಾಯತಿ ಸಭೆಯ ಅನುಮೋದನೆ ಅಗತ್ಯವಿದ್ದು, ಮೊದಲು ಬಂದ ಅರ್ಜಿಯನ್ನು ಸ್ವೀಕೃತಿ ದಿನಾಂಕದ ಆಧಾರದ ಮೇಲೆ ជ ជ (First In First Out-FIFO) ಕ್ರಮ ವಹಿಸುವಂತೆ ಹಾಗೂ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸುವುದು ಮತ್ತು ವಿಲೇ ಇಡದಂತೆ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ.

3) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಅವಶ್ಯಕವಾಗಿರುವ ದಾಖಲೆಗಳ ಚೆಕ್ಲಿಸ್ಕೃಳನ್ನು ಗ್ರಾಮ ಪಂಚಾಯತಿಗಳ ಸೂಚನಾ ಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಬಗ್ಗೆ ಕ್ರಮ ವಹಿಸುವಂತೆ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದೆ.

4) ತಂತ್ರಾಂಶದ ಬಳಕೆ ಬಗ್ಗೆ ಗ್ರಾಮ ಪಂಚಾಯಿತಿಗಳ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.

5) ಸರ್ಕಾರದ ಆದೇಶ ಸಂಖ್ಯೆ: RDPR 370 GPA 2025, 2:17-05-2025 0 2025-26 ಆಯವ್ಯಯ ಭಾಷಣದ ಕಂಡಿಕೆ 272(i) ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿರುವ ಕ್ರಮಬದ್ಧ ಆಸ್ತಿಗಳಿಗೆ ನಿಗಧಿತ ನಮೂನೆ 9 ಹಾಗೂ 11 ಎ ಮತ್ತು ಕ್ರಮ ಬದ್ಧವಲ್ಲದ ಆಸ್ತಿಗಳಿಗೆ ನಿಗಧಿತ ನಮೂನೆ-11 ಬಿ ಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸಲು ‘ಇ-ಸ್ವತ್ತು ಅಭಿಯಾನ’ ವನ್ನು ಹಮ್ಮಿಕೊಳ್ಳಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.

WhatsApp Image 2025 12 28 at 11.35.09 AM
WhatsApp Image 2025 12 28 at 11.35.17 AM
WhatsApp Image 2025 12 28 at 11.35.24 AM
WhatsApp Image 2025 12 28 at 11.35.32 AM

ನಮ್ಮ ಸಲಹೆ: ಇ-ಸ್ವತ್ತು ಅರ್ಜಿಯನ್ನು ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಮತ್ತು ಆಸ್ತಿ ದಾಖಲೆಗಳಲ್ಲಿ ಹೆಸರಿನ ಅಕ್ಷರಗಳು ಒಂದೇ ರೀತಿ ಇವೆಯೇ ಎಂದು ಪರಿಶೀಲಿಸಿಕೊಳ್ಳಿ. ಅರ್ಜಿ ಸಲ್ಲಿಸಿದ ತಕ್ಷಣ ‘ಸ್ವೀಕೃತಿ ಪತ್ರ’ (Acknowledgement) ಪಡೆಯಲು ಮರೆಯಬೇಡಿ. ಸರ್ವರ್ ಸಮಸ್ಯೆ ಇರುವುದರಿಂದ, ಸಾಧ್ಯವಾದಷ್ಟು ಸಂಜೆ 6 ಗಂಟೆಯ ನಂತರ ಅಥವಾ ಮುಂಜಾನೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿ, ಇದರಿಂದ ಕೆಲಸ ಬೇಗ ಆಗುತ್ತದೆ.

ಸಾಮಾನ್ಯ ಪ್ರಶ್ನೆಗಳು (FAQs)

ಪ್ರಶ್ನೆ 1: ದಾಖಲೆಗಳು ಸರಿಯಿದ್ದರೂ ಅಧಿಕಾರಿಗಳು ವಿಳಂಬ ಮಾಡಿದರೆ ಏನು ಮಾಡಬೇಕು?

ಉತ್ತರ: ಇದು ‘ಸಕಾಲ’ ವ್ಯಾಪ್ತಿಯಲ್ಲಿ ಬರುವುದರಿಂದ, 45 ದಿನ ಮೀರಿದರೆ ನೀವು ಮೇಲಧಿಕಾರಿಗಳಿಗೆ (ತಾಲ್ಲೂಕು ಪಂಚಾಯತಿ ಇಒ) ದೂರು ನೀಡಬಹುದು. ವಿಳಂಬಕ್ಕೆ ಕಾರಣವಾದ ಅಧಿಕಾರಿಗಳಿಗೆ ದಂಡ ವಿಧಿಸುವ ಅವಕಾಶವೂ ಇದೆ.

ಪ್ರಶ್ನೆ 2: ಅನಧಿಕೃತ ಲೇಔಟ್‌ನಲ್ಲಿರುವ ಸೈಟುಗಳಿಗೆ ಇ-ಸ್ವತ್ತು ಸಿಗುತ್ತದೆಯೇ?

ಉತ್ತರ: ಹೌದು, ಅಂತಹ ಆಸ್ತಿಗಳಿಗೆ ಸರ್ಕಾರ ನಮೂನೆ-11ಬಿ ವಿತರಿಸಲು ‘ಇ-ಸ್ವತ್ತು ಅಭಿಯಾನ’ದ ಮೂಲಕ ಅವಕಾಶ ನೀಡಿದೆ. ಇದು ತೆರಿಗೆ ಪಾವತಿಗೆ ಅನುಕೂಲ ಮಾಡಿಕೊಡುತ್ತದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories