ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದರು. ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಇಲ್ಲಿಯವರೆಗೆ 1.9 ಕೋಟಿ ಮಹಿಳೆಯರ ಖಾತೆಗೆ ಹಣ ತಲುಪಿದೆ ಆದರೆ ಇನ್ನು ಸುಮಾರು 9 ಲಕ್ಷದಷ್ಟು ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಯಜಮಾನಿಯರ ಅಕೌಂಟ್ ಗೆ ಹಣ ಬರುತ್ತೆ, ಇದಕ್ಕಾಗಿ ಸರಳ ಸೀಡಿಂಗ್ ಆಗದೆ ಇರುವುದು ಹಾಗೂ ಕೆಲವು ತಾಂತ್ರಿಕ ದೋಷಗಳಿಂದ ಹಣ ಬಂದಿಲ್ಲ ಎಂದರು.
ಹಣ ಬರದೆ ಇದ್ದವರು ಏನು ಮಾಡಬೇಕು..?
ನಿಮ್ಮ ಖಾತೆಗೆ ಇನ್ನೂ ಹಣ ಬರದೇ ಇದ್ರೆ ಹತ್ತಿರದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್ (ವಿವರ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯನ್ನು ನೀಡಿ ಅವರ ಬಳಿ ಸಲಹೆಯನ್ನ ಪಡೆದುಕೊಳ್ಳಿ, ಏಕೆ ಹಣ ಬರಲಿಲ್ಲ, ಏನು ಸಮಸ್ಯೆಯಾಗಿದೆ..ಏನು ಮಾಡಬೇಕು ಎಂಬ ಸಲಹೆ ಪಡೆಯಿರಿ.
ಅಂಚೆ ಕಚೇರಿ ಸಹಾಯ ಪಡೆದುಕೊಳ್ಳಿ..! ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)
ದೇಶಾದ್ಯಂತದ ಸುಮಾರು ಶೇ.77 ಗ್ರಾಮೀಣ ಖಾತೆದಾರರಿಗೆ ಮನೆಯಲ್ಲಿ ಕುಳಿತು ಬ್ಯಾಂಕಿನಿ೦ದ ಹಣವನ್ನು ಹಿಂಪಡೆಯುವ ಅಥವಾ ಜಮಾ ಮಾಡುವ ಅನುಕೂಲವಿದೆ. ಅಂಚೆ ಉಳಿತಾಯ ಖಾತೆಯನ್ನು ಕೇವಲ 5 ನಿಮಿಷದಲ್ಲಿ ತೆರೆಯಬಹುದಾಗಿದೆ. ಕರ್ನಾಟಕದಲ್ಲಿ ಐಪಿಪಿಬಿ 33 ಶಾಖೆಗಳಿವೆ. ಐಪಿಪಿಬಿ ಖಾತೆ ತೆರೆದರೆ ಶೀಘ್ರವೇ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಇದುವರೆಗೂ ಹಣ ಬಾರದೇ ಇರುವ ಎಷ್ಟೋ ಜನರು ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾತೆ ತೆರೆದ ಎರಡೇ ದಿನಗಳಲ್ಲಿ ಹಣ ಬಂದಿರುವ ಉದಾಹರಣೆಗಳಿವೆ, ಹಣ ಬರದಿರುವ ಎಷ್ಟೋ ಫಲಾನುಭವಿಗಳ ಬ್ಯಾಂಕಿಂಗ್ ಕೆವೈಸಿನಲ್ಲಿ ಸಮಸ್ಯೆ ಇರುವ ಕಾರಣ DBT ವರ್ಗಾವಣೆ ಕಷ್ಟಕರವಾಗಿದೆ, ಹಾಗಾಗಿ ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎನ್ನುವರು ಇದೊಂದು ಪ್ರಯತ್ನ ಮಾಡಿ ನೋಡಿ.
ಈ ಜಿಲ್ಲೆಗಳಿಗೆ ಮೂರನೇ ಕಂತಿನ ಹಣ ಬಿಡುಗಡೆ!
ಈಗಾಗಲೇ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗುತ್ತದೆ, ಈಗಾಗಲೇ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಮಂಡ್ಯ ಮತ್ತು ಮೈಸೂರು ಮೊದಲದ ಕಡೆ ಮೂರನೇ ಕಂತಿನ ಹಣ ಜಮಾ ಆಗುತ್ತಿದೆ. ಇನ್ನು ಮುಂದಿನ ತಿಂಗಳಿಂದ ಪ್ರತಿ ತಿಂಗಳು 15ರಿಂದ 20ನೇ ತಾರೀಕಿನೊಳಗೆ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ರೂ.2000 ಜಮಾ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








