ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ದಶಕಗಳ ಕಾಲದ ಸಮಸ್ಯೆಯೊಂದಕ್ಕೆ ಇದೀಗ ಶಾಶ್ವತ ಪರಿಹಾರ ಸಿಕ್ಕಿದೆ. ಸರ್ಕಾರಿ ಸೇವೆಗೆ ಸೇರಿದ ದಿನದಿಂದ ನಿವೃತ್ತಿಯವರೆಗೆ ಪ್ರತಿಯೊಬ್ಬ ನೌಕರನ ಏಳುಬೀಳುಗಳನ್ನು ದಾಖಲಿಸುವ ‘ಸೇವಾ ಪುಸ್ತಕ’ (Service Register) ಇನ್ಮುಂದೆ ಡಿಜಿಟಲ್ ರೂಪಕ್ಕೆ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ಎಲೆಕ್ಟ್ರಾನಿಕ್ ಸರ್ವಿಸ್ ರಿಜಿಸ್ಟರ್ (ESR) ಕಡ್ಡಾಯಗೊಳಿಸಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಸದರಿ ಉಲ್ಲೇಖಗಳನ್ವಯ 2021-22 ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು “ವಿದ್ಯುನ್ಮಾನ ಸೇವಾ ವಹಿ” Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂದಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ ಹಾಗೂ ಉಲ್ಲೇಖಿತ ಸರ್ಕಾರದ ಸುತ್ತೋಲೆ (3) & (4) ರಂತೆ, ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ. ಅಧಿಕೃತ ಪ್ರತಿಯ ಲೇಖನಗಳು ಸ್ಪಷ್ಟವಾಗಿ ಕಾಣದಿದ್ದಲ್ಲಿ ಪ್ರತಿಗಳ ಕೆಳಗಡೆ ಲೇಖನವಿದೆ ಓದಿಕೊಳ್ಳಬಹುದು



HRMS-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು HRMS-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ HRMS-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿತ್ತು.
HOD ಮಟ್ಟದಲ್ಲಿ ಡಿಡಿಓಗಳು ವರದಿಸಿದ ಸಮಸ್ಯೆಯನ್ನು/ ವಿನಂತಿಯನ್ನು ತ್ವರಿತವಾಗಿ ಕ್ರಮತೆಗೆದುಕೊಳ್ಳಲಾಗುತ್ತಿಲ್ಲ ಮತ್ತು ಅದರಿಂದ, ESR ಅನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಆದ್ದರಿಂದ, HRMS-1 ರಲ್ಲಿನ ಅಧಿಕಾರಿ/ ನೌಕರರುಗಳ ಡೇಟಾದಲ್ಲಿನ ತಿದ್ದುಪಡಿಗಳು ಅಥವಾ ನವೀಕರಣಗಳಿಗಾಗಿ ಮಾಡಲಾದ ವಿನಂತಿಯನ್ನು ಮೊದಲ ಆದ್ಯತೆಯ ಮೇಲೆ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ತಮ್ಮಲ್ಲಿ ವಿನಂತಿಸುತ್ತಿದ್ದೇನ.
ಹೆಚ್ಚಿನ ಇಲಾಖೆಗಳು ಈಗಾಗಲೇ HRMS-2 ಗೆ ಸೇರ್ಪಡೆಗೊಂಡಿವೆ. HRMS-2 ರಲ್ಲಿ ಒದಗಿಸಬೇಕಾದ ಸೇವಗಳಿಗಾಗಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು ESR ಗೆ ಬದಲಾಗಿ ಪ್ರಸ್ತುತ HRMS-1 ರಿಂದ ಪಡೆಯಲಾಗುತ್ತಿದೆ. ಭವಿಷ್ಯದಲ್ಲಿ HRMS-1 ಕಾರ್ಯನಿರ್ವಹಿಸುವುದು ನಿಲ್ಲಿಸಿದಾಗ, ಅಧಿಕಾರಿ/ ನೌಕರರ ಡೇಟಾವನ್ನು HRMS-2 ವಿನಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ESR ನಲ್ಲಿ ನೌಕರರ ಸೇವಾ ವಿವರಗಳನ್ನು ತುರ್ತಾಗಿ ನವೀಕರಿಸುವುದು ಬಹಳ ಅವಶ್ಯಕ.
ಮುಖ್ಯ ಕಾರ್ಯದರ್ಶಿಗಳು ಸೂಚಿಸಿದಂತೆ, ಮೂರು ವರ್ಷದೊಳಗೆ ನಿವೃತ್ತರಾಗಲಿರುವ ಅಧಿಕಾರಿ/ನೌಕರರ ESR ಅನ್ನು ತುರ್ತಾಗಿ ತಯಾರಿಸಬೇಕಾಗಿದೆ. ಏಕೆಂದರೆ, ಭವಿಷ್ಯದಲ್ಲಿ AG ಪಿಂಚಣಿ ಉದ್ದೇಶಕ್ಕಾಗಿ ESR ನಿಂದಲೇ Form-7 ನಮೂನೆಯನ್ನು ಸ್ವೀಕರಿಸುತ್ತಾರ. ಹಾಗೂ Digital ESR ಲಗತ್ತಿಸುವಂತೆ ತಿಳಿಸಿರುತ್ತಾರೆ. ಆದ್ದರಿಂದ, ಇವರುಗಳ ESR ನ್ನು ಪ್ರಥಮ ಆದ್ಯತೆಯಲ್ಲಿ ತಯಾರಿಸುವುದು ಅವಶ್ಯಕವಾಗಿದೆ.
ಗ್ರೂಪ್ ಎ ಮತ್ತು ಬಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು AG ಮತ್ತು HRMS-1 ವತಿಯಿಂದ ಪಡೆಯಲಾಗುತ್ತದೆ. ಅಧಿಕಾರಿ/ ನೌಕರರ GER ಸಂಖ್ಯೆಯನ್ನು HRMS- 1 ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ನಂತರ, ಅವರ ESR ಪೂರ್ಣಗೊಳಿಸಬೇಕು.
ಗ್ರೂಪ್ ಎ ಮತ್ತು ಬಿ ಪತ್ರಾಂಕಿತ ಅಧಿಕಾರಿಗಳ ಭೌತಿಕ ಸೇವಾ ಪುಸ್ತಕ ನಿಮ್ಮ ಕಛೇರಿಯಲ್ಲಿ ನಿರ್ವಹಿಸದೆ ಇರುವುದರಿಂದ; ಅದನ್ನು upload ಮಾಡುವ ಸಂದರ್ಭವಿರುವುದಿಲ್ಲ. ಆದುದರಿಂದ, GER ಸಂಖ್ಯೆ ಹೊಂದಿರುವ ಪತ್ರಾಂಕಿತ ಅಧಿಕಾರಿಗಳ ESR ಪರಿಶೀಲನೆಗಾಗಿ ವಿಷಯ ನಿರ್ವಾಹಕರ login ನಲ್ಲಿ ಲಭ್ಯವಿರುತ್ತದೆ. ಮುಂದೆ HRMS-2.0 ಸಂಪೂರ್ಣವಾಗಿ ಅನುಷ್ಠಾನಗೊಂಡ ನಂತರ (April 2026 ರಿಂದ) ESR LIVE, HRMS system ನಲ್ಲೆ ತಯಾರಾಗುತ್ತದೆ ಹಾಗೂ ಇದರಿಂದ AG ಗೆ ಪಿಂಚಣಿ ಮಾಹಿತಿ, TLE ಹಾಗೂ Gratuity & Pension Form-7 ಇವೆಲ್ಲಕ್ಕಾಗಿ ಮಾಹಿತಿ online ನಲ್ಲಿ ನೀಡಲಾಗುವುದು.
ಗ್ರೂಪ್ ಸಿ ಯಿಂದ ಬಿ (ಪತ್ರಾಂಕಿತ) ಹುದ್ದೆಗೆ ಪದೋನ್ನತಿ ಪಡೆದ ಅಧಿಕಾರಿ/ ನೌಕರರ, ಗ್ರೂಪ್ ಸಿ ನಲ್ಲಿ ಇರುವಾಗ ನಿರ್ವಹಿಸಿದ ಭೌತಿಕ ಸೇವಾ ಪುಸ್ತಕವನ್ನು Scan ಮಾಡಿ upload ಮಾಡಬಹುದು. ಅಧಿಕಾರಿ/ನೌಕರರ ಸೇವಾ ವಿವರಗಳನ್ನು ಪರಿಶೀಲಿಸಿ, AG ಯಿಂದ ಪಡೆದ ಮಾಹಿತಿಯೊಂದಿಗೆ ತಾಳೆ ಹೊಂದಿಸಿ, ESR ಅನ್ನು ಪೂರ್ಣಗೊಳಿಸಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




