WhatsApp Image 2025 12 12 at 12.05.51 PM

ಗ್ರಾಮೀಣ ಪ್ರದೇಶದ ಮನೆ ಮಾಲೀಕರಿಗೆ ಬಂಪರ್ ಸುದ್ದಿ: ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಿಗೆ ‘OC’ ಮತ್ತು ‘CC’ ಕಡ್ಡಾಯವಲ್ಲ!

Categories:
WhatsApp Group Telegram Group

ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗೆ ಒಂದು ದೊಡ್ಡ ಸಂತಸದ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಮತ್ತು ಪೂರ್ಣಗೊಳಿಸುವಿಕೆ ಪ್ರಮಾಣಪತ್ರ (Completion Certificate – CC) ಪಡೆಯುವುದು ಕಡ್ಡಾಯವಾಗಿರುವುದಿಲ್ಲ. ಈ ಸಂಬಂಧ ಸಚಿವ ಸಂಪುಟದ ಸಭೆಯಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡು ಅನುಮೋದನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

OC ಇಲ್ಲದ ಮನೆಗಳಿಗೆ ವಿದ್ಯುತ್-ನೀರಿನ ಸಂಪರ್ಕ ಪಡೆಯಲು ಅನುಮತಿ

ಹೌದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷಾಂತರ ಮನೆ ಮಾಲೀಕರು ಸ್ವಾಧೀನಾನುಭವ ಪ್ರಮಾಣಪತ್ರ (OC) ಇಲ್ಲದ ಕಾರಣಕ್ಕಾಗಿ ವಿದ್ಯುತ್ (Electricity) ಮತ್ತು ಕುಡಿಯುವ ನೀರಿನ ಸಂಪರ್ಕವನ್ನು (Water Connection) ಪಡೆಯಲು ಸಾಧ್ಯವಾಗದೆ ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದರು. ಇಂತಹ ಗ್ರಾಮೀಣ ಮನೆ ಮಾಲೀಕರಿಗೆ ರಾಜ್ಯ ಸರ್ಕಾರದ ಈ ಹೊಸ ನಿರ್ಧಾರವು ಭಾರಿ ಅನುಕೂಲ ಒದಗಿಸಲಿದೆ.

1,200 ಚದರ ಅಡಿವರೆಗಿನ ನಿವೇಶನಗಳಿಗೆ ವಿನಾಯಿತಿ

ಸರ್ಕಾರದ ಈ ನಿರ್ಣಯದ ಪ್ರಕಾರ, 1,200 ಚದರ ಅಡಿ (ಅಂದರೆ ಸುಮಾರು 30/40 ಅಳತೆಯ ನಿವೇಶನ) ವಿಸ್ತೀರ್ಣದವರೆಗಿನ ಜಾಗದಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ OC ಮತ್ತು CC ಪ್ರಮಾಣಪತ್ರಗಳನ್ನು ಪಡೆಯುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಈ ಸೌಲಭ್ಯವು ಗ್ರಾಮೀಣ ಉಪವಿಧಿಗಳ ಅಡಿಯಲ್ಲಿ ಜಾರಿಗೆ ಬರಲಿದೆ.

ಈ ವಿನಾಯಿತಿಯಿಂದಾಗಿ, ಅರ್ಹತೆ ಇರುವ ಗ್ರಾಮೀಣ ವಸತಿ ಕಟ್ಟಡಗಳು ಇನ್ಮುಂದೆ ಯಾವುದೇ ವಿಳಂಬವಿಲ್ಲದೆ, OC/CC ಇಲ್ಲದಿದ್ದರೂ ಸಹ, ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಪಡೆಯಲು ಸಾಧ್ಯವಾಗಲಿದೆ. ಇದು ಕಟ್ಟಡ ಮಾಲೀಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದ್ದು, ಗ್ರಾಮೀಣ ಜನರ ಜೀವನವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ಒಂದು ಮಹತ್ವದ ಹೆಜ್ಜೆಯಾಗಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories