new ration card scaled

Ration Card: ಹೊಸ BPL ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್? ಸಚಿವರಿಂದ ಬಿಗ್ ಅಪ್ಡೇಟ್! 10 ಲಕ್ಷ ಅನರ್ಹ ಕಾರ್ಡ್ ರದ್ದು.

Categories:
WhatsApp Group Telegram Group

📢 ರೇಷನ್ ಕಾರ್ಡ್ ಬ್ರೇಕಿಂಗ್ ನ್ಯೂಸ್

ಹೊಸ ಬಿಪಿಎಲ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ಶೀಘ್ರದಲ್ಲೇ ಅರ್ಹರಿಗೆ ಹೊಸ ಕಾರ್ಡ್ ವಿತರಣೆ ಆರಂಭವಾಗಲಿದೆ. ಇದೇ ವೇಳೆ, ರಾಜ್ಯದಲ್ಲಿ ಅಕ್ರಮವಾಗಿ ಪಡೆದಿದ್ದ 10 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ (APL) ವರ್ಗಾಯಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ನಿಮ್ಮ ಕಾರ್ಡ್ ಸೇಫ್ ಆಗಿದೆಯಾ? ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

ಹೊಸ ರೇಷನ್ ಕಾರ್ಡ್ ವಿತರಣೆಗೆ ಮುಹೂರ್ತ ಫಿಕ್ಸ್! ಅನರ್ಹರಿಗೆ ಬಿಗ್ ಶಾಕ್ ನೀಡಿದ ಸರ್ಕಾರ.

ಹೊಸ ಕಾರ್ಡ್ ಯಾವಾಗ ಸಿಗುತ್ತೆ? ರಾಜ್ಯದಲ್ಲಿ ಲಕ್ಷಾಂತರ ಜನರು ಹೊಸ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, “ಅರ್ಹರಿಗೆ ಅತಿ ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಿದ್ದೇವೆ” ಎಂದು ಘೋಷಿಸಿದ್ದಾರೆ. ಸರ್ಕಾರದ ಬಳಿ ಹಣದ ಕೊರತೆ ಇಲ್ಲ, ಗ್ಯಾರಂಟಿ ಯೋಜನೆಗಳು (Anna Bhagya) ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

10 ಲಕ್ಷ ಕಾರ್ಡ್ ಎಪಿಎಲ್‌ಗೆ ಶಿಫ್ಟ್!

ಸರ್ಕಾರದ ತನಿಖೆಯಲ್ಲಿ ಒಂದು ಆಘಾತಕಾರಿ ವಿಷಯ ಹೊರಬಿದ್ದಿದೆ. ಶ್ರೀಮಂತರು ಮತ್ತು ಸರ್ಕಾರಿ ನೌಕರರು ಕೂಡ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅಂತಹ ಸುಮಾರು 10,00,000 (10 ಲಕ್ಷ) ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ತಕ್ಷಣವೇ ಎಪಿಎಲ್ (APL) ಗೆ ವರ್ಗಾಯಿಸಲಾಗುತ್ತಿದೆ.

ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಸಿಗಲ್ವಾ?

ಹಿಂದೆ ಎಪಿಎಲ್ ಕಾರ್ಡ್‌ದಾರರಿಗೆ ಕೆ.ಜಿ.ಗೆ 15 ರೂ. ದರದಲ್ಲಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಯಾರೂ ಅಕ್ಕಿ ತೆಗೆದುಕೊಳ್ಳದ ಕಾರಣ ಅದನ್ನು ನಿಲ್ಲಿಸಲಾಗಿದೆ. ಒಂದು ವೇಳೆ ಜನರಿಂದ ಬೇಡಿಕೆ ಬಂದರೆ ಮತ್ತೆ ಅಕ್ಕಿ ವಿತರಣೆ ಬಗ್ಗೆ ಯೋಚಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಅಕ್ರಮ ಅಕ್ಕಿ ದಂಧೆಗೆ ಬ್ರೇಕ್: ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಸರ್ಕಾರ ಸಮರ ಸಾರಿದೆ.

  • 570 ಜನರನ್ನು ಬಂಧಿಸಲಾಗಿದೆ.
  • 29,000 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
  • 314 ವಾಹನಗಳನ್ನು ಸೀಜ್ ಮಾಡಲಾಗಿದೆ.

ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ

ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದೆಯಾ ಅಥವಾ ರದ್ದಾಗಿದೆಯಾ? ಮಾಹಿತಿ ಕಣಜದಲ್ಲಿ ಚೆಕ್ ಮಾಡಲು ಕೆಳಗಿನ ಲಿಂಕ್ ಬಳಸಿ.

ನಾಟಕ ಸರ್ಕಾರದ “ಮಾಹಿತಿ ಕಣಜ” website ಗೆ ಹೋಗಿ.

ಹಂತ 2: My Ration card details ವಿವರಗಳ ಪುಟ ತೆರೆದುಕೊಳ್ಳುತ್ತದೆ.

mk1

ಹಂತ 3: ನಂತರ ನಿಮ್ಮ ಜಿಲ್ಲೆ ಮತ್ತು  ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ  ನಂಬರ್ ಅನ್ನು ನಮೂದಿಸಿ. ನಂತರ ಸಲ್ಲಿಸು/submit ಇದಲ್ಲಿ ಕ್ಲಿಕ್ ಮಾಡಿ.ಅದು ಆದ ಬಳಿಕ my Ration shop details/ನನ್ನ ಪಡಿತರ ಅಂಗಡಿ ವಿವರದ ಪುಟ ತೆರೆಯುತ್ತದೆ. ನಂತರ card status/ಕಾರ್ಡ್ ಸ್ಥಿತಿ  ಸಕ್ರಿಯ/active ಎಂದು ತೋರಿಸಿದರೆ ನಮ್ಮ Ration card ಚಾಲ್ತಿ ಇದೆ ಎಂದು ತಿಳಿಯಬಹುದಾಗಿದೆ.

mk2

ಇನ್ನೊಂದು ವಿಧಾನ

ration card ststus

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories