WhatsApp Image 2025 12 11 at 5.57.07 PM

ಬಿಪಿಎಲ್ ಕಾರ್ಡ್‌ ಸದಸ್ಯರ ಸೇರ್ಪಡೆಗೆ ಹೊಸ ನಿಯಮ : ಜಾತಿ, ಆದಾಯ, ವಿವಾಹ ಪ್ರಮಾಣ ಪತ್ರ ಕಡ್ಡಾಯ

Categories:
WhatsApp Group Telegram Group

ಇತ್ತೀಚೆಗೆ ಸರ್ಕಾರವು ಅನರ್ಹ ಫಲಾನುಭವಿಗಳನ್ನು ಗುರುತಿಸಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಠಿಣ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿ ಮಾಡಿದೆ. ಇನ್ನು ಮುಂದೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರಿಸಲು ಕೇವಲ ಅರ್ಜಿ ಸಲ್ಲಿಸುವುದಷ್ಟೇ ಅಲ್ಲದೆ, ಅಗತ್ಯ ದಾಖಲೆಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಕುಟುಂಬ ಸದಸ್ಯರ ಸೇರ್ಪಡೆ ಮತ್ತು ತಿದ್ದುಪಡಿ ನಿಯಮಗಳು ಕಠಿಣ

ಈ ಹೊಸ ನಿಯಮಾವಳಿಗಳು ಕೇವಲ ಹೊಸ ಪಡಿತರ ಚೀಟಿಗಳಿಗಾಗಿ ಮಾತ್ರವಲ್ಲ, ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಡ್‌ಗಳಲ್ಲಿ ಕುಟುಂಬ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಅಥವಾ ತಿದ್ದುಪಡಿ ಮಾಡಲು ಕೂಡ ಅನ್ವಯವಾಗುತ್ತವೆ.

ಪರಿಷ್ಕರಿಸಿದ ನಿಯಮಗಳ ಪ್ರಕಾರ, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಯಾವುದೇ ತಿದ್ದುಪಡಿ ಮಾಡಬೇಕಾದರೆ ಈ ಕೆಳಗಿನ ಪ್ರಮಾಣ ಪತ್ರಗಳು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು:

ಮಕ್ಕಳಿಗೆ ಸಂಬಂಧಿಸಿದ ದಾಖಲೆಗಳು:

  • 6 ವರ್ಷ ಮೇಲ್ಪಟ್ಟವರಿಗೆ: ಅವರ ಜಾತಿ ಮತ್ತು ಆದಾಯ ಪ್ರಮಾಣಪತ್ರ (Cast and Income Certificate).
  • 6 ವರ್ಷದೊಳಗಿನ ಮಕ್ಕಳಿಗೆ: ಜನನ ಪ್ರಮಾಣಪತ್ರ (Birth Certificate) ಕಡ್ಡಾಯ.

ಹೆಚ್ಚುವರಿಯಾಗಿ, ತಂದೆ-ತಾಯಿಯ ಆಧಾರ್ ಕಾರ್ಡ್‌ಗಳು ಮತ್ತು ಹಾಲಿ ಇರುವ ಪಡಿತರ ಚೀಟಿಯ ಮೂಲ ದಾಖಲೆಗಳು ಇರಬೇಕು.

ವಿವಾಹವಾದವರಿಗೆ ಸಂಬಂಧಿಸಿದ ದಾಖಲೆಗಳು:

  • ಹೊಸದಾಗಿ ಮದುವೆಯಾಗಿರುವ ಸಂದರ್ಭದಲ್ಲಿ, ಪತಿ-ಪತ್ನಿಯರ ಹೆಸರು ಸೇರಿಸಲು ಅಥವಾ ಸೊಸೆಯ ಹೆಸರನ್ನು ಸೇರಿಸಲು ವಿವಾಹ ನೋಂದಣಿ ಪ್ರಮಾಣಪತ್ರ (Marriage Registration Certificate) ಕಡ್ಡಾಯವಾಗಿದೆ.
  • ಸೊಸೆಯ ಹೆಸರನ್ನು ಸೇರಿಸುವಾಗ, ಅವರ ಆಧಾರ್ ಕಾರ್ಡ್ ಮತ್ತು ಹಿಂದಿನ ಪಡಿತರ ಚೀಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಿದ ಬಗ್ಗೆ ದಾಖಲೆಯನ್ನು (Deletion Certificate) ಸಲ್ಲಿಸುವುದು ಅನಿವಾರ್ಯವಾಗಿದೆ.

ಇನ್ನಿತರ ಪ್ರಮುಖ ತಿದ್ದುಪಡಿಗಳು

ಹೆಸರು ಸೇರ್ಪಡೆ ಜೊತೆಗೆ, ಪಡಿತರ ಚೀಟಿಗಳಲ್ಲಿ ಈ ಕೆಳಗಿನ ಪ್ರಮುಖ ತಿದ್ದುಪಡಿಗಳನ್ನು ಕೂಡ ಮಾಡಿಕೊಳ್ಳಲು ಅವಕಾಶವಿದೆ:

  • ಹೆಸರು ತಿದ್ದುಪಡಿ.
  • ಫೋಟೋ ಮತ್ತು ವಿಳಾಸ ಬದಲಾವಣೆ.
  • ಹೆಸರು ಡಿಲೀಟ್ (ತೆಗೆದುಹಾಕುವಿಕೆ).
  • ಪಡಿತರ ಅಂಗಡಿ ಬದಲಾವಣೆ.
  • ಕಾರ್ಡ್‌ನಲ್ಲಿರುವ ಮುಖ್ಯಸ್ಥರ ಬದಲಾವಣೆ.

ಅರ್ಜಿ ಸಲ್ಲಿಕೆ ಹೇಗೆ?

ಫಲಾನುಭವಿಗಳು ಈ ಎಲ್ಲಾ ಸೇರ್ಪಡೆಗಳು ಮತ್ತು ತಿದ್ದುಪಡಿಗಳಿಗಾಗಿ ಅರ್ಜಿಗಳನ್ನು ಬೆಂಗಳೂರು ಒನ್, ಸೈಬರ್ ಸೆಂಟರ್‌ಗಳ ಮೂಲಕ ಅಥವಾ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಸ್ವಯಂ ಅರ್ಜಿ ಸಲ್ಲಿಸಬಹುದು.

ಗಮನಿಸಿ: ಸದ್ಯಕ್ಕೆ ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆಯಲು ಇಲಾಖೆಯು ಅವಕಾಶವನ್ನು ಕಲ್ಪಿಸಿಲ್ಲ. ಬದಲಾಗಿ, ಹಾಲಿ ಇರುವ ಕಾರ್ಡ್‌ಗಳಲ್ಲಿನ ಬದಲಾವಣೆ ಮತ್ತು ಸೇರ್ಪಡೆಗಳಿಗೆ ಮಾತ್ರ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories