ಗುಡ್ ನ್ಯೂಸ್: ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ ಹಣ ಜಮೆಯಾಗಲು ಶುರುವಾಗಿದೆ. ಹಾವೇರಿ, ರಾಯಚೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಮಹಿಳೆಯರಿಗೆ ಬ್ಯಾಂಕ್ ಮೆಸೇಜ್ ಬಂದಿದೆ. ಹಣ ಜಮೆಯಾದ ಸಾಕ್ಷಿ (Proof) ಮತ್ತು ಜಿಲ್ಲಾವಾರು ಪಟ್ಟಿ ಇಲ್ಲಿದೆ.
ಬೆಂಗಳೂರು: ರಾಜ್ಯದ ಕೋಟ್ಯಂತರ ಯಜಮಾನಿಯರು ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. “ಹಣ ಬರುತ್ತೋ ಇಲ್ವೋ” ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದ್ದು, ಮಹಿಳೆಯರ ಮೊಬೈಲ್ಗಳಿಗೆ “Your A/c Credited with Rs 2,000” ಎಂಬ ಮೆಸೇಜ್ಗಳು ಬರಲಾರಂಭಿಸಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ, ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದ್ದು, ಇಂದು (ಮಂಗಳವಾರ) ಪ್ರಮುಖವಾಗಿ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಣ ಜಮೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವ್ಯಾವ ಜಿಲ್ಲೆಗಳಿಗೆ ಹಣ ಬಂದಿದೆ? (District List)
ನಮ್ಮ ಓದುಗರು ಕಳುಹಿಸಿರುವ ಸ್ಕ್ರೀನ್ಶಾಟ್ ಮತ್ತು ಮಾಹಿತಿಯ ಪ್ರಕಾರ, ಈ ಕೆಳಗಿನ ಜಿಲ್ಲೆಗಳಲ್ಲಿ ಇಂದು ಮತ್ತು ನಿನ್ನೆ ಹಣ ಜಮೆಯಾಗಿದೆ:
- ಹಾವೇರಿ: ನಿನ್ನೆಯಿಂದಲೇ ಇಲ್ಲಿನ ಗ್ರಾಮೀಣ ಭಾಗದ ಮಹಿಳೆಯರಿಗೆ ಮೆಸೇಜ್ ಬರಲು ಶುರುವಾಗಿದೆ.
- ರಾಯಚೂರು: ಬೆಳಗಿನ ಜಾವ 6:30 ಕ್ಕೆ ₹2000 ಕ್ರೆಡಿಟ್ ಆಗಿದೆ.
- ಬೆಂಗಳೂರು (ನಗರ & ಗ್ರಾಮಾಂತರ): ರಾಜಧಾನಿಯ ಹಲವು ಕಡೆ ಹಣ ತಲುಪಿದೆ.
- ಧಾರವಾಡ & ಬೆಳಗಾವಿ: ಉತ್ತರ ಕರ್ನಾಟಕದ ಈ ಭಾಗದಲ್ಲೂ ಹಣ ಜಮೆ ಪ್ರಕ್ರಿಯೆ ಚುರುಕಾಗಿದೆ.
- ಕರಾವಳಿ: ಉಡುಪಿ ಮತ್ತು ದಕ್ಷಿಣ ಕನ್ನಡದ ಕೆಲವೆಡೆ ಹಣ ಬಂದಿದೆ.
- ಇತರೆ: ಬಾಗಲಕೋಟೆ, ರಾಮನಗರ (ಆರೋಹಳ್ಳಿ).
ಸಾಕ್ಷಿ ಇಲ್ಲಿದೆ ನೋಡಿ (Payment Proof)

ಸಾಮಾನ್ಯವಾಗಿ ಜನ ಸುಳ್ಳು ಸುದ್ದಿ ಅಂದುಕೊಳ್ಳುತ್ತಾರೆ. ಆದರೆ ಇಲ್ಲಿ ನೋಡಿ, ರಾಯಚೂರಿನ ಮಹಿಳೆಯೊಬ್ಬರಿಗೆ ನವೆಂಬರ್ 26 ಮತ್ತು ಡಿಸೆಂಬರ್ 2 ರಂದು ಹಣ ಜಮೆಯಾಗಿರುವ ಬ್ಯಾಂಕ್ ಮೆಸೇಜ್ ಸಾಕ್ಷಿ ಸಿಕ್ಕಿದೆ.

APL ಕಾರ್ಡ್ಗೂ ಹಣ ಬಂತಾ? (Shocking Update)
ಇದೊಂದು ಅಚ್ಚರಿಯ ಸಂಗತಿ! ನಿಯಮದ ಪ್ರಕಾರ ಕೇವಲ BPL ಮತ್ತು ಅಂತ್ಯೋದಯ ಕಾರ್ಡ್ಗೆ ಮಾತ್ರ ಹಣ ಬರಬೇಕು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅಥವಾ ಅದೃಷ್ಟವಶಾತ್ ಕೆಲವೊಂದು APL ಕಾರ್ಡ್ ಹೊಂದಿರುವವರಿಗೂ ₹2,000 ಜಮೆಯಾಗಿದೆ ಎಂದು ವರದಿಯಾಗಿದೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ!
ನನಗೆ ಇನ್ನೂ ಮೆಸೇಜ್ ಬಂದಿಲ್ಲ, ಯಾಕೆ?
ಗಾಬರಿಯಾಗಬೇಡಿ. ಸರ್ಕಾರ ಒಟ್ಟಿಗೆ 1.2 ಕೋಟಿ ಜನರಿಗೆ ಹಣ ಹಾಕಲು ಆಗುವುದಿಲ್ಲ (Server Issue).
- ಈಗಾಗಲೇ 80% ಜನರಿಗೆ ಹಣ ಬಿಡುಗಡೆ ಮಾಡಲಾಗಿದೆ.
- ಉಳಿದ 20% ಜನರಿಗೆ ಈ ವಾರದ ಒಳಗೆ (ಶನಿವಾರದೊಳಗೆ) ಹಣ ತಲುಪಲಿದೆ.
ಚೆಕ್ ಮಾಡುವುದು ಹೇಗೆ?
ಬ್ಯಾಂಕ್ಗೆ ಹೋಗಿ ಕ್ಯೂ ನಿಲ್ಲುವ ಬದಲು, ಮನೆಯಲ್ಲೇ ಕುಳಿತು ಚೆಕ್ ಮಾಡಿ:
- ಪ್ಲೇ ಸ್ಟೋರ್ನಿಂದ ‘DBT Karnataka’ ಆ್ಯಪ್ ಡೌನ್ಲೋಡ್ ಮಾಡಿ.
- ನಿಮ್ಮ ಆಧಾರ್ ನಂಬರ್ ಹಾಕಿ ಲಾಗಿನ್ ಆಗಿ.
- ‘Payment Status’ ನಲ್ಲಿ ‘Gruha Lakshmi’ ಸೆಲೆಕ್ಟ್ ಮಾಡಿ.
ನಿಮ್ಮ ಜಿಲ್ಲೆ ಯಾವುದು? ಮತ್ತು ನಿಮಗೆ ಹಣ ಬಂದಿದೆಯಾ? ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ. ಇದರಿಂದ ಬೇರೆಯವರಿಗೂ ಸಹಾಯವಾಗುತ್ತದೆ.
ನಿಮಗೆ ಹಣ ಬಂದಿದೆಯಾ? ಸ್ಕ್ರೀನ್ಶಾಟ್ ಕಳುಹಿಸಿ 👇
💬 ವಾಟ್ಸಪ್ ಮೂಲಕ ತಿಳಿಸಿ: 9901760108ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply