WhatsApp Image 2025 12 02 at 2.40.22 PM

ರಾಜ್ಯದ `ಆಸ್ತಿ’ ಮಾಲೀಕರೇ ಗಮನಿಸಿ : ಮನೆ ಬಾಗಿಲಿಗೆ ಬರುತ್ತೆ  `ಇ-ಸ್ವತ್ತು’ ಪಡೆಯುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು?

WhatsApp Group Telegram Group

ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶದ ಜನರ ಆಸ್ತಿಗಳಿಗೆ ಡಿಜಿಟಲ್ ಸುರಕ್ಷತೆಯನ್ನು ಒದಗಿಸುವ ಗುರಿಯೊಂದಿಗೆ ಮಹತ್ವಾಕಾಂಕ್ಷೆಯ ಇ-ಸ್ವತ್ತು 2.0 ತಂತ್ರಾಂಶಕ್ಕೂ ಅಧಿಕೃತವಾಗಿ ಚಾಲನೆ ನೀಡಿದರು. ಈ ಹೊಸ ವ್ಯವಸ್ಥೆಯು ಗ್ರಾಮೀಣ ಭಾಗದ ನಾಗರಿಕರಿಗೆ ತಮ್ಮ ಆಸ್ತಿ ದಾಖಲೆಗಳನ್ನು (ಇ-ಖಾತಾ) ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯಲು ಸಹಾಯ ಮಾಡಲಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ವಿತರಣೆ

ಈ ನೂತನ ಯೋಜನೆ ಅಡಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಅಥವಾ ಈವರೆಗೆ ಸೂಕ್ತ ದಾಖಲೆ ಭದ್ರತೆಯನ್ನು ಪಡೆಯದ ಸ್ವತ್ತುಗಳಿಗೆ ಇ-ಖಾತೆ ವಿತರಿಸುವ ಬೃಹತ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ಗ್ರಾಮೀಣ ಆಸ್ತಿಗಳ ದಾಖಲಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ತ್ವರಿತ ವಿಲೇವಾರಿ ಖಚಿತಪಡಿಸುವುದು. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣೆ ಕಾರ್ಯಕ್ರಮ ಜಾರಿಯಲ್ಲಿದೆ. ಇ-ಸ್ವತ್ತು 2.0 ತಂತ್ರಾಂಶವನ್ನು ಬಳಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಇ-ಖಾತೆ ನೀಡಲು ಸರ್ಕಾರ ಗುರಿ ಹೊಂದಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಜೊತೆಗೆ, ತಮ್ಮ ಆಸ್ತಿಯ ಸ್ಥಿತಿಗತಿಗಳನ್ನು ಈ ತಂತ್ರಾಂಶದಲ್ಲಿ ಪರಿಶೀಲಿಸಬಹುದಾಗಿದೆ.

WhatsApp Image 2025 12 02 at 2.24.00 PM

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಹತ್ವದ ಹೇಳಿಕೆ

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, “ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದು ಎಲ್ಲಾ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡುವ ಮೂಲಕ ನಿಮ್ಮೆಲ್ಲರ ಬದುಕಿಗೆ ಹೊಸ ರೂಪ ನೀಡಲಿದೆ. ಅರ್ಜಿಯನ್ನು ಸಲ್ಲಿಸಿದ 15 ದಿನಗಳ ಒಳಗೆ ಖಾತೆ ವಿತರಿಸಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕೂಡ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು. ಆನ್‌ಲೈನ್ ಮೂಲಕ ಮತ್ತು ಬಾಪುಜಿ ಕೇಂದ್ರಗಳಲ್ಲಿ ಇ-ಖಾತೆ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಖಾತೆಗಳ ಮೂಲಕ ತೆರಿಗೆ ಪಾವತಿಸಿ, ನಿಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗಳ ವಿತರಣೆ

ಸ್ವಾವಲಂಬನೆ ಸಾಧಿಸಲು ಸ್ಥಳೀಯ ಸಂಪನ್ಮೂಲಗಳನ್ನು ಸೃಷ್ಟಿಸಿಕೊಂಡು, ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಶ್ರಮಿಸಿದ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ಪಂಚಾಯತ್‌ಗಳಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.

ಆಸ್ತಿ ದಾಖಲೆ ಸರಿಪಡಿಸುವುದು ಸರ್ಕಾರದ 6ನೇ ಗ್ಯಾರಂಟಿ

ಉಪಮುಖ್ಯಮಂತ್ರಿಯವರು ಕಾಂಗ್ರೆಸ್ ಸರ್ಕಾರದ ಬದ್ಧತೆಯನ್ನು ಉಚ್ಚರಿಸಿದರು. “ಈ ಹಿಂದಿನ ನಮ್ಮ ಸರ್ಕಾರವು ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಈಗ, ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆಗಳನ್ನು ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ,” ಎಂದು ಅವರು ತಿಳಿಸಿದರು. ಬೆಂಗಳೂರಿನಲ್ಲಿ ಈವರೆಗೆ ನಡೆಸಿದ ಇ-ಖಾತಾ ಅಭಿಯಾನದಲ್ಲಿ 25 ಲಕ್ಷ ಆಸ್ತಿಗಳ ಪೈಕಿ 6 ಲಕ್ಷ ಜನರಿಗೆ ಇ-ಖಾತಾ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ವಿಜಯನಗರ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮಗೊಳಿಸಿ 1,11,111 ಜನರಿಗೆ ಹಕ್ಕುಪತ್ರ ಮತ್ತು ಭೂ ದಾಖಲೆಗಳನ್ನು ವಿತರಿಸಿದ ಕಾರ್ಯವನ್ನು ಸಹ ಅವರು ವಿವರಿಸಿದರು.

ಇ-ಸ್ವತ್ತು ಪಡೆಯಲು ಬೇಕಾದ ಪ್ರಮುಖ ದಾಖಲೆಗಳ ಪಟ್ಟಿ

WhatsApp Image 2025 12 02 at 2.43.21 PM

ಗ್ರಾಮೀಣ ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು:

  1. ಋಣಭಾರ ಪ್ರಮಾಣ ಪತ್ರ (ನಮೂನೆ-15).
  2. ನೋಂದಾಯಿತ ಪತ್ರಗಳು: ಸೇಲ್ ಡೀಡ್ / ಸ್ವತ್ತಿನ ಕಾರ್ಡ್ / ಪಿತ್ರಾರ್ಜಿತ ಆಸ್ತಿ / ಆಸ್ತಿ ವಿಭಜನೆ / ಗಿಫ್ಟ್ ಡೀಡ್ / ವಿಲ್ / ಹಕ್ಕುಪತ್ರ / ರಿಲೀಜ್ ಡೀಡ್ / ವರ್ಗಾವಣೆ / ಸೆಟ್ಸ್‌ಮೆಂಟ್ / ನ್ಯಾಯಾಲಯದ ಆದೇಶ / ಒಟ್ಟುಗೂಡಿಸು / ವಿಭಾಗ ಪತ್ರ / ಅದಲು ಬದಲು ಅಥವಾ ಇತರೆ ನೋಂದಾಯಿತ ಪತ್ರ.
  3. ಹಕ್ಕುಪತ್ರ.
  4. ಭೂ ಪರಿವರ್ತಿತ ದಾಖಲಾತಿಗಳು.
  5. ಅನುಮೋದಿತ ಬಡಾವಣೆ ನಕ್ಷೆ/ ಏಕನಿವೇಶನ ನಕ್ಷೆ (ಭೂ ಪರಿವರ್ತನೆಯಾಗಿದ್ದರೆ).
  6. ಕರ್ನಾಟಕ ಭೂ ಕಂದಾಯ ಕಾಯಿದೆ 164 ರ ಸೆಕ್ಷನ್ 94 ಸಿ ಅಡಿಯಲ್ಲಿ ವಿತರಿಸಿದ ಹಕ್ಕು ಪತ್ರ.
  7. ಕಟ್ಟಡವಾಗಿದ್ದಲ್ಲಿ ವಿದ್ಯುತ್‌ ರಸೀದಿ.
  8. ಕಂದಾಯ ಪಾವತಿ ರಸೀದಿ.
  9. ಆಧಾರ್ ಹೊರತುಪಡಿಸಿ ಗುರುತಿನ ಚೀಟಿ (ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿ).
  10. ಆಸ್ತಿಯೊಂದಿಗೆ ನಿಂತು ತೆಗೆಸಿದ ಛಾಯಾಚಿತ್ರ.
  11. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.
  12. ಪೌತಿ ಸಂಬಂಧ ಕರನಿರ್ಧರಣೆ ಪಟ್ಟಿ ಬದಲಾವಣೆಯಾಗಿದ್ದಲ್ಲಿ ವಂಶವೃಕ್ಷ ಹಾಗೂ ಮರಣ ಪ್ರಮಾಣ ಪತ್ರ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories