ssc gd constable recruitment 2025 scaled

SSC GD Recruitment: 25,487 ಕಾನ್‌ಸ್ಟೆಬಲ್ ಹುದ್ದೆಗಳ ಬೃಹತ್ ನೇಮಕಾತಿ , ₹69,000 ಸಂಬಳ! ಅರ್ಜಿ ಸಲ್ಲಿಕೆ ಆರಂಭ

Categories:
WhatsApp Group Telegram Group

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವ ರಾಜ್ಯದ ಯುವಜನತೆಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಕೇವಲ SSLC (10ನೇ ತರಗತಿ) ಪಾಸಾದವರಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಬರೋಬ್ಬರಿ 25,487 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ನೀವು ಪೊಲೀಸ್ ಅಥವಾ ಸೇನೆಗೆ ಸೇರಲು ಬಯಸಿದ್ದರೆ, ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿಲ್ಲ. ಡಿಸೆಂಬರ್ 1 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಹುದ್ದೆಯ ಸಂಪೂರ್ಣ ವಿವರ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ? (Vacancy Breakdown)

ಈ ಬಾರಿ ಅತಿ ಹೆಚ್ಚು ಹುದ್ದೆಗಳು CISF ನಲ್ಲಿ ಖಾಲಿ ಇವೆ. ನಿಮ್ಮ ಆಯ್ಕೆಯ ಪಡೆಗೆ ನೀವು ಅರ್ಜಿ ಸಲ್ಲಿಸಬಹುದು.

ಪಡೆ (Force) ಹುದ್ದೆಗಳು (Posts)
CISF (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) 14,595 (Highest)
CRPF (ಮೀಸಲು ಪೊಲೀಸ್) 5,490
BSF (ಗಡಿ ಭದ್ರತಾ ಪಡೆ) 616
SSB (ಸಶಸ್ತ್ರ ಸೀಮಾ ಬಲ) 1,764
ITBP & Others 3,022
ಒಟ್ಟು ಹುದ್ದೆಗಳು 25,487

ಅರ್ಹತೆಗಳೇನು? (Eligibility)

  • ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.
  • ವಯಸ್ಸು: 18 ರಿಂದ 23 ವರ್ಷದೊಳಗಿರಬೇಕು (01-01-2026 ಕ್ಕೆ ಅನ್ವಯಿಸುವಂತೆ).
  • ವಯೋಮಿತಿ ಸಡಿಲಿಕೆ: SC/ST ಗೆ 5 ವರ್ಷ, OBC ಗೆ 3 ವರ್ಷ ಸಡಿಲಿಕೆ ಇದೆ.

ಸಂಬಳ ಎಷ್ಟು ಸಿಗುತ್ತದೆ? (Salary)

ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ₹21,700 ರಿಂದ ₹69,100 ರವರೆಗೆ ಮಾಸಿಕ ವೇತನ ಮತ್ತು ಇತರೆ ಭತ್ಯೆಗಳು ಸಿಗಲಿವೆ.

ಆಯ್ಕೆ ಪ್ರಕ್ರಿಯೆ ಹೇಗೆ?

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಆನ್‌ಲೈನ್ ಎಕ್ಸಾಮ್).
  2. ದೈಹಿಕ ಸಾಮರ್ಥ್ಯ ಪರೀಕ್ಷೆ (Running/Physical Test).
  3. ವೈದ್ಯಕೀಯ ಪರೀಕ್ಷೆ (Medical).

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ: ₹100
  • ಮಹಿಳೆಯರು, SC/ST ಮತ್ತು ಮಾಜಿ ಸೈನಿಕರಿಗೆ: ಶುಲ್ಕ ಇಲ್ಲ (Free).

ಪ್ರಮುಖ ದಿನಾಂಕಗಳು (Important Dates)

  • ಅರ್ಜಿ ಆರಂಭ: 01 ಡಿಸೆಂಬರ್ 2025
  • ಕೊನೆಯ ದಿನಾಂಕ: 31 ಡಿಸೆಂಬರ್ 2025
  • ಪರೀಕ್ಷೆ ನಡೆಯುವ ಸಮಯ: ಫೆಬ್ರವರಿ – ಏಪ್ರಿಲ್ 2026

ಅರ್ಜಿ ಸಲ್ಲಿಸುವುದು ಹೇಗೆ?

ಕೆಳಗೆ ಕೊಟ್ಟಿರುವ ಪ್ರಮುಖ ಲಿಂಕುಗಳ ಟೇಬಲ್ ನಲ್ಲಿ ಅಧಿಕೃತ ಅಧಿಸೂಚನೆ PDF ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಓದಿಕೊಳ್ಳಿ

ನಂತರ ಆನ್ ಲೈನ್ ಅರ್ಜಿ ಲಿಂಕ್ ಮುಂದೆ ಇರುವ “Apply Now” ಬಟನ್ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಿ,

ಮೊದಲು ನೋಂದಣಿ (Registration) ಮಾಡಿಕೊಂಡು ನಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನದವರೆಗೂ ಕಾಯಬೇಡಿ, ಸರ್ವರ್ ಸ್ಲೋ ಆಗಬಹುದು!

ಪ್ರಮುಖ ಲಿಂಕ್‌ಗಳು (Direct Links) ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ (PDF) Download PDF
ಆನ್‌ಲೈನ್ ಅರ್ಜಿ ಲಿಂಕ್ Apply Now 👈
ಅಧಿಕೃತ ವೆಬ್‌ಸೈಟ್ Click Here 🌐
ಇನ್ನಷ್ಟು ಉದ್ಯೋಗ ಮಾಹಿತಿ Click Here 🌐

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories