Picsart 25 11 30 23 08 21 873 scaled

ಬೆಂಗಳೂರು ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಗರಿಷ್ಠ 2 ತಿಂಗಳ ಮುಂಗಡ ಪಾವತಿಗೆ ಆದೇಶ

Categories:
WhatsApp Group Telegram Group

ಭಾರತದ ಐಟಿ ನಾಡು ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರಕ್ಕೆ ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ, ಮತ್ತು ತಮ್ಮ ಕನಸುಗಳನ್ನು ನನಸುಮಾಡಿಕೊಳ್ಳಲು ಬರುತ್ತಾರೆ. ಇಲ್ಲಿಗೆ ಬಂದವರಿಗೆ ಮೊದಲ ಸವಾಲೇ ಬಾಡಿಗೆ ಮನೆ ಹುಡುಕೋದು. ಮನೆ ಸಿಕ್ಕರೂ ಮನೆ ಮಾಲೀಕರ ಶರತ್ತುಗಳು, ಹೆಚ್ಚು ಬಾಡಿಗೆ, ಗಗನಕ್ಕೇರುತ್ತಿರುವ ಭದ್ರತಾ ಠೇವಣಿಗಳು ಇವುಗಳೆಲ್ಲ ಸಾಮಾನ್ಯ ಜನರ ಮೇಲೆ ಆರ್ಥಿಕ ಒತ್ತಡವನ್ನು ಸೃಷ್ಠಿಸುತ್ತಿದ್ದವು. ವಿಶೇಷವಾಗಿ 6 ರಿಂದ 10 ತಿಂಗಳವರೆಗಿನ ಮುಂಗಡ ಹಣವನ್ನು ಒತ್ತಾಯಿಸುವ ಪದ್ಧತಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿತ್ತು.

ಈ ಹಿನ್ನೆಲೆಯಲ್ಲೇ ಬಾಡಿಗೆ ಮಾರುಕಟ್ಟೆಗೆ ಶಿಸ್ತು ತರಲು ಮತ್ತು ಬಾಡಿಗೆದಾರರ ಪರ ಹಿತಕರ ವಾತಾವರಣ ನಿರ್ಮಿಸಲು ಹೊಸ ಹೋಮ್ ರೆಂಟ್ ರೂಲ್ಸ್ – 2025 ಜಾರಿಗೆ ತರಲಾಗುತ್ತಿದೆ. ಇದರಿಂದ ಮನೆ ಮಾಲೀಕರು ಹಾಗೂ ಬಾಡಿಗೆದಾರರ ಮಧ್ಯೆ ಪಾರದರ್ಶಕತೆ ಹೆಚ್ಚಾಗಲಿದ್ದು, ಅನವಶ್ಯಕ ಶೋಷಣೆಗೆ ಬ್ರೇಕ್ ಬೀಳುವ ನಿರೀಕ್ಷೆ ಮೂಡಿದೆ.

ಹೊಸ ನಿಯಮಗಳು ಏನು ಹೇಳುತ್ತವೆ?:

ಕಾನೂನಿನ ಪ್ರಕಾರ ಗರಿಷ್ಠ 2 ತಿಂಗಳ ಬಾಡಿಗೆಗಷ್ಟೇ ಮುಂಗಡ ಹಣವನ್ನು ವಸೂಲು ಮಾಡಬಹುದು.ಹಿಂದಿನಂತೆ 6–10 ತಿಂಗಳ ಠೇವಣಿ ಕೇಳುವಂತಿಲ್ಲ. ಇದರಿಂದ ಬಾಡಿಗೆ ಮನೆಗೆ ಬರುವುದಕ್ಕೆ ಸಾಮಾನ್ಯ ಜನರಿಗೆ ಸುಲಭವಾಗಲಿದೆ.

ಬಾಡಿಗೆ ಒಪ್ಪಂದದ ಕಡ್ಡಾಯ ನೋಂದಣಿ:

ಬಾಡಿಗೆ ಒಪ್ಪಂದವನ್ನು 2 ತಿಂಗಳ ಒಳಗೆ ನೇರವಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಥವಾ ಆನ್‌ಲೈನ್ ಮೂಲಕಲೇ ನೋಂದಣಿ ಮಾಡಲೇಬೇಕು. ಉಲ್ಲಂಘನೆ ಮಾಡಿದಲ್ಲಿ ₹5,000 ದಂಡ ಹಾಕಲಾಗುತ್ತದೆ.

ಬಾಡಿಗೆ ಹೆಚ್ಚಳಕ್ಕೆ ನಿಯಂತ್ರಣ:

ಬಾಡಿಗೆ ಹಣವನ್ನು ಮನೆ ಮಾಲೀಕರು ವರ್ಷಕ್ಕೊಮ್ಮೆ ಮಾತ್ರ ಹೆಚ್ಚಿಸಬಹುದು. ಅದರಲ್ಲೂ 3 ತಿಂಗಳು ಮುಂಚೆ ಬಾಡಿಗೆದಾರರಿಗೆ ತಿಳಿಸಲೇಬೇಕು.

ಡಿಜಿಟಲ್ ಪಾವತಿಗೆ ಆದ್ಯತೆ:

ತಿಂಗಳಿಗೆ ₹5,000 ಕ್ಕಿಂತ ಹೆಚ್ಚಿನ ಬಾಡಿಗೆ ಇದ್ದರೆ ಯುಪಿಐ / ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಕಡ್ಡಾಯ ಪಾವತಿ.
₹50,000 ಕ್ಕಿಂತ ಹೆಚ್ಚಿನ ಬಾಡಿಗೆ ಇದ್ದರೆ ಟಿಡಿಎಸ್ ಕಡಿತ ಅನಿವಾರ್ಯ.
ಇದರಿಂದ ದುಬಾರಿ ಬಾಡಿಗೆ ಮನೆಗಳಿಗೆ ತೆರಿಗೆ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.

ಹೊಸ ನಿಯಮಗಳ ಪರಿಣಾಮ:

ಬಾಡಿಗೆ ಮನೆ ಹುಡುಕುವವರಿಗೆ ಆರ್ಥಿಕ ಬಿಕ್ಕಟ್ಟು ಕಡಿಮೆಯಾಗುತ್ತದೆ.
ಶೋಷಣೆಗೆ ತಡೆ, ಕಾನೂನುಬದ್ಧತೆ ಬಲವಾಗುವುದು.
ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ವಿವಾದಗಳ ಸಂಖ್ಯೆ ಕಡಿಮೆಯಾಗುವುದು.
ಡಿಜಿಟಲ್ ದಾಖಲೆಗಳಿಂದ ವಂಚನೆ, ಮೋಸ ಪ್ರಕರಣಗಳು ಕಡಿಮೆಯಾಗುತ್ತವೆ.

ಒಟ್ಟಾರೆಯಾಗಿ, ಹೊಸ ಬಾಡಿಗೆ ನಿಯಮಗಳು 2025 ಜಾರಿಯಾದರೆ, ಬೆಂಗಳೂರಿನಲ್ಲಿ ಮನೆ ಬಾಡಿಗೆ ವ್ಯವಸ್ಥೆ ಹೆಚ್ಚು ಪಾರದರ್ಶಕವಾಗುವುದರ ಜೊತೆ, ಬಾಡಿಗೆದಾರರ ಹಿತವನ್ನು ಕಾಪಾಡುವ ಕಾನೂನುಬದ್ಧ ಕ್ರಮಕ್ಕೆ ದಾರಿ ತೆರೆದಂತಾಗಿದೆ. ಈ ಬದಲಾವಣೆಯಿಂದ ಮನೆ ಹುಡುಕುವವರಿಗೆ ಸಿಗುವ ನಿಶ್ಚಿತತೆ ಮತ್ತು ರಿಲೀಫ್ ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯನ್ನು ಹೊಸ ಹಾದಿಯತ್ತ ಕೊಂಡೊಯ್ಯಲಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories