ಕರ್ನಾಟಕದ ಪ್ರಮುಖ ಸರ್ಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ KPCL ಮತ್ತೆ ಹೊಸ ಉದ್ಯೋಗ ಅವಕಾಶಗಳ ಅಧಿಸೂಚನೆಯೊಂದಿಗೆ ತನ್ನ ಹಾಜರಾತಿ ಪ್ರಕಟಿಸಿದೆ. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯಲ್ಲಿ ಸಮಾನ ಅವಕಾಶ ಒದಗಿಸುವ ಪ್ರಯತ್ನದ ಅಂಗವಾಗಿ, ಈ ಬಾರಿ ಎ-ದರ್ಜೆಯ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು KPCL ಅಧಿಕೃತ ಪ್ರಕಟಣೆ ಹೊರಡಿಸಿದೆ.
ವಿದ್ಯುತ್ ಉತ್ಪಾದನೆ, ನಿರ್ವಹಣೆ ಮತ್ತು ತಾಂತ್ರಿಕ ಸಾಮರ್ಥ್ಯದ ದೃಷ್ತಿಯಿಂದ ದೇಶದ ಅಗ್ರ ಸಂಸ್ಥೆಗಳಲ್ಲಿ KPCL ಒಂದು; ಇಲ್ಲಿ ಕೆಲಸ ಪಡೆಯುವುದು ಅನೇಕ ಯುವಕರ ಆಶಯ. ವಿಶೇಷವಾಗಿ SC ಮತ್ತು ST ಅಭ್ಯರ್ಥಿಗಳಿಗಾಗಿ ಮೀಸಲಾಗಿರುವ ಈ ನೇಮಕಾತಿ 2025ರ ಪ್ರಮುಖ ಅವಕಾಶಗಳಲ್ಲಿ ಒಂದಾಗಿದೆ.
ನೇಮಕಾತಿ ಮತ್ತು ಹುದ್ದೆಗಳ ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL)
ಹುದ್ದೆಗಳ ಹೆಸರು: ಫ್ಯಾಕ್ಟರಿ ಮೆಡಿಕಲ್ ಆಫೀಸರ್(Factory Medical Officer), ಮೆಡಿಕಲ್ ಆಫೀಸರ್(Medical Officer), ಅಕೌಂಟ್ಸ್ ಅಫೀಸರ್(Accounts Officer).
ಒಟ್ಟು ಹುದ್ದೆಗಳು: 04
ಉದ್ಯೋಗ ಸ್ಥಳ: KPCL ವಿದ್ಯುತ್ ಯೋಜನಾ ಪ್ರದೇಶಗಳು, ಕರ್ನಾಟಕ
ಅರ್ಜಿ ಸಲ್ಲಿಸುವ: ವಿಧಾನಆಫ್‌ಲೈನ್ / ಇಮೇಲ್ ಮೂಲಕ (ನಿಗದಿತ ನಮೂನೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.12.2025 (ಸಂಜೆ 5:00 ಗಂಟೆಯೊಳಗೆ)
ಹುದ್ದೆವಾರು ಮೀಸಲಾತಿ ಮತ್ತು ವಿದ್ಯಾರ್ಹತೆ:
ಈ ನೇಮಕಾತಿಯು ಹೈದರಾಬಾದ್-ಕರ್ನಾಟಕ ಪ್ರದೇಶವನ್ನು ಹೊರತುಪಡಿಸಿದ ಮಿಕ್ಕುಳಿದ ವೃಂದಕ್ಕೆ (Residual Parent Cadre) ಮಾತ್ರ ಮೀಸಲಾಗಿರುತ್ತದೆ.
ಫ್ಯಾಕ್ಟರಿ ಮೆಡಿಕಲ್ ಆಫೀಸರ್ (02 ಹುದ್ದೆಗಳು – SC: 01, ST: 01)
ವಿದ್ಯಾರ್ಹತೆ: ನಿಯಮಿತ MBBS ಪದವಿ, ಜೊತೆಗೆ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ಸ್ವಾಸ್ಥ್ಯದಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ (ಡಿಪ್ಲೋಮಾ ಹೊಂದಿರುವವರಿಗೆ ಈ ತರಬೇತಿ ಅವಶ್ಯಕತೆ ಇಲ್ಲ) ಮತ್ತು 2 ವರ್ಷಗಳ ಅನುಭವ (ಇಂಟರ್ನ್‌ಶಿಪ್ ಹೊರತುಪಡಿಸಿ).
ಮೆಡಿಕಲ್ ಆಫೀಸರ್ (01 ಹುದ್ದೆ – ST: 01)
ವಿದ್ಯಾರ್ಹತೆ: MBBS ಪದವಿ ಮತ್ತು 2 ವರ್ಷಗಳ ಉದ್ಯೋಗ ಅನುಭವ (ಇಂಟರ್ನ್‌ಶಿಪ್ ಜೊತೆಗೆ).
ಅಕೌಂಟ್ಸ್ ಅಫೀಸರ್ (01 ಹುದ್ದೆ – ST: 01)
ವಿದ್ಯಾರ್ಹತೆ: ಪ್ರಥಮ ದರ್ಜೆಯಲ್ಲಿ ಪದವಿ ಜೊತೆಗೆ ICWA ಅಥವಾ CA ಕೋರ್ಸ್‌ಗಳಲ್ಲಿ ತೇರ್ಗಡೆ.
ವಯೋಮಿತಿ ಮತ್ತು ವೇತನಶ್ರೇಣಿ:
ವಯೋಮಿತಿ (ಕಡೇ ದಿನಾಂಕಕ್ಕೆ): ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ.
ವಯೋಮಿತಿ ಸಡಿಲಿಕೆ: ಮಾಜಿ ಸೈನಿಕರಿಗೆ ಸೇವೆ ಅನುಗುಣವಾಗಿ ಮತ್ತು 3 ವರ್ಷ ಸಡಿಲಿಕೆ. ವಿಕಲಚೇತನರು ಮತ್ತು ವಿಧವೆಯರಿಗೆ 10 ವರ್ಷಗಳವರೆಗೆ ಸಡಿಲಿಕೆ ಲಭ್ಯವಿದೆ.
ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮವಾದ ರೂ. 81,210 ರಿಂದ ರೂ. 2,03,450 ವರೆಗಿನ ವೇತನ ಶ್ರೇಣಿ ದೊರೆಯಲಿದ್ದು, ಇದರೊಂದಿಗೆ ಎನ್‌ಪಿಎಸ್ (NPS) ಸೇರಿದಂತೆ ಇತರೆ ಭತ್ಯೆಗಳು ಮತ್ತು ಸೌಲಭ್ಯಗಳು ಅನ್ವಯವಾಗುತ್ತವೆ.
ಅರ್ಜಿ ಶುಲ್ಕ ಮತ್ತು ಸಲ್ಲಿಕೆ ಪ್ರಕ್ರಿಯೆ:
ಅರ್ಜಿ ಶುಲ್ಕ:
ಮೊತ್ತ: ರೂ. 500/- (ಮರುಪಾವತಿ ಇರುವುದಿಲ್ಲ).
ಪಾವತಿ ವಿಧಾನ: ಅರ್ಜಿದಾರರು ಕೆಳಗೆ ನೀಡಲಾದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿ, ಅದರ ಉಲ್ಲೇಖ ಸಂಖ್ಯೆಯನ್ನು (Reference Number/UTR) ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.
ಬ್ಯಾಂಕ್ ವಿವರಮಾಹಿತಿ:
ಬೆನಿಫಿಶಿಯರಿ ಹೆಸರು: KARNATAKA POWER CORPORATION LTD
ಬ್ಯಾಂಕ್: STATE BANK OF INDIA (IFB Branch, Residency Plaza)
ಖಾತೆ ಸಂಖ್ಯೆ: 10503342643
IFSC ಕೋಡ್: SBIN0009077
ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ
KPCL ಅಧಿಕೃತ ವೆಬ್‌ಸೈಟ್ ತೆರೆಯಿರಿ:
https://kpcl.karnataka.gov.in
“Recruitment” ವಿಭಾಗದಿಂದ Application Form ಡೌನ್‌ಲೋಡ್ ಮಾಡಿ.
ಸರಿಯಾದ ಮಾಹಿತಿಯನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
ಶುಲ್ಕ ಪಾವತಿಸಿ, ಬ್ಯಾಂಕ್ Reference/UTR Number ಸೇರಿಸಿ.
ಅಗತ್ಯ ದಾಖಲೆಗಳ self-attested ಪ್ರತಿಗಳನ್ನು ಲಗತ್ತಿಸಿ:
ವಿದ್ಯಾರ್ಹತೆ ದಾಖಲೆಗಳು
DOB Certificate
ಜಾತಿ ಪ್ರಮಾಣ ಪತ್ರ
ಅನುಭವ ಪತ್ರ
ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ ಅಥವಾ
ಇಮೇಲ್ ಮಾಡಿ: [email protected]
ಕೊನೆಯ ದಿನಾಂಕ: 26-12-2025 ಸಂಜೆ 5 ಗಂಟೆ
ಆಯ್ಕೆ ವಿಧಾನ: ಕೇವಲ ಮೆರಿಟ್ ಆಧಾರದ ಮೇಲೆ!
ಈ ನೇಮಕಾತಿಯಲ್ಲಿ ಯಾವುದೇ ಸಂದರ್ಶನ(Interview) ಪ್ರಕ್ರಿಯೆ ಇರುವುದಿಲ್ಲ. ಆಯ್ಕೆಯು ಸಂಪೂರ್ಣವಾಗಿ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಡೆಯುತ್ತದೆ:
ಮೆಡಿಕಲ್ ಆಫೀಸರ್ ಹುದ್ದೆಗಳು: MBBS ಪದವಿಯ ಎಲ್ಲಾ ವರ್ಷಗಳ/ಸೆಮಿಸ್ಟರ್‌ಗಳ ಸರಾಸರಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಅಕೌಂಟ್ಸ್ ಅಫೀಸರ್ ಹುದ್ದೆ: ICWA ಅಥವಾ CA ಪದವಿಯಲ್ಲಿ ಗಳಿಸಿದ ಅಂಕಗಳ ಶೇಕಡಾ 75% ರಷ್ಟನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಗಮನಿಸಿ: ಎಸ್‌ಎಸ್‌ಎಲ್‌ಸಿ ಮಟ್ಟದಲ್ಲಿ ಕನ್ನಡ ವಿಷಯವಿಲ್ಲದೇ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳು, ನಿಗಮ ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಪಾಸ್ ಆಗಬೇಕು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group





Leave a Reply