ನಿಮ್ಮ ಹಳೆಯ ಮನೆಯು ಮಳೆ ಬಂದಾಗ ಸೋರುತ್ತಿದೆಯೇ? ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆಯೇ?, ಹಳೆಯ ಮನೆಯ ರಿಪೇರಿ ಮಾಡಿಸಲು ಬೇಕಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು ಒಂದು ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿಯಲ್ಲಿ, ನಿಮ್ಮ ಹಳೆಯ ಮನೆಯನ್ನು ರಿಪೇರಿ ಮಾಡಿಸಲು ಸಬ್ಸಿಡಿ ದರದಲ್ಲಿ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸಲಾಗುತ್ತದೆ. ಬ್ಯಾಂಕುಗಳ ಮೂಲಕ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು
ಈ ಯೋಜನೆಯ ಪ್ರಮುಖ ಉದ್ದೇಶ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯ ಮಾಡುವುದಾಗಿದೆ. ಅನೇಕ ಕುಟುಂಬಗಳು ಹಳೆಯ ಮನೆಗಳಲ್ಲಿ ವಾಸಿಸುತ್ತಿದ್ದರೂ, ಆರ್ಥಿಕ ತೊಂದರೆಯಿಂದಾಗಿ ಅವುಗಳನ್ನು ರಿಪೇರಿ ಮಾಡಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಮನೆ ಕುಸಿದು ಬೀಳುವ ಅಪಾಯವೂ ಉಂಟು. ಈ ಯೋಜನೆಯ ಮೂಲಕ ಅಂತಹ ಕುಟುಂಬಗಳು ಸುರಕ್ಷಿತವಾದ ವಾಸಯೋಗ್ಯ ಮನೆಯನ್ನು ಹೊಂದಲು ಸಹಾಯವಾಗುತ್ತದೆ. ಈ ಕೆಳಗಿನವುಗಳು ಯೋಜನೆಯ ಮುಖ್ಯ ಪ್ರಯೋಜನಗಳು:
*ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹಣಕಾಸು ಬೆಂಬಲ.
*ಹಿರಿಯ ನಾಗರಿಕರು ಮತ್ತು ವಿಧವೆಯರಿಗೆ ವಿಶೇಷ ಆದ್ಯತೆ.
*ಮನೆ ಕುಸಿತದ ಅಪಾಯವನ್ನು ತಗ್ಗಿಸಿ, ಜೀವನ ಸುರಕ್ಷತೆ ಖಚಿತಪಡಿಸುವುದು.
*ರಿಪೇರಿ ಮಾಡಿಸಿದ ನಂತರ ಮನೆಯ ಮಾರುಕಟ್ಟೆ ಮೌಲ್ಯದಲ್ಲಿ ಗಮನಾರ್ಹ ಹೆಚ್ಚಳ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು
ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ. ಎಲ್ಲಾ ದಾಖಲೆಗಳ ಮೂಲ ಪ್ರತಿಗಳು ಮತ್ತು ಫೋಟೋಕಾಪಿಗಳು ತಯಾರಿರಲೇಬೇಕು.
*ಹಳೆ ಮನೆಯ ಸ್ಪಷ್ಟವಾದ ಫೋಟೋಗಳು (ಸೋರಿಕೆ ಅಥವಾ ಬಿರುಕುಗಳನ್ನು ಸ್ಪಷ್ಟವಾಗಿ ಕಾಣಿಸುವಂತಿರಬೇಕು).
*ಅರ್ಜಿದಾರರ ಆಧಾರ್ ಕಾರ್ಡ್.
*ಪಾನ್ ಕಾರ್ಡ್.
*ರೇಷನ್ ಕಾರ್ಡ್.
*ಆದಾಯ ಪ್ರಮಾಣಪತ್ರ (ಸಂಬಂಧಿತ ಅಧಿಕಾರಿಯಿಂದ ಪಡೆದದ್ದು).
*ಪಾಸ್ಪೋರ್ಟ್ ಅಳತೆಯ ಫೋಟೋಗಳು (2 ರಿಂದ 4).
*ಬ್ಯಾಂಕ್ ಖಾತೆ ವಿವರ ಮತ್ತು ಪಾಸ್ಬುಕ್ನ್ನ ಕಾಪಿ.
*ಮನೆಯ ಮಾಲಿಕತ್ವದ ಪುರಾವೆ (ಮಕ್ತಾ / ವಿಕ್ರಯ ಪತ್ರ ಇತ್ಯಾದಿ).
*ಅರ್ಜಿ ಸಲ್ಲಿಸುವ ವಿಧಾನ (ಆನ್ಲೈನ್ ಮತ್ತು ಆಫ್ಲೈನ್)
ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅತ್ಯಂತ ಸರಳ
ಮೊದಲಿಗೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಈ ಯೋಜನೆಯ ಬಗ್ಗೆ ಮಾಹಿತಿ ಪಡೆಯಿರಿ ಮತ್ತು ಅರ್ಜಿ ಫಾರ್ಮ್ ಪಡೆಯಿರಿ. ತದನಂತರ ಅರ್ಜಿ ಫಾರ್ಮ್ನಲ್ಲಿ ಕೇಳಿದ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಫಿಲ್ ಮಾಡಿ ಆಮೇಲೆ ಪಟ್ಟಿ ಮಾಡಿದ ಎಲ್ಲಾ ಅಗತ್ಯ ದಾಖಲೆಗಳನ್ನು ಫಾರ್ಮ್ ಜೊತೆಯಲ್ಲಿ ಸೇರಿಸಿ.
ಅರ್ಜಿ ಸಲ್ಲಿಕೆ: ಪೂರ್ಣಗೊಂಡ ಅರ್ಜಿ ಫಾರ್ಮ್ ಮತ್ತು ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ಸಲ್ಲಿಸಿ. ಅವರು ನಿಮ್ಮಿಂದ ಅರ್ಜಿಯ ಆನ್ಲೈನ್ ಫಾರ್ಮ್ ಅಪ್ಲೋಡ್ ಮಾಡಿಸಬಹುದು.
ಯೋಜನೆಯ ಅನುಷ್ಠಾನ: ಕೆಲವು ರಾಜ್ಯಗಳಲ್ಲಿ ಈ ಯೋಜನೆಯನ್ನು ನಗರ ನಿಗಮಗಳು, ಪುರಸಭೆಗಳು ಅಥವಾ ಗ್ರಾಮ ಪಂಚಾಯತ್ ಮೂಲಕವೂ ಅನುಷ್ಠಾನಗೊಳಿಸಲಾಗುತ್ತದೆ. ಆದ್ದರಿಂದ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲೂ ಸಾಧ್ಯ.
ಮುಖ್ಯ ಸೂಚನೆಗಳು
ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗೆ ಭೇಟಿ ನೀಡುವ ಮುನ್ನ, ಎಲ್ಲಾ ಅಗತ್ಯ ದಾಖಲೆಗಳ ಮೂಲ ಮತ್ತು ಫೋಟೋಕಾಪಿ ಪ್ರತಿಗಳು ತಯಾರಿರುವುದನ್ನು ಖಚಿತಪಡಿಸಿಕೊಳ್ಳಿ. ಅರ್ಜಿ ಫಾರ್ಮ್ ಪೂರೈಸುವಾಗ, ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಮತ್ತು ಸತ್ಯವಾಗಿ ನಮೂದಿಸಿ. ಯಾವುದೇ ಸಂದೇಹ ಅಥವಾ ಸಹಾಯ ಬೇಕಾದರೆ, ಬ್ಯಾಂಕ್ ಅಧಿಕಾರಿಯನ್ನು ನೇರವಾಗಿ ಸಂಪರ್ಕಿಸಿ.
ಹಳೆಯ ಮನೆಯ ರಿಪೇರಿ ಕಾರ್ಯವು ಈಗ ಹಣಕಾಸಿನ ಸಮಸ್ಯೆಯಾಗಿರಬೇಕಾಗಿಲ್ಲ. ಸರ್ಕಾರದ ಈ ಯೋಜನೆಯು ನಿಮಗೆ ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣದಲ್ಲಿ ವಾಸಿಸಲು ಸಹಾಯ ಮಾಡುತ್ತದೆ. ನಿಮ್ಮ ಮನೆಯ ಸುರಕ್ಷತೆ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಇಂದೇ ನಿಮ್ಮ ನೆರೆಹೊರೆಯ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗಳನ್ನು ಪರಿಶೀಲಿಸಿ.
ಅರ್ಜಿ ಸಲ್ಲಿಸುವ ನೇರವಾದ ಲಿಂಕ್ : ಅಪ್ಲೈ ಮಾಡಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group





Leave a Reply