Picsart 25 11 27 23 07 33 488 scaled

ನಿಮಗಿದು ಗೊತ್ತಾ..? ಜೀನ್ಸ್‌ನಲ್ಲಿರುವ ಆ ಸಣ್ಣ ಜೇಬಿನ ಹಿಂದಿದೆ 150 ವರ್ಷಗಳ ಇತಿಹಾಸ! 

Categories:
WhatsApp Group Telegram Group

ಇಂದಿನ ಯುಗದಲ್ಲಿ ಜೀನ್ಸ್‌ ಪ್ಯಾನ್‌ಟ್‌ ಫ್ಯಾಷನ್‌ನ ಭಾಗ ಮಾತ್ರವಲ್ಲ, ದಿನನಿತ್ಯದ ಬದುಕಿನ ಅವಿಭಾಜ್ಯ ಉಡುಪು. ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ತಮ್ಮ ಸ್ಟೈಲ್‌ಗೆ ತಕ್ಕಂತೆ ಪೆನ್ಸಿಲ್‌ ಫಿಟ್‌, ಮಾಮ್‌ ಫಿಟ್‌, ಬೂಟ್ಕಟ್‌, ಫ್ಲೇರ್‌ ಜೀನ್ಸ್‌ ಧರಿಸುತ್ತಾರೆ. ಜೀನ್ಸ್‌ನ ಬಣ್ಣ, ವಿನ್ಯಾಸ, ಕಟ್‌ ಬಗ್ಗೆ ಎಲ್ಲರೂ ಮಾತನಾಡುತ್ತೇವೆ. ಆದರೆ ಅದರಲ್ಲಿ ಇರುವ ಆ ಸಣ್ಣ ಚಿಕ್ಕ ಪಾಕೆಟ್‌ ಬಗ್ಗೆ ಯಾರಿಗೂ ತಿಳಿದಿಲ್ಲ. ನಮ್ಮಲ್ಲಿ ಹಲವರು ಅದರ ಉಪಯೋಗವೇನು ಎಂದು ಯೋಚಿಸದೇ ಬಿಟ್ಟುಬಿಡುತ್ತೇವೆ. ಕೆಲವರು ನಾಣ್ಯಗಳಿಗಾಗಿ, ಮತ್ತೆ ಕೆಲವರು ಫ್ಯಾಷನ್‌ಗಾಗಿ ಇರೋದು ಅಂದುಕೊಂಡಿರುತ್ತಾರೆ. ಆದರೆ ಈ ಚಿಕ್ಕ ಜೇಬಿನ ನಿಜವಾದ ಕಾರಣವೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ...

ಈ ಪಾಕೆಟ್‌ ಹಿಂದಿದೆ 19ನೇ ಶತಮಾನದ ಇತಿಹಾಸ!:

1873ರಲ್ಲಿ ಲೆವಿ ಸ್ಟ್ರಾಸ್ & ಕಂಪನಿ ಕಾರ್ಮಿಕ ವರ್ಗದವರಿಗೆ ಬಾಳಿಕೆ ಬರುವ ಬಟ್ಟೆಯನ್ನು ವಿನ್ಯಾಸಗೊಳಿಸಿ ಮೊದಲ ಜೀನ್ಸ್ ನಿರ್ಮಿಸುತ್ತಿದ್ದಾಗ, ಒಂದು ದೊಡ್ಡ ಸಮಸ್ಯೆ ಗಮನಕ್ಕೆ ಬಂತು. ಆ ಕಾಲದಲ್ಲಿ ಕೈಗಡಿಯಾರಗಳು ಜನಪ್ರಿಯವಾಗಿರಲಿಲ್ಲ. ಪುರುಷ ಕಾರ್ಮಿಕರು ಸಣ್ಣ ಸರಪಳಿ ಗಡಿಯಾರಗಳನ್ನು (Pocket Watches) ಬಳಸುತ್ತಿದ್ದರು.
ಕಲ್ಲು ಗಣಿಗಳಲ್ಲಿ, ರೈಲು ಮಾರ್ಗ ನಿರ್ಮಾಣದಲ್ಲಿ ಅಥವಾ ಕೌಬಾಯ್ ಜೀವನದಲ್ಲಿ ಈ ಗಡಿಯಾರಗಳು ಸುಲಭವಾಗಿ ಒಡೆದು ಹೋಗುವ ಸಾಧ್ಯತೆ ಇತ್ತು.

ದೊಡ್ಡ ಜೇಬಿನಲ್ಲಿ ಇಟ್ಟರೆ ಗಡಿಯಾರ ಒಡೆಯುವದು, ಬಿದ್ದುಹೋಗುವದು, ಧೂಳು-ಕೊಳಕು ತುಂಬುವದು ಇದಕ್ಕೆ ಪರಿಹಾರವಾಗಿ ಜೀನ್ಸ್‌ನಲ್ಲಿ ಸಣ್ಣ, ಆಳವಾದ, ಸುರಕ್ಷಿತ ಪಾಕೆಟ್ ಅನ್ನು ವಿನ್ಯಾಸಗೊಳಿಸಿದರು.

ಅದರ ಹೆಸರು Watch Pocket (ಗಡಿಯಾರ ಪಾಕೆಟ್), Fob Pocket, Condominium Pocket (ಹಳೆಯ ಪದಪ್ರಯೋಗ). ಗಣಿಗಾರರು, ಕೌಬಾಯ್‌ಗಳು ಮತ್ತು ರೈಲ್ವೆ ಕಾರ್ಮಿಕರು ತಮ್ಮ ಅಮೂಲ್ಯ ಗಡಿಯಾರಗಳನ್ನು ಸುರಕ್ಷಿತವಾಗಿ ಇದರಲ್ಲಿ ಇಡುತ್ತಿದ್ದರು.

ಇಂದಿನ ಕಾಲದಲ್ಲಿ ಇದರ ಉಪಯೋಗ ಹೇಗೆ?:

ಗಡಿಯಾರ ಪಾಕೆಟ್‌ ಆಗಿ ಪ್ರಾರಂಭವಾದರೂ, ಈಗ ಇದು ಹಲವು ರೀತಿ ಬಳಕೆಗೆ ಬರುತ್ತಿದೆ. ಯುಎಸ್‌ಬಿ ಡ್ರೈವ್, ನಾಣ್ಯ, ಉಂಗುರ/ಚಿಕ್ಕ ಆಭರಣ, ಕೀ, ಲೈಟರ್, ಗಿಟಾರ್ ಪಿಕ್ ಹೀಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಳಕೆ ಬದಲಾಗಿರಬಹುದು ಆದರೆ ಜೀನ್ಸ್‌ನ ಐಕಾನಿಕ್‌ ವಿನ್ಯಾಸವಾಗಿ ಈ ಪಾಕೆಟ್‌ ಇನ್ನೂ ಉಳಿದಿದೆ!

This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg
ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories