ಹೊಸ ವರ್ಷಕ್ಕೆ ಕಾಲಿಡುವಾಗ ಪ್ರತಿಯೊಬ್ಬರ ಮನದಲ್ಲೂ ಹೊಸ ಕನಸುಗಳು, ಹೊಸ ಬಯಕೆಗಳು ಮೂಡುತ್ತವೆ. ಈ ವರ್ಷ ನನ್ನ ಜೀವನದಲ್ಲಿ ಏನು ಬದಲಾವಣೆ ಆಗಲಿದೆ? ಎಂಬ ಪ್ರಶ್ನೆ ಪ್ರತಿಯೊಬ್ಬರ ಬಾಯಲ್ಲಿರುತ್ತದೆ. ಕೆಲವರು ಮದುವೆಯ ಯೋಚನೆ, ಕೆಲವರು ಮನೆ ಹಾಗೂ ವಾಹನ ಖರೀದಿ, ಇನ್ನೂ ಕೆಲವರು ತಮ್ಮ ಕುಟುಂಬದ ಸುಖ-ಶಾಂತಿಯ ಕನಸು ಕಾಣುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2026ನೇ ವರ್ಷದಲ್ಲಿ ಗ್ರಹಗಳ ಸ್ಥಾನಮಾನ ವಿಶೇಷವಾಗಿದ್ದು, ಇದು ಪ್ರತಿ ರಾಶಿಯ ಜೀವನದಲ್ಲಿ ಗಂಭೀರ ಬದಲಾವಣೆಗಳನ್ನು ತರಲಿದೆ.
ಧನು ರಾಶಿಯವರಿಗೆ 2026 ವಿಶೇಷವಾಗಿ ಕುಟುಂಬ, ದಾಂಪತ್ಯ ಮತ್ತು ಪ್ರೇಮ ಸಂಬಂಧಗಳಲ್ಲಿ ಶುಭಫಲಗಳನ್ನು ನೀಡುವ ವರ್ಷವಾಗಿ ಗುರುತಿಸಲಾಗಿದೆ. ಶುಕ್ರ ಮತ್ತು ಗುರುವಿನ ಅನುಕೂಲ ಚಲನೆಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರೀತಿಯ ಬೆಳವಣಿಗೆ, ವಿವಾಹ ಯೋಗ ಮತ್ತು ಕುಟುಂಬ ಸೌಹಾರ್ದವನ್ನು ಹೆಚ್ಚಿಸಲಿದೆ. ಹಾಗಾದರೆ 2026ರಲ್ಲಿ ಧನು ರಾಶಿಯವರು ಯಾವ ಯಾವ ಕ್ಷೇತ್ರಗಳಲ್ಲಿ ಸಂತೋಷ ಸಿಗಲಿದೆ? ಈ ವರ್ಷದಲ್ಲಿ ಮದುವೆಯ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ ಯಾವುದು? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಧನು ರಾಶಿ ಪ್ರೇಮ-ವೈವಾಹಿಕ ಜಾತಕ 2026: ವರ್ಷದ ಆರಂಭ
ವರ್ಷದ ಆರಂಭದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಸಣ್ಣ ಮಾತಿನ ಬೇಸರ, ತಪ್ಪುಗ್ರಹಿಕೆ, ಮನಸ್ತಾಪ ಮತ್ತು ಸಂವಹನದ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಶ್ಚಲತೆ, ತಾಳ್ಮೆ ಮತ್ತು ಸಂವಾದ ಅಗತ್ಯ. ನಿಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸಲು ಇದು ಸೂಕ್ತ ಸಮಯವಲ್ಲ.
ಪ್ರೀತಿಯ ಪುನರುತ್ಥಾನ ವರ್ಷದ ಮಧ್ಯಭಾಗ :
ಜೂನ್ ನಂತರ ಗುರುವಿನ ಸಂಚಾರದಿಂದ ಸಂಬಂಧ ಸುಧಾರಣೆ, ದೂರ ಕಡಿಮೆಯಾಗುವುದು, ಪರಸ್ಪರ ಭಾವನೆಗಳ ಅರ್ಥೈಸಿಕೆ, ಒಟ್ಟಿಗೆ ಉತ್ತಮ ಸಮಯ ಕಳೆಯುವ ಅವಕಾಶ ಇದು ವೈವಾಹಿಕ ಜೀವನಕ್ಕೆ ಹೊಸ ಚೈತನ್ಯ ತರುತ್ತದೆ.bಪ್ರೇಮಿಗಳು ಸಣ್ಣ ಪ್ರವಾಸ, ಮನರಂಜನೆ ಮೂಲಕ ಬಂಧವನ್ನು ಗಟ್ಟಿಗೊಳಿಸಬಹುದು. ವಿವಾಹದ ಮಾತುಕತೆ ಆರಂಭವಾಗಲು ಇದು ಉತ್ತಮ ಕಾಲ ಆದರೆ ಅಂತಿಮ ನಿರ್ಧಾರಕ್ಕೆ ಇನ್ನೂ ಸ್ವಲ್ಪ ಕಾಲ ಕಾಯುವುದು ಸೂಕ್ತ. ನವವಿವಾಹಿತರು, ಪೋಷಕರಾಗುವ ನಿರೀಕ್ಷೆಯಲ್ಲಿರುವವರಿಗೆ ಶುಭ ಸಂಗತಿ!
ವರ್ಷದ ಅಂತ್ಯದ ಸ್ಥಿತಿಗತಿ:
ವರ್ಷದ ಕೊನೆಯ ಭಾಗದಲ್ಲಿ ಕುಟುಂಬದಲ್ಲಿ ಸಂತೋಷ, ಸಾಮರಸ್ಯ, ಪರಸ್ಪರ ವಿಶ್ವಾಸ ಗಟ್ಟಿಯಾಗುವುದು, ಮನೆಯಲ್ಲಿ ನೆಮ್ಮದಿ, ಸಣ್ಣ ವಿವಾದಗಳ ತ್ವರಿತ ಪರಿಹಾರ, ಜನವರಿ ಮತ್ತು ಜೂನ್ ವೈವಾಹಿಕ ಜೀವನಕ್ಕೆ ಅತ್ಯಂತ ಸಂತೋಷದಾಯಕ. ವಿವಾಹಕ್ಕೆ ಯೋಚಿಸುವವರು ಯೋಜನೆ ಮತ್ತು ಎಚ್ಚರಿಕೆಯಿಂದ ನಿರ್ಧಾರ ತಗೊಳ್ಳುವುದು ಮುಖ್ಯ
ಒಟ್ಟಾರೆಯಾಗಿ, 2026ರಲ್ಲಿ ಧನು ರಾಶಿಯವರಿಗೆ ಪ್ರೇಮ ಜೀವನದಲ್ಲಿ ಬೆಳವಣಿಗೆ, ಕುಟುಂಬದಲ್ಲಿ ಸುಖ-ಸಮಾಧಾನ, ವಿವಾಹ ಮಾತುಕತೆಗಳಿಗೆ ಉತ್ತಮ ವರ್ಷ, ವಂಶವೃದ್ಧಿ ಸೂಚನೆಗಳು, ಸಂಬಂಧದಲ್ಲಿ ಗೌರವ-ಪ್ರೇಮ-ಸಾಮರಸ್ಯ ಇರುತ್ತದೆ. ಆರಂಭದಲ್ಲಿ ಅಲ್ಪ ಸವಾಲು ಅಂತ್ಯದಲ್ಲಿ ಅದ್ಭುತ ಸಂತೋಷ! ಶುಕ್ರ-ಗುರುಗಳ ಕೃಪೆಯೊಂದಿಗೆ ಹೊಸ ಜೀವನದ ಪುಟಗಳು ಸುಂದರವಾಗಿ ಬರೆಯಲ್ಪಡಲಿವೆ.

ಹಕ್ಕು ನಿರಾಕರಣೆ: ಈ ಮಾಹಿತಿ ಜ್ಯೋತಿಷ್ಯ ಮತ್ತು ನಂಬಿಕೆಗಳನ್ನು ಆಧರಿಸಿದೆ. ಇದು ನೀಡ್ಸ್ ಆಫ್ ಪಬ್ಲಿಕ್ ಅಧಿಕೃತ ಅಭಿಪ್ರಾಯವಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




