Picsart 25 11 26 23 03 49 027 scaled

ವಾಹನಕ್ಕೆ ಪೆಟ್ರೋಲ್ ಹಾಕಿಸೋರಿಗೆ ಎಚ್ಚರಿಕೆ.! ಪೆಟ್ರೋಲ್ ಹಾಕಿಸುವಾಗ ಈ ತಪ್ಪು ಮಾಡಬೇಡಿ

Categories:
WhatsApp Group Telegram Group

ಇಂಧನದ ಬೆಲೆಗಳು ದಿನೇ ದಿನೇ ಏರಿಕೆ ಕಾಣುತ್ತಿರುವ ಈ ಕಾಲದಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುತ್ತಿರುವ ವಂಚನೆಗಳು ಸಾಮಾನ್ಯ ಜನರ ಜೇಬಿಗೆ ಹೆಚ್ಚುವರಿ ಹೊರೆ ತಂದಿಟ್ಟಿವೆ. ಸಾಮಾನ್ಯವಾಗಿ ಗ್ರಾಹಕರು ಬಂಕ್‌ಗೆ ಹೋದಾಗ, ಸಾಲಿನಲ್ಲಿ ತಾಳ್ಮೆ ಕಳೆದುಕೊಳ್ಳದೇ ನಿಲ್ಲುವುದು ಮಾತ್ರವಲ್ಲದೆ, ಯಂತ್ರದ ಮೀಟರ್‌ನ್ನು ಶೂನ್ಯಕ್ಕೆ ಸೆಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಆದರೆ ವಾಸ್ತವ ವಂಚನೆ ಶೂನ್ಯದಲ್ಲಿ ಅಲ್ಲ ಸಾಂದ್ರತೆಯಲ್ಲಿದೆ!

ಪೆಟ್ರೋಲ್ ಹಾಗೂ ಡೀಸೆಲ್ ಗುಣಮಟ್ಟಕ್ಕೆ ಸಂಬಂಧಿಸಿದ ವಂಚನೆಗಳು ಇತ್ತೀಚಿಗೆ ಹೆಚ್ವಾಗಿವೆ. ಅದನ್ನು ಸಾಮಾನ್ಯವಾಗಿ ಕಣ್ಣಿನಿಂದ, ಅನುಭವ ಅಥವಾ ಶೂನ್ಯ ಮೀಟರ್ ನೋಡಿ ಪತ್ತೆಹಚ್ಚುವುದು ಸಾಧ್ಯವೇ ಇಲ್ಲ. ಆದ್ದರಿಂದ ಇಂಧನ ತುಂಬುವ ವಿರಾಮದಲ್ಲಿ ಗ್ರಾಹಕರು ಗಮನ ಕೊಡಬೇಕಾದ ಒಂದು ಅತ್ಯಂತ ಮುಖ್ಯ ಅಂಶವೇ ಸಾಂದ್ರತೆ ಮೀಟರ್ ಪರಿಶೀಲನೆ.

ಸಾಂದ್ರತೆ ಮೀಟರ್ ಎಂದರೇನು? ಯಾಕೆ ನೋಡಬೇಕು?:

ಪೆಟ್ರೋಲ್ ಪಂಪ್ ಯಂತ್ರಗಳಲ್ಲಿ ಬೆಲೆ, ಪ್ರಮಾಣ ಮತ್ತು Density (ಸಾಂದ್ರತೆ) ತೋರಿಸುವ Digital Display ಇರುತ್ತದೆ. ನಾವು ಸಾಮಾನ್ಯವಾಗಿ ಪ್ರಮಾಣ ಮತ್ತು ಶೂನ್ಯ ಮೀಟರ್ ನೋಡುತ್ತೇವೆ. ಆದರೆ ಸಾಂದ್ರತೆ ಪೆಟ್ರೋಲ್/ಡೀಸೆಲ್‌ನಲ್ಲಿ ನೀರು ಅಥವಾ ಬೇರೆ ರಾಸಾಯನಿಕ ಕಲಬೆರಕೆ ಇದಿಯೇ ಎನ್ನುವುದನ್ನು ಬಹಿರಂಗಪಡಿಸುತ್ತದೆ.

ಸರ್ಕಾರು ನಿಗದಿಪಡಿಸಿದ ಸಾಂದ್ರತೆ ಮಾನದಂಡಗಳು:

ಪೆಟ್ರೋಲ್ : 730 – 800ಇದಕ್ಕಿಂತ ಕಡಿಮೆ/ ಹೆಚ್ಚು ಇದ್ದರೆ ಕಲಬೆರಕೆ!
ಡೀಸೆಲ್:  830 – 900ಗುಣಮಟ್ಟ ಹಾನಿಯ ಸಾಧ್ಯತೆ!
ಗಡುವಿನ ಹೊರಗಿದ್ದರೆ  Fuel Contamination ಆಗಬಹುದು. ಇದರ ಪರಿಣಾಮ Engine Damage, Mileage ಕಡಿಮೆ, ಹಣದ ನಷ್ಟವಾಗುವ ಸಾಧ್ಯತೆ ಇರುತ್ತದೆ.

ಬಂಕ್‌ಗಳಲ್ಲಿ ಸಾಮಾನ್ಯವಾಗಿ ನಡೆಯುವ ವಂಚನೆಗಳು:

ಶೂನ್ಯ ಮೀಟರ್ ತೋರಿಸಿ ವಿಶ್ವಾಸ ಗೆಲ್ಲುವುದು.
ಸಾಂದ್ರತೆ ವ್ಯಾಪ್ತಿಯನ್ನು ಕದಡಿ ಗುಣಮಟ್ಟ ಕುಗ್ಗಿಸುವುದು.
ಕಡಿಮೆ ಗುಣಮಟ್ಟದ ಪೆಟ್ರೋಲ್ ನೀಡಿ ಹೆಚ್ಚಿನ ಲಾಭ ಪಡೆಯುವುದು.

ಒಟ್ಟಾರೆಯಾಗಿ, ಇಂಧನವು ವಾಹನದ ಹೃದಯ ಎಂದು ಪರಿಗಣಿಸಿದ್ರೆ, ಅದರ ಗುಣಮಟ್ಟ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಚಾಲಕರ ಹೊಣೆ. ಕೇವಲ ಶೂನ್ಯ ಮೀಟರ್ ನೋಡಿ ತೃಪ್ತಿಪಟ್ಟರೆ, ನೀವು ವಂಚಕರ ಬಲೆಗೆ ಬಿದ್ದುಬಿಡುವಿರಿ. ಆದ್ದರಿಂದ ಮುಂದಿನ ಬಾರಿ ಪೆಟ್ರೋಲ್ ತುಂಬಿಸುವಾಗ, ಸಾಂದ್ರತೆ ಮೀಟರ್‌ನ್ನು ನೋಡಿ  ನಿಮ್ಮ ಹಣ ಮತ್ತು ವಾಹನವನ್ನು ರಕ್ಷಿಸಿಕೊಳ್ಳಿ!.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories