ಇಂದಿನ ಜೀವನಶೈಲಿಯಲ್ಲಿ ಫಾಸ್ಟ್ ಫುಡ್, ಪ್ರೋಟೀನ್ ಡಯಟ್ ಮತ್ತು ಜಿಮ್ ಲೈಫ್‌ಸ್ಟೈಲ್ ಟ್ರೆಂಡ್ ಆಗಿದೆ. ಹಲವರು ಹೆಚ್ಚು ಪ್ರೋಟೀನ್ ಬೇಕು ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವ ಬಾಯ್ಲರ್ ಕೋಳಿಯನ್ನು (Broiler Chicken) ವಾರಕ್ಕೇ ಹಲವಾರು ಬಾರಿ ಸೇವಿಸುತ್ತಿದ್ದಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಬಹುದು ಎಂಬುದು ಇತ್ತೀಚಿನ ಅಧ್ಯಯನಗಳು ಮತ್ತು ಆರೋಗ್ಯ ತಜ್ಞರ ಎಚ್ಚರಿಕೆ.
ಸ್ಥಳೀಯ ದೇಶಿ ಕೋಳಿ (Native/Desi Chicken) ಪೌಷ್ಠಿಕತೆ, ರೋಗನಿರೋಧಕ ಶಕ್ತಿ ಮತ್ತು ಸ್ವಾಭಾವಿಕ ಬೆಳವಣಿಗೆಯ ಕಾರಣದಿಂದ ಉತ್ತಮವಾದರೆ, ವಾಣಿಜ್ಯವಾಗಿ ಸಾಕಲಾಗುವ ಬಾಯ್ಲರ್ ಕೋಳಿಗಳಲ್ಲಿ ರಾಸಾಯನಿಕಗಳು, ಹಾರ್ಮೋನುಗಳು, ಹಾಗೂ ಪ್ರತಿಜೀವಕ (Antibiotic) ಗಳ ಬಳಕೆ ಆತಂಕ ಹುಟ್ಟಿಸಿದೆ.
ಬಾಯ್ಲರ್ ಕೋಳಿಯಲ್ಲಿ ಏನು ಸಮಸ್ಯೆ?:
ಬಾಯ್ಲರ್ ಕೋಳಿಗಳಿಗೆ ವೇಗವಾಗಿ ತೂಕ ಹೆಚ್ಚಿಸಲು ಮತ್ತು ಮಾರುಕಟ್ಟೆಗೆ ಬೇಗ ಬಿಡಲು, ಅನೇಕ ರಾಸಾಯನಿಕಗಳು ಹಾಗೂ ವಿಷಕಾರಿ ಸಂಯುಕ್ತಗಳನ್ನು ನೀಡಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಆರ್ಸೆನಿಕ್ (Arsenic) ರಾಸಾಯನಿಕ, ಗ್ರೋತ್ ಹಾರ್ಮೋನ್‌ಗಳು, ಪ್ರತಿಜೀವಕಗಳು (Antibiotics). ಆರ್ಸೆನಿಕ್ ಕೋಳಿಯ ಚರ್ಮ ಮತ್ತು ಮಾಂಸಕ್ಕೆ ಚೆನ್ನಾದ ಬಿಳಿ ಬಣ್ಣವನ್ನು ನೀಡುತ್ತದೆ. ಆದರೆ ಇದು ಮನಿಷ್ಯರ ದೇಹಕ್ಕೆ ಹಾನಿಕಾರಕ ವಿಷವಾಗಿದೆ.
ಆರೋಗ್ಯದ ಮೇಲೆ ಪರಿಣಾಮಗಳು:
ಆರ್ಸೆನಿಕ್ ಮತ್ತು ಹಾರ್ಮೋನ್ ಮಿಶ್ರಿತ ಕೋಳಿ ಮಾಂಸವನ್ನು ಹೆಚ್ಚು ಸೇವಿಸಿದರೆ ಕೆಳಗಿನ ರೋಗಗಳ ಅಪಾಯ ಹೆಚ್ಚಾಗಬಹುದು.
ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು:
ಹೃದಯರೋಗ
ನರ ದೌರ್ಬಲ್ಯ / Brain Dysfunction
ಮಧುಮೇಹ
ರೋಗನಿರೋಧಕ ಶಕ್ತಿಯ ಕುಗ್ಗುವಿಕೆ
ಕ್ಯಾನ್ಸರ್ ಅಪಾಯ ಹೆಚ್ಚಳ
ಪರ್ಮನೆಂಟ್ ಸೈಡ್ ಎಫೆಕ್ಟ್ಸ್:
ಅತಿಯಾದ ಕೊಬ್ಬು ಸಂಗ್ರಹ (Obesity)
ಹಾರ್ಮೋನ್ ಅಸಮತೋಲನ
ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ಗುರಿಯಾಗುವುದು
ಜೀರ್ಣ ಸಮಸ್ಯೆಗಳು ಮತ್ತು ಅಲರ್ಜಿ ಪ್ರತಿಕ್ರಿಯೆಗಳು
ಸಂಶೋಧನೆಗಳು ಏನು ಹೇಳುತ್ತವೆ?:
ಮಾರುಕಟ್ಟೆ ಮತ್ತು ಸೂಪರ್ ರ್ಮಾರ್ಕೆಟ್‌ಯಲ್ಲಿ ಲಭ್ಯವಿರುವ ಬಾಯ್ಲರ್ ಕೋಳಿಯಲ್ಲಿ ಶೇಕಡಾ 50% ಮಟ್ಟದಲ್ಲಿ ಆರ್ಸೆನಿಕ್ ಮಟ್ಟ ಪತ್ತೆಯಾಗಿದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
ಅತಿಹೆಚ್ಚು ಪ್ರಮಾಣದಲ್ಲಿ ನೀಡಲಾದ ಆಂಟಿಬಯಾಟಿಕ್ ಗಳಿಂದ ಮಾನವ ದೇಹದಲ್ಲಿ Antibiotic Resistance ಉಂಟಾಗಬಹುದು.
ವಾರಕ್ಕೆ ಎಷ್ಟು ಬಾರಿ ತಿನ್ನುವುದು ಸುರಕ್ಷಿತ?
ತಜ್ಞರ ಪ್ರಕಾರ ವಾರಕ್ಕೆ 1 ಬಾರಿ ತಿನ್ನುವುದು ಉತ್ತಮ.
ವಾರಕ್ಕೆ 4–5 ಬಾರಿ ಅಥವಾ ಪ್ರತಿದಿನ ತಿನ್ನುವುದು ಅಪಾಯಕಾರಿ ಎಂದು ಹೇಳಲಾಗುತ್ತದೆ.
ಒಟ್ಟಾರೆಯಾಗಿ, ಬಾಯ್ಲರ್ ಕೋಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದಿಲ್ಲ ಆದರೆ ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಆರೋಗ್ಯಕ್ಕೆ ಸುರಕ್ಷಿತ. ಹಾರ್ಮೋನ್ ಮತ್ತು ರಾಸಾಯನಿಕಗಳಿಂದ ವೇಗವಾಗಿ ಬೆಳೆಸಿದ ಕೋಳಿಯನ್ನು ದೀರ್ಘಾವಧಿಯಲ್ಲಿ ಸೇವಿಸುವುದರಿಂದ ದೇಹದ ಹಾರ್ಮೋನ್ ವ್ಯವಸ್ಥೆ, ಹೃದಯ, ರೋಗನಿರೋಧಕ ಶಕ್ತಿ ಮತ್ತು ಜೀವಕೋಶಗಳ ಮೇಲೆಯೇ ನೇರ ಹಾನಿ ಆಗುವ ಸಾಧ್ಯತೆ ಇದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




