Picsart 25 11 25 22 57 22 676 scaled

ಆಸ್ತಿ ಸಿಕ್ಕ ನಂತರ ತಾಯಿಯನ್ನು ನಿರ್ಲಕ್ಷಿಸಿದ ಮಕ್ಕಳು: ತುಮಕೂರು ನ್ಯಾಯ ಮಂಡಳಿಯಿಂದ ದಾನಪತ್ರ ರದ್ದು!

Categories:
WhatsApp Group Telegram Group

ಭಾರತೀಯ ಸಂಸ್ಕೃತಿಯಲ್ಲಿ ತಾಯಿ-ತಂದೆಯರು ದೇವರು ಎಂದು ನಂಬಿ ಪೂಜಿಸುತ್ತಾರೆ. ಜೀವನಪೂರ್ತಿ ಮಕ್ಕಳಿಗಾಗಿ ದುಡಿದು, ತಮ್ಮ ಶ್ರಮದ ಸಂಪತ್ತು ಮಕ್ಕಳ ಹೆಸರಿಗೆ ಹಸ್ತಾಂತರಿಸುವ ಪೋಷಕರು ಆಸಾಂಖ್ಯಾತರು. ಆದರೆ ಕೆಲ ಸಂದರ್ಭದಲ್ಲಿ, ಆಸ್ತಿ ಸಿಕ್ಕ ನಂತರ ಪೋಷಕರಿಗೆ ಗೌರವ, ಆರೈಕೆ, ಕರುಣೆ ಏನೂ ಸಿಗದೆ ವೃದ್ಧಾಪ್ಯದಲ್ಲಿ ನೋವು ಮತ್ತು ನಿರ್ಲಕ್ಷ್ಯ ಎದುರಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂತಹದೊಂದು ಪ್ರಕರಣ ತುಮಕೂರಿನಲ್ಲಿ ನಡೆದಿದೆ. ವಯೋವೃದ್ಧ ತಾಯಿ ಮಕ್ಕಳ ನಿರ್ಲಕ್ಷ್ಯದಿಂದ ಬೇಸತ್ತು, ಅವರಿಗೆ ನೀಡಿದ್ದ ಜಮೀನು ಹಿಂತೆಗೆದುಕೊಳ್ಳಲು ಕಾನೂನಿನ ಮೆಟ್ಟಿಲೇರಿದ್ದರು. ಕೊನೆಗೆ, ಹಿರಿಯ ನಾಗರಿಕರ ಕಾನೂನಿನ ಸಹಾಯದಿಂದ ಆಸ್ತಿ ಮರುಪಡೆದುಕೊಂಡಿದ್ದಾರೆ.

ಘಟನೆ ವಿವರ:

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು, ಹಾಗಲವಾಡಿ ಹೋಬಳಿ, ಮಠ ಗ್ರಾಮದ ವಯೋವೃದ್ಧ ರಂಗಮ್ಮ ತಮ್ಮ ಹೆಸರಿನಲ್ಲಿದ್ದ 3 ಎಕರೆ 26 ಗುಂಟೆ ಜಮೀನನ್ನು, ಮಕ್ಕಳಾದ ಗುಜ್ಜಾರಪ್ಪ, ಶಿವಣ್ಣ ಮತ್ತು ಹನುಮಂತಯ್ಯ ಅವರಿಗೆ ದಾನಪತ್ರದ ಮೂಲಕ ನೀಡಿದ್ದರು.

ದಾನಪತ್ರದಲ್ಲಿ ಸ್ಪಷ್ಟವಾಗಿ ಮಕ್ಕಳು ನನ್ನ ಕಷ್ಟ–ಸುಖಗಳಲ್ಲಿ ಜೊತೆ ಇದ್ದು, ಜೀವಿತಾವಧಿಯವರೆಗೆ ನನ್ನನ್ನು ಆರೈಕೆ ಮಾಡಬೇಕು ಎಂಬ ಷರತ್ತು ಉಲ್ಲೇಖ ಮಾಡಲಾಗಿತ್ತು. ಆದರೆ ಮಕ್ಕಳು ಆಸ್ತಿ ಸಿಕ್ಕ ನಂತರ ನಿರ್ಲಕ್ಷ ತೋರಿದ್ದರು.

ಮಕ್ಕಳ ವರ್ತನೆ ಹೇಗಿತ್ತು?:

ರಂಗಮ್ಮ ಅವರು ದೂರು ಸಲ್ಲಿಸಿದಾಗ ಹೇಳಿರುವ ಪ್ರಕಾರ, ಮಕ್ಕಳು ಅವರ ಆರೈಕೆಗೆ ಸ್ಪಂದಿಸಿಲ್ಲ. ಆಹಾರ, ಚಿಕಿತ್ಸೆ ಸೇರಿದಂತೆ ಮೂಲಭೂತ ಅಗತ್ಯವೂ ನೀಡಿಲ್ಲ. ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ವೃದ್ಧಾಪ್ಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಎದುರಿಸುತ್ತಿದ್ದಾರೆ ಎಂದು ಅವರು ಹಿರಿಯ ನಾಗರಿಕರ ಪಾಲನಾ ಕಾಯ್ದೆ–2007 (Maintenance and Welfare of Parents and Senior Citizens Act) ಅಡಿಯಲ್ಲಿ ಸಹಾಯವಾಣಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು ಏನು?:

ಹಿರಿಯ ನಾಗರಿಕರ ಸಹಾಯವಾಣಿ ವರದಿ, ವಿಚಾರಣೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ತುಮಕೂರು ಉಪವಿಭಾಗಾಧಿಕಾರಿ ಮತ್ತು ನಿರ್ವಹಣಾ ನ್ಯಾಯ ಮಂಡಳಿ ಅಧ್ಯಕ್ಷೆ ನಾಹಿದಾ ಜಮ್ ಜಮ್ ಅವರು, ಮಕ್ಕಳು ತಾಯಿ ಆರೈಕೆ ಮಾಡಿಲ್ಲ ಎನ್ನುವುದು ದೃಢಪಟ್ಟಿದೆ. ದಾನಪತ್ರದಲ್ಲಿ ನೀಡಿದ್ದ ಷರತ್ತು ಉಲ್ಲಂಘಿಸಲಾಗಿದೆ ಎಂದು ಹೇಳಿ, 2021ರ ಡಿಸೆಂಬರ್ 23ರಂದು ಮಾಡಿದ್ದ ದಾನಪತ್ರವನ್ನು ಶೂನ್ಯ ಮತ್ತು ಅಮಾನ್ಯ ಎಂದು ಘೋಷಿಸಿದರು. ಅದೇ ರೀತಿ, ಜಮೀನು ಮರು ರಂಗಮ್ಮ ಹೆಸರಿಗೆ ಪಹಣಿ ಬದಲಿಸುವಂತೆ ಗುಬ್ಬಿ ತಹಶೀಲ್ದಾರರಿಗೆ ಆದೇಶ ನೀಡಿದರು.

ಈ ತೀರ್ಪು ಏಕೆ ಮಹತ್ವದ್ದು?:

ಆಸ್ತಿ ಪಡೆದ ನಂತರ ಪೋಷಕರನ್ನು ಆರೈಕೆ ಮಾಡದೇ ಇದ್ದರೆ, ದಾನಪತ್ರ ಅಥವಾ ವರ್ಗಾವಣೆ ಕಾನೂನಾತ್ಮಕವಾಗಿ ರದ್ದು ಮಾಡಬಹುದು ಎನ್ನುವುದನ್ನು ಈ ಪ್ರಕರಣ ನೆನಪಿಸುತ್ತದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories