Picsart 25 11 25 22 53 24 650 scaled

ಬಿಇಡಿ, ಟಿಇಟಿ ಪಾಸ್ ಮಾಡಿದರೂ ಶಿಕ್ಷಕರಾಗಲು ಅವಕಾಶವಿಲ್ಲ: ಬಿಕಾಂ–ಎಂಕಾಂ ಪದವೀಧರರ ಅಳಲು

Categories:
WhatsApp Group Telegram Group

ಶಿಕ್ಷಕರಾಗುವುದು ಅನೇಕ ಯುವಕರ ಕನಸು. ಸಮಾಜಕ್ಕೆ ಜ್ಞಾನ ಹಂಚಬೇಕು, ಮುಂದಿನ ಪೀಳಿಗೆಯನ್ನು ರೂಪಿಸಬೇಕು ಎನ್ನುವ ದಾರಿಯಲ್ಲಿ ಅನೇಕರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ವಿಶೇಷವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪದವಿ (B.Com) ಅಥವಾ ಸ್ನಾತಕೋತ್ತರ ಪದವಿ (M.Com) ಪಡೆದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸುವ ಆಸೆ ಹೊಂದಿದ್ದಾರೆ. ಇವರಿಗೆ ಸರ್ಕಾರವೇ ಅವಕಾಶ ನೀಡಿರುವುದರಿಂದ ಬಿಇಡ್ ಮತ್ತು ಟಿಇಟಿ ಪಾಸ್ ಮಾಡಿ, ಶಿಕ್ಷಕರ ಕೆಲಸಕ್ಕೆ ಅಗತ್ಯವಾದ ಎಲ್ಲಾ ಹಂತಗಳನ್ನು ಪೂರೈಸಿದ್ದಾರೆ. ಆದರೆ, ಸರ್ಕಾರದ ನಿಯಮಾವಳಿಯೊಂದರಿಂದ ಈ ಎಲ್ಲ ಅರ್ಹತೆಗಳನ್ನು ಪಡೆದರೂ ಸಹ ಸ್ಥಿರ ನೇಮಕಾತಿಗೆ ಅವಕಾಶವಿಲ್ಲ!. ಇದು ಈಗ ಕರ್ನಾಟಕದ ಸಾವಿರಾರು ಬಿಕಾಂ – ಎಂಕಾಂ ಪದವೀಧರರ ಅಳಲು, ಹೋರಾಟ ಮತ್ತು ಪ್ರಶ್ನೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರದ ಕ್ರಮಗಳು ಹೇಗೆ ಗೊಂದಲ ಸೃಷ್ಟಿಸಿವೆ?:

2015ರಲ್ಲಿ: ಬಿಕಾಂ, ಎಂಕಾಂ ಹಾಗೂ ಎಂಜಿನಿಯರಿಂಗ್ ಪದವೀಧರರಿಗೆ ಬಿಇಡಿ ಓದಲು ಅವಕಾಶ ನೀಡಲಾಯಿತು.
2020ರಲ್ಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಬರೆಯಲು ಹಾಗೂ ಉತ್ತೀರ್ಣರಾಗಲು ಅವಕಾಶ ನೀಡಲಾಯಿತು. ಆದರೆ, ಅಧಿಕೃತ ಶಿಕ್ಷಕರ ನೇಮಕಾತಿಗೆ ಮಾತ್ರ ಪರಿಗಣನೆ ಇಲ್ಲ. ಈ ಪರಿಸ್ಥಿತಿ ಅನೇಕರನ್ನು ಗೊಂದಲಕ್ಕೆ, ನಿರಾಶೆಗೆ ಹಾಗೂ ನಿರುದ್ಯೋಗಕ್ಕೆ ತಳ್ಳಿದೆ.

ಶಿಕ್ಷಕರಾಗಿ ಬೋಧನೆ ಆದರೆ ನೇಮಕಾತಿ ಇಲ್ಲ!:

ಬಿಕಾಂ ಪದವೀಧರರು ಬಿಇಡಿ ಓದುವಾಗ ಇಂಗ್ಲಿಷ್, ಸಮಾಜ ವಿಜ್ಞಾನ ಇರುವ ಎರಡು ಮುಖ್ಯ ವಿಷಯಗಳನ್ನು ವ್ಯಾಸಂಗ ಮಾಡುತ್ತಾರೆ. ತರಬೇತಿ ಅವಧಿಯಲ್ಲಿ ಇಂಗ್ಲಿಷ್ ಬೋಧನೆ, ಸಮಾಜ ವಿಜ್ಞಾನ ಬೋಧನೆ ಮಾಡುತ್ತಾರೆ ಮತ್ತು ಅದರ ಅಂಕಗಳನ್ನು ಪಡೆಯುತ್ತಾರೆ. ಶಾಲಾ ಪಠ್ಯಕ್ರಮದಲ್ಲಿ ಇರುವ ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ, ಹಣಕಾಸು ವಿಷಯಗಳು ವಾಣಿಜ್ಯ ಪದವೀಧರರ ಪರಿಣತಿಗೆ ಹೊಂದುವಂತೆಯೇ ಇವೆ. ಆದರೂ ಸಹ ವಾಣಿಜ್ಯ ಶಿಕ್ಷಕರ ಪದವಿ ಇಲ್ಲ ಎಂಬ ನೆಪದಲ್ಲಿ ನೇಮಕಾತಿಯಿಂದ ಹೊರಗುಳಿಸಲಾಗುತ್ತಿದೆ.

ಅತಿಥಿ ಶಿಕ್ಷಕರಾಗಿ ಸೇವೆ :

ಸರ್ಕಾರ ಮತ್ತು ಖಾಸಗಿ ಶಾಲೆಗಳು ಅವರನ್ನು ಅತಿಥಿ ಶಿಕ್ಷಕರಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಕ್ಲಾಸ್ ಗಳನ್ನು ತೆಗೆದುಕೊಳ್ಳಲು ಕೇಳುತ್ತಿವೆ. ಅರ್ಹತಾ ಪರೀಕ್ಷೆ ಪಾಸ್ ಮಾಡಿದ್ದರೂ ಸ್ಥಿರ ಹುದ್ದೆ ನೀಡುತ್ತಿಲ್ಲ.

ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರ ಅಭಿಪ್ರಾಯ:

ಅನುಮತಿ ನೀಡಿ ಬಿಇಡಿ ಮಾಡಿಸಿದ್ದರೂ, ಉದ್ಯೋಗ ಅವಕಾಶ ನೀಡದಿರುವುದು ಅನ್ಯಾಯ. ನೇಮಕಾತಿ ನಿಯಮ ತಿದ್ದುಪಡಿ ಮಾಡಿದರೆ 10 ಸಾವಿರಕ್ಕಿಂತ ಹೆಚ್ಚು ಯುವಕರು ಶಿಕ್ಷಕರಾಗಬಹುದು ಎಂದು ಬಿಇಡಿ ಉಪನ್ಯಾಸಕರಾದ ಎಸ್. ಸುರೇಶ್ ನೀರಗುಂದ ತಿಳಿಸಿದ್ದಾರೆ.

ಇನ್ನು, ಪ್ರತಿ ವರ್ಷ ಹೊಸ ಬಿಇಡಿ ಪದವೀಧರರು ಬರುತ್ತಿದ್ದಾರೆ, ಆದರೆ ಅವಕಾಶ ಸಿಗುತ್ತಿಲ್ಲ. ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ ನಮಗೂ ಅವಕಾಶ ನೀಡಬೇಕು ಎಂದು ಬಿಇಡಿ ಉಪನ್ಯಾಸಕ ಚೇತನ್ ನಾಯಕ್ ತಿಳಿಸಿದ್ದಾರೆ.

ಬಿಕಾಂ – ಎಂಕಾಂ ಪದವೀಧರರ ಏಕೈಕ ಬೇಡಿಕೆ:

ನೇಮಕಾತಿ ನಿಯಮ ತಿದ್ದುಪಡಿ ಮಾಡಿ, ಬಿಇಡಿ ಹಾಗೂ ಟಿಇಟಿ ಪಾಸ್ ಮಾಡಿದ ವಾಣಿಜ್ಯ ಪದವೀಧರರಿಗೆ ಶಿಕ್ಷಕರಾಗುವ ಅವಕಾಶ ನೀಡಿ ಎನ್ನುವುದು.

ಒಟ್ಟಾರೆಯಾಗಿ, ಸರ್ಕಾರವೇ ದಾರಿ ತೋರಿಸಿ ಬಿಇಡಿ ಹಾಗೂ ಟಿಇಟಿ ಅವಕಾಶಕೊಟ್ಟಿದ್ದರೂ ಅದೇ ಸರ್ಕಾರವೇ ಉದ್ಯೋಗದ ಬಾಗಿಲು ಮುಚ್ಚಿರುವುದು ಪ್ರಶ್ನಾರ್ಹ. ಸರ್ಕಾರ ನೇಮಕಾತಿ ನಿಯಮವನ್ನು ಮರುಪರಿಶೀಲಿಸಿದರೆ, ವಾಣಿಜ್ಯ ಪದವೀಧರರಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭವಿಷ್ಯ, ರಾಜ್ಯದ ಶಾಲೆಗಳಿಗೆ ಅರ್ಹ ಶಿಕ್ಷಕರು, ಮತ್ತು ಯುವಕರ ಕನಸುಗಳಿಗೆ ಮತ್ತೆ ಬೆಳಕು ನೀಡಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories