ಬೆಂಗಳೂರು ಭಾರತದ ಐಟಿ ಹಬ್ ಎಂದು ಹೆಸರಾಗಿರುವ ಬೆಂಗಳೂರಿನ ಜೀವನ ಶೈಲಿ ಮತ್ತು ಮೂಲಸೌಕರ್ಯ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಐಟಿ, ಸ್ಟಾರ್ಟ್‌ಅಪ್ ಹಾಗೂ ಉದ್ಯೋಗ ಅವಕಾಶಗಳ ಹೆಚ್ಚಳದಿಂದಾಗಿ ಸಾವಿರಾರು ಮಂದಿ ಪ್ರತೀ ತಿಂಗಳು ನಗರಕ್ಕೆ ವಲಸ ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮನೆಗಳ ಬೇಡಿಕೆ ಕೂಡ ಹೆಚ್ಚಾಗಿದೆ, ನಗರದ ಅನೇಕ ಪ್ರದೇಶಗಳಲ್ಲಿ ಮನೆ ಬಾಡಿಗೆ ಬೆಲೆ ಗಗನಕ್ಕೇರಿದೆ. ವಿಶೇಷವಾಗಿ ಕೋವಿಡ್ ನಂತರ ಬಾಡಿಗೆ ದರಗಳು ದಿಢೀರ್ ಏರಿಕೆ ಕಂಡು ಜನ ಸಾಮಾನ್ಯರಿಗೆ ಕೈಗೆಟುಕದ ಮಟ್ಟಕ್ಕೆ ತಲುಪಿವೆ ಎಂಬ ಅಭಿಪ್ರಾಯ ಹೆಚ್ಚಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮನೆ ಹುಡುಕುವುದು ಅಷ್ಟು ಕಷ್ಟವೇ?:
ಇತ್ತೀಚೆಗಷ್ಟೇ ಒಬ್ಬ ಐಟಿ ಉದ್ಯೋಗಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ಸ್ಟಾರ್ಟ್‌ಅಪ್ ಕಂಪನಿಯಲ್ಲಿ ಪ್ರೊಡಕ್ಟ್ ಡಿಸೈನರ್ ಆಗಿರುವ ಸಾಹಿಲ್ ಖಾನ್, ಬೆಂಗಳೂರಿನಲ್ಲಿ ವಾಸಕ್ಕೆ ಸೂಕ್ತವಾದ ಬಾಡಿಗೆ ಮನೆ ಹುಡುಕುವುದು ಕಷ್ಟವಾದ ಕೆಲಸವಾಗಿದೆ ಎಂದು ತನ್ನ ಅನುಭವ ಹಂಚಿಕೊಂಡಿದ್ದಾರೆ.
ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಕೂಕ್‌ಟೌನ್ (Cooke Town) ಪ್ರದೇಶದಲ್ಲಿ 3BHK ಮನೆಗೆ ₹1 ಲಕ್ಷ ಬಾಡಿಗೆ ಕೇಳುತ್ತಿದ್ದಾರೆ! ಈ ಸುದ್ದಿಯನ್ನು ಓದಿದವರು ಇದು ಬಾಡಿಗೆನಾ? ಇಲ್ಲ ಫ್ಲ್ಯಾಟ್ EMIನಾ? ಎಂದು ಪ್ರಶ್ನಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳು ಹೀಗಿವೆ:
ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ:
ಮುಂಬೈ ಬನ್ನಿ! 1 ಲಕ್ಷಕ್ಕೆ 2BHK ಸಿಕ್ಕ್ರೆ ಭಾಗ್ಯ ಅಷ್ಟೇ! ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ ನಂತರ ಮಾಲೀಕರಿಗೆ ಕೂಡಾ ಬ್ಯಾಂಕ್ EMI, maintenance charge, ಇನ್ಫ್ಲುಷನ್ ಎಲ್ಲವೂ ಹೆಚ್ಚಾಗಿದೆ, ಅದಕ್ಕೆ ಬಾಡಿಗೆ ಕೂಡಾ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು slowly ಮುಂಬೈ ಮಾದರಿಯಲ್ಲಿ costliest rental ಸಿಟಿ ಆಗ್ತಿದೆ.
ಮಧ್ಯಮ ವರ್ಗದವರಿಗೆ ಬೆಂಗಳೂರು dream city ಅಲ್ಲ, struggle city ಆಗಿದೆ ಎಂದು ಕೆಲವರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಇನ್ನು ಕೆಲವರು ಬೆಂಗಳೂರು ಬಾಡಿಗೆ ದರಗಳನ್ನು ದೆಹಲಿ NCR ಪ್ರದೇಶದೊಂದಿಗೆ ಹೋಲಿಸಿ, ಅಲ್ಲಿ ಬಾಡಿಗೆ ಮತ್ತು ಡೆಪಾಸಿಟ್ ಹೆಚ್ಚು ಸಮಂಜಸವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ನಂತರ ಬಾಡಿಗೆ ದರ ಏರಿಕೆ:
ಕೋವಿಡ್ ಸಮಯದಲ್ಲಿ ಅನೇಕರು ಮನೆ ತೊರೆದು ತಮ್ಮ hometown ಗೆ ಹಿಂತಿರುಗಿದ ಕಾರಣ, ಆಗ ಮನೆ ಬಾಡಿಗೆ ಕಡಿಮೆಯಾಗಿತ್ತು. ಆದರೆ post-pandemic ನಲ್ಲಿ, IT ಉದ್ಯೋಗಿಗಳು ಮತ್ತೆ ಬೆಂಗಳೂರಿಗೆ ವಾಪಸ್ ಬಂದಂತೆ ಬೇಡಿಕೆ ಹೆಚ್ಚಿಕೊಂಡು, ಇದೀಗ ಮನೆ ಮಾಲೀಕರು ಬಾಡಿಗೆ ದರಗಳನ್ನು ನೇರವಾಗಿ 50%–100% ರಷ್ಟು ಹೆಚ್ಚಿಸಿದ್ದಾರೆ.
ಮನೆ ಖರೀದಿ vs ಬಾಡಿಗೆ ಹೊಸ ಗೊಂದಲ:
ಬಾಡಿಗೆ ದರಗಳ ಏರಿಕೆಯಿಂದ ಹಲವರು ಬಾಡಿಗೆಯನ್ನು ಕೊಡುವುದಕ್ಕಿಂತ EMI ಕೊಟ್ಟು ಮನೆಯನ್ನೇ ಖರೀದಿ ಮಾಡೋದು ಒಳ್ಳೆಯದೇ? ಎಂಬ ಆಲೋಚನೆಯಲ್ಲಿ ಇದ್ದಾರೆ.
ಭಾರತದ Costliest Rent Cityಗಳಲ್ಲೊಂದು ಬೆಂಗಳೂರು?:
ಮುಂಬೈ, ದೆಹಲಿ NCR ನಂತರ ಇದೀಗ ಬೆಂಗಳೂರು ದೇಶದ 3ನೇ ಅತಿ ದುಬಾರಿ ಬಾಡಿಗೆ ನಗರ ಎನ್ನುವ ಮಾತು ಕೇಳಿಬರುತ್ತಿದೆ.
ಒಟ್ಟಾರೆಯಾಗಿ, ಬೆಂಗಳೂರು ಅಭಿವೃದ್ಧಿಯೊಂದಿಗೆ ಬದುಕಿನ ವೆಚ್ಚವೂ ಏರಿಕೆಯಾಗುತ್ತಿದೆ. ಉದ್ಯೋಗ ಇರುವವರೆಗೆ ಈ ನಗರ ಅವಕಾಶಗಳ ನೆಲೆ. ಆದರೆ ಮನೆ ಬಾಡಿಗೆ ಏರಿಕೆ ಸಾಮಾನ್ಯ ಜನರಿಗೆ ಇದೀಗ ದೊಡ್ಡ ಸವಾಲಾಗಿದೆ. ಮುಂದಿನ ದಿನಗಳಲ್ಲಿ ಈ ಬೆಲೆಗಳ ಏರಿಳಿತ ಹೇಗಿರುತ್ತದೆ? ಎಂದು ನಗರವಾಸಿಗಳು ಕಾದು ನೋಡಬೇಕಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ‘ರಾಜ್ಯ ಸರ್ಕಾರಿ’ ನೌಕರರಿಗೆ ಬಂಪರ್ ಗಿಫ್ಟ್ : ತುಟ್ಟಿಭತ್ಯೆ ಶೇ. 58 ಕ್ಕೆ ಹೆಚ್ಚಿಸಿ ಸರ್ಕಾರದಿಂದ ಮಹತ್ವದ ಆದೇಶ.!
- ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಸರ್ಕಾರದಿಂದ ಬಿಗ್ ಅಪ್ಡೇಟ್
- ರಾಜ್ಯ ಸರ್ಕಾರಿ ನೌಕರರ ಬಡ್ತಿಗೆ ಹೊಸ ನಿಯಮ ಜಾರಿ! ಕೋರ್ಸ್ ಪೂರ್ಣಗೊಳಿಸುವುದು ಇನ್ಮುಂದೆ ಕಡ್ಡಾಯ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




