2025ನೇ ಸಾಲಿನ ಬಿ.ಇಡಿ ದಾಖಲಾತಿಗೆ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಕೇಂದ್ರೀಕೃತ ದಾಖಲಾತಿ ಘಟಕವು ಇದೀಗ ಬಿಡುಗಡೆ ಮಾಡಿದೆ.
ಈ ಕುರಿತಂತೆ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಬಿ.ಇಡಿ ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು https://schooleducation.karnataka.gov.in/ ಜಾಲತಾಣದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಈ ಪಟ್ಟಿಯನ್ನು ವೀಕ್ಷಿಸಿ ಅಭ್ಯರ್ಥಿಗಳು ಹಂಚಿಕೆಯಾದ ಕಾಲೇಜುಗಳಿಗೆ ಸೇರ ಬಯಸಿದಲ್ಲಿ ಯೂಸರ್ ಐಟಿ ಮತ್ತು ಪಾಸ್ ವರ್ಡ್ ಅನ್ನು ಬಳಸಿ ದಿನಾಂಕ 25-11-2025ರ ಇಂದಿನಿಂದ 05-12-2025ರವರೆಗೆ ನಿಗದಿತ ಶುಲ್ಕದ ಚಲನ್ ಅನ್ನು ಮುದ್ರಿಸಿಕೊಂಡು ಎಸ್ ಬಿ ಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಬಹುದು. ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ತೆರಳಿ, ದಾಖಲಾತಿ ಪತ್ರವನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ.
ಇನ್ನೂ ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೇ ಇರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ Opted for the second round ಎಂದು ದಿನಾಂಕ 25-11-2025ರಿಂದ 5-12-2025ರ ಒಳಗಾಗಿ ತಮ್ಮ ಅಭಿಮತವನ್ನು ದಾಖಲಿಸಬೇಕು. ಒಂದು ವೇಳೆ ಅಭಿಮತ ದಾಖಲಿಸದೇ ಇದ್ದರೇ ಅಂತಹ ಅಭ್ಯರ್ಥಿಗಳನ್ನು ಬಿಟ್ಟು, ಎರಡನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.
ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ದಿನಾಂಕ 08-12-2025ರಂದು ಬಿಡುಗಡೆಗೊಳಿಸಲಾಗುವುದು. ಇದರಂತೆ ಮೊದಲ ಪಟ್ಟಿಯಲ್ಲಿ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸದವರು Opted for the second round ಎಂದು ಅಭಿಮತವನ್ನು ದಾಖಲಿಸಿದ ಅಭ್ಯರ್ಥುಗಳು ತಮ್ಮ ಎರಡನೇ ಮತ್ತು ಕೊನೆಯ ಸೀಟಿ ಹಂಚಿಕೆಗಾಗಿ ದಿನಾಂಕ 08-12-2025ರಿಂದ ದಿನಾಂಕ 10-12-2025ರವರೆಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ Option Entry ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.


ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




