Picsart 25 11 24 22 57 51 149 scaled

8ನೇ ವೇತನ ಆಯೋಗಕ್ಕೆ ಕೇಂದ್ರ ಅನುಮೋದನೆ: 2026ರಿಂದ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ನಿರೀಕ್ಷೆ.!

Categories:
WhatsApp Group Telegram Group

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಸಂದರ್ಭದಲ್ಲಿ  ಸಿಹಿ ಸುದ್ದಿಯೊಂದು ಸಿಗುವ ನಿರೀಕ್ಷೆ ಇದೆ. ಬಹು ನಿರೀಕ್ಷಿತ 8ನೇ ವೇತನ ಆಯೋಗ (8th Pay Commission) ರಚನೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ Terms of Reference (ToR) ಜಾರಿ ಮಾಡಲು ಅನುಮೋದನೆ ನೀಡಿದೆ. ಇದರಿಂದ ಹೊಸ ವೇತನ ಆಯೋಗವು ಅಧಿಕೃತವಾಗಿ ಕಾರ್ಯಪ್ರವೃತ್ತಿಯಾಗಲಿದ್ದು, ಸಮಿತಿಯು ಮುಂದಿನ 18 ತಿಂಗಳೊಳಗೆ ತನ್ನ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಈ ವರದಿ ಹಾಗೂ ಶಿಫಾರಸುಗಳು 2026ರ ಜನವರಿ 1ರಿಂದ ಜಾರಿಗೆ ಬರಲಿವೆ ಎಂದು ಸರ್ಕಾರಿ ಮೂಲಗಳು ಸೂಚಿಸಿವೆ. ಈ ಬದಲಾವಣೆಗಳಿಂದ ಕೇಂದ್ರ ಸರ್ಕಾರಿ ನೌಕರರು, ವಿಶೇಷವಾಗಿ SSC ಲೆವೆಲ್-1 ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಉದ್ಯೋಗಿಗಳು, ಭಾರೀ ವೇತನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

8ನೇ ವೇತನ ಆಯೋಗದ ಸಮಿತಿ ರಚನೆ:

ಹುದ್ದೆ : ಅಧ್ಯಕ್ಷೆ, ಹೆಸರು – ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ
ಹುದ್ದೆ : ಅರೆಕಾಲಿಕ ಸದಸ್ಯ,ಹೆಸರು – ಪ್ರೊ. ಪುಲಕ್ ಘೋಷ್
ಹುದ್ದೆ : ಸದಸ್ಯ ಕಾರ್ಯದರ್ಶಿ, ಹೆಸರು – ಪಂಕಜ್ ಜೈನ್
ಈ ಸಮಿತಿಯು ಕೇಂದ್ರ ಸರ್ಕಾರದ ನೌಕರರ ವೇತನ, ಭತ್ಯೆಗಳು, ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಪರಿಶೀಲಿಸಿ ಹೊಸ ವೇತನ ಶಿಫಾರಸುಗಳನ್ನು ಮಾಡಲಿದೆ.

ಪ್ರಸ್ತುತ 7ನೇ ವೇತನ ಆಯೋಗದಲ್ಲಿರುವ ವೇತನ ರಚನೆ:

SSC ಲೆವೆಲ್-1 ನೌಕರರ ಪ್ರಸ್ತುತ ಮೂಲ ವೇತನ ₹18,000 ಆಗಿದ್ದು, ಅದಕ್ಕೆ DA (ತುಟ್ಟಿ ಭತ್ಯೆ), HRA (ಮನೆ ಬಾಡಿಗೆ ಭತ್ಯೆ), TA (ಪ್ರಯಾಣ ಭತ್ಯೆ) ಹಾಗು ಇತರ ಭತ್ಯೆಗಳು ಸೇರಿಸುತ್ತಾರೆ.
ವೇತನ ನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸುವುದು Fitment Factor, ಇದು ಮೂಲ ವೇತನದ ಗುಣಕವಾಗಿ ಬಳಸಲಾಗುತ್ತದೆ.

8ನೇ ವೇತನ ಆಯೋಗದಲ್ಲಿ ಸಾಧ್ಯವಿರುವ ಹೊಸ ವೇತನ ರಚನೆ:

ಸರ್ಕಾರಿ ಮೂಲಗಳ ವರದಿಗಳ ಪ್ರಕಾರ, ಹೊಸ ವೇತನ ಆಯೋಗದಲ್ಲಿ Fitment Factor 1.92 ಆಗಿರಬಹುದು ಎಂಬ ಅಂದಾಜು ಇದೆ.
ಹೀಗಾದರೆ SSC ಲೆವೆಲ್-1 ಹುದ್ದೆಯ ಹೊಸ ಮೂಲ ವೇತನ: ₹18,000 × 1.92 = ₹34,560 ಅಂದರೆ, ಹಂತ 1 ನೌಕರರ ಹೊಸ ಮೂಲ ವೇತನ ₹34,560 ಆಗುವ ಸಾಧ್ಯತೆ ಹೆಚ್ಚು. ಇದಕ್ಕೆ DA, HRA ಮತ್ತು TA ಸೇರಿಸಿದಾಗ ಒಟ್ಟಾರೆ ವೇತನ ಇನ್ನಷ್ಟು ಹೆಚ್ಚಾಗಲಿದೆ.

ಒಟ್ಟಾರೆ ವೇತನದಲ್ಲಿ ಏನು ಬದಲಾವಣೆ?:

ನೌಕರರ ವೇತನದಲ್ಲಿ 15% ರಿಂದ 25% ರಷ್ಟು ವೃದ್ಧಿ ಆಗಬಹುದು ಎಂಬ ಅಂದಾಜು ಮೂಡಿದೆ. ವೇತನದ ಅಂತಿಮ ಪ್ರಮಾಣ ಈ ಅಂಶಗಳ ಮೇಲೆ ಅವಲಂಬಿತವಾಗಿರಲಿದೆ.
DA ವಿಲೀನ ನೀತಿ
ಹೊಸ HRA ಶೇಕಡಾವಾರು
TA ಪರಿಷ್ಕರಣೆ
ವೇತನ ಆಧಾರಿತ ಭತ್ಯೆ ಬದಲಾವಣೆ

DA ಪುನಃ 0% ರಿಂದ ಆರಂಭವಾಗಲಿದೆ:
ಹೊಸ ವೇತನ ಆಯೋಗ ಜಾರಿಗೆ ಬಂದ ನಂತರ DA ಅನ್ನು ಶೂನ್ಯಕ್ಕಿಳಿಸಲಾಗುತ್ತದೆ, ನಂತರ ಆರು ತಿಂಗಳಿಗೊಮ್ಮೆ   ಹೆಚ್ಚಿಸಲಾಗುತ್ತದೆ.

ಅಂದಾಜು ಹೊಸ ವೇತನ ಮಾದರಿ (Example):
ಹೊಸ ಮೂಲ ವೇತನ : ₹34,560
DA : 0% (2026ರಿಂದ ಆರಂಭ)
HRA: ಶೇಕಡಾವಾರು ಅನುಸಾರ
TA: ಪರಿಷ್ಕೃತ ನಿಯಮಗಳ ಪ್ರಕಾರ

ಎಂದು ಜಾರಿಗೆ ಬರಲಿದೆ?:

2025: ಸಮಿತಿ ಕಾರ್ಯ ಪ್ರಾರಂಭ
2026 ಜನವರಿ: ಶಿಫಾರಸು ಜಾರಿಗೆ ಸಾಧ್ಯತೆ
2027: ಅಂತಿಮ ವರದಿ ಹಾಗೂ ಪೂರ್ಣ ಜಾರಿ ಪ್ರಕ್ರಿಯೆ

ಒಟ್ಟಾರೆಯಾಗಿ, 8ನೇ ವೇತನ ಆಯೋಗದ ಜಾರಿ ಬೇಗ ಬದಲಾವಣೆ ಆಗದೇ ಇದ್ದರೂ, 2026ರಿಂದ ಲಕ್ಷಾಂತರ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನದಲ್ಲಿ ಮಹತ್ತರ ಬದಲಾವಣೆ ಸಂಭವಿಸುವುದು ಖಚಿತ ಎಂದು ಹೇಳಲಾಗುತ್ತಿದ

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories