Picsart 25 11 23 22 52 57 865 scaled

ಹೊಸ Labour Code: ಕೇವಲ 1 ವರ್ಷ ಕೆಲಸ ಮಾಡಿದ್ರೆ ಸಾಕು ಉದ್ಯೋಗಿಗಳಿಗೆ ಸಿಗುತ್ತೆ ಗ್ರಾಚ್ಯುಟಿ ಹಣ!

Categories:
WhatsApp Group Telegram Group

ಇಂದು ಭಾರತದಲ್ಲಿ ಉದ್ಯೋಗಿಗಳ ಹಕ್ಕುಗಳು, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಉದ್ಯೋಗದ ಸ್ವರೂಪದಲ್ಲಿ ವೇಗವಾಗಿ  ಬದಲಾವಣೆಗಳ ಆಗುತ್ತಿರುವ ಹಿನ್ನೆಲೆ, ಗುತ್ತಿಗೆ ಮತ್ತು ನಿಗದಿತ ಅವಧಿಯ ಕೆಲಸಗಳು ಹೆಚ್ಚಾಗುತ್ತಿರುವಾಗ, ಈ ವರ್ಗದ ನೌಕರರಿಗೆ ಶಾಶ್ವತ ನೌಕರರಷ್ಟೇ ಹಕ್ಕುಗಳಿರಬೇಕೆಂಬ ಬೇಡಿಕೆ ದಿನೇದಿನೇ ಜೋರಾಗಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ನಿಯಮಗಳನ್ನು ಸರಳಗೊಳಿಸುವ ಮತ್ತು ಎಲ್ಲ ವರ್ಗದ ಉದ್ಯೋಗಿಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನವೆಂಬರ್ 21, 2025ರಂದು ಕೇಂದ್ರ ಸರ್ಕಾರ ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತಂದಿದ್ದು, ಇದರ ಪರಿಣಾಮವಾಗಿ 29 ಹಳೆಯ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ, ಅವುಗಳನ್ನು ನಾಲ್ಕು ಪ್ರಮುಖ ಸಂಹಿತೆಗಳಾಗಿ ಏಕೀಕರಿಸಲಾಗಿದೆ. ಹೊಸ ನಿಯಮಗಳು ಜಾರಿಗೆ ಬಂದ ನಂತರ ಲಕ್ಷಾಂತರ ನೌಕರರ ಉದ್ಯೋಗ ಹಕ್ಕುಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ವಿಶೇಷವಾಗಿ ಗ್ರಾಚ್ಯುಟಿ ಯೋಜನೆಗೆ ಸಂಬಂಧಿಸಿದ ಬದಲಾವಣೆ ಲಕ್ಷಾಂತರ ಉದ್ಯೋಗಿಗಳಿಗೆ ಬಂಪರ್ ಸುದ್ಧಿ ಆಗಿದೆ.

ಒಂದು ವರ್ಷ ಸೇವೆ ಸಾಕು!:

ಈಗಾಗಲೇ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ,
ಪರ್ಮನಂಟ್ ಉದ್ಯೋಗಿಗಳು ಮಾತ್ರವಲ್ಲ, ನಿಗದಿತ ಅವಧಿ (Fixed Term) ಉದ್ಯೋಗಿಗಳಿಗೂ ಗ್ರಾಚ್ಯುಟಿ ಸಿಗಲಿದೆ.
ಈಗ 5 ವರ್ಷಗಳ ಸೇವೆ ಅಗತ್ಯವಿಲ್ಲ ಕೇವಲ 1 ವರ್ಷದ ಸೇವೆ ಮಾಡಿದರೆ ಸಾಕು!
ಹಿಂದಿನ ನಿಯಮಗಳ ಪ್ರಕಾರ ಗ್ರಾಚ್ಯುಟಿ ಪಡೆಯಲು 5 ವರ್ಷಗಳ ನಿರಂತರ ಸೇವೆ ಕಡ್ಡಾಯವಾಗಿತ್ತು. ಇದರಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅಥವಾ ಹಂಗಾಮಿ ಕಾರ್ಮಿಕರು ಈ ಪ್ರಯೋಜನದಿಂದ ವಂಚಿತರಾಗಿದ್ದರು. ಆದರೆ ಈಗ ಒಂದು ವರ್ಷ ಪೂರ್ಣಗೊಳಿಸಿದ Fixed Term Employees ಕೂಡ ಸಂಬಳದ ಜೊತೆಗೆ ಗ್ರಾಚ್ಯುಟಿ ಪಡೆಯುವ ಹಕ್ಕು ಹೊಂದುತ್ತಾರೆ.

ಯಾರು ಈ ಹೊಸ ನಿಯಮಗಳ ಪ್ರಯೋಜನ ಪಡೆಯಬಹುದು?:

ಪರ್ಮನಂಟ್ ಉದ್ಯೋಗಿಗಳು
Fixed Term Employees (ನಿಗದಿತ ಅವಧಿ ನೌಕರರು)
ಗುತ್ತಿಗೆ ನೌಕರರು
ಗಿಗ್ ಉದ್ಯೋಗಿಗಳು
ಪ್ಲಾಟ್‌ಫಾರ್ಮ್ ನೌಕರರು (ಉದಾ: Swiggy, Zomato, Ola, Uber)
ದಿನಗೂಲಿ ಕಾರ್ಮಿಕರು
ವಲಸೆ ಕಾರ್ಮಿಕರು
ಅಂಗಡಿ ಮತ್ತು ಸಣ್ಣ ಉದ್ಯಮ ಕಾರ್ಮಿಕರು
ಮಹಿಳಾ ಮತ್ತು ಅಪ್ರಾಪ್ತ ಉದ್ಯೋಗಿಗಳು

ಹೊಸ ಸಂಹಿತೆಯ ಗುರಿಗಳು ಏನು?:

ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿರುವಂತೆ, ಈ ಬದಲಾವಣೆಯ ಮುಖ್ಯ ಉದ್ದೇಶಗಳು,
ಉತ್ತಮ ವೇತನ ವ್ಯವಸ್ಥೆ
ಸಾಮಾಜಿಕ ಭದ್ರತೆ
ವೈದ್ಯಕೀಯ ಮತ್ತು ವಿಮೆ ಸೌಲಭ್ಯಗಳು
ಗುತ್ತಿಗೆ ಉದ್ಯೋಗಿಗಳ ದುರುಪಯೋಗ ತಡೆ
ನೇರ ನೇಮಕಾತಿಯನ್ನು ಉತ್ತೇಜಿಸುವುದು

ಗ್ರಾಚ್ಯುಟಿ ಎಂದರೇನು?:

ಗ್ರಾಚ್ಯುಟಿ ಎಂದರೆ ಉದ್ಯೋಗಿಯ ನಿಷ್ಠೆ ಮತ್ತು ದೀರ್ಘಾವಧಿ ಸೇವೆಗೆ ಸಂಸ್ಥೆಯಿಂದ ನೀಡುವ ಆರ್ಥಿಕ ಗೌರವ.
ಇದು ನಿವೃತ್ತಿ, ರಾಜೀನಾಮೆ, ಉದ್ಯೋಗ ಬದಲಾವಣೆ ಅಥವಾ ಯಾವುದೇ ಕಾರಣಕ್ಕೆ ಸಂಸ್ಥೆಯಿಂದ ಹೊರನಡೆಯುವಾಗ ದೊರೆಯುವ ಹಣಕಾಸು ಪ್ರಯೋಜನ.

ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?:

Formula:
Gratuity = (Last Drawn Salary × 15/26) × Completed Years of Service
ಸಂಬಳ = ಮೂಲ ವೇತನ + DA

ಉದಾಹರಣೆಗೆ:
ಒಬ್ಬ ಉದ್ಯೋಗಿಯ ಕೊನೆಯ ಸಂಬಳ ₹50,000 ಮತ್ತು ಸೇವೆ: 5 ವರ್ಷ.
₹50,000 × (15/26) × 5 = ₹1,44,230

ಈ ಬದಲಾವಣೆ ಯಾಕೆ ಮಹತ್ವದ್ದು?:

ಉದ್ಯೋಗಿಗಳು ಹೆಚ್ಚು ಸುರಕ್ಷಿತವಾಗಿ ಕೆಲಸ ಮಾಡಬಹುದು.
ಸಂಸ್ಥೆಗಳ ಮೇಲೆ ಪಾರದರ್ಶಕತೆ ಬೆಳೆಸುತ್ತದೆ.
ಗುತ್ತಿಗೆ ವ್ಯವಸ್ಥೆಯ ದುರ್ಬಳಕೆ ಕಡಿಮೆಯಾಗುತ್ತದೆ.
ಎಲ್ಲ ವರ್ಗದ ನೌಕರರಿಗೆ ಸಮಾನ ಹಕ್ಕು ದೊರಕುತ್ತದೆ.

ಒಟ್ಟಾರೆಯಾಗಿ, ಹೊಸ Labour Code ಭಾರತದಲ್ಲಿ ಉದ್ಯೋಗ ವ್ಯವಸ್ಥೆಗೆ ಹೊಸ ಪರಿವರ್ತನೆ ತರಲಿದೆ. ಒಂದು ವರ್ಷದಲ್ಲೇ ಗ್ರಾಚ್ಯುಟಿ ಸಿಗುವ ನಿಯಮ ದೇಶದ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಗೇಮ್ ಚೇಂಜರ್ ಆಗಲಿದೆ. ಇನ್ನು ಮುಂದೆ ಉದ್ಯೋಗ ಬದಲಾಯಿಸುವವರು, ಗುತ್ತಿಗೆ ಆಧಾರದಲ್ಲಿರುವವರು ಮತ್ತು ಗಿಗ್ ವರ್ಕರ್‌ಗಳಿಗೆ ಇದು ದೊಡ್ಡ ಆರ್ಥಿಕ ರಿಲೀಫ್ ಆಗಲಿದೆ.

WhatsApp Image 2025 09 05 at 10.22.29 AM 18

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories