Picsart 25 11 23 22 38 20 106 scaled

ಮನೆ-ಹೋಟೆಲ್‌ಗಳಲ್ಲಿ ಬಳಸುವ Refined Oil ನಿಜಕ್ಕೂ ಸುರಕ್ಷಿತವೇ? ಸತ್ಯ ತಿಳಿದರೆ ಬೆಚ್ಚಿ ಬೀಳುತ್ತೀರ!

Categories: ,
WhatsApp Group Telegram Group

ಇಂದಿನ ಬದುಕಿನ ವೇಗ ಹೆಚ್ಚಿದಂತೆ, ನಮ್ಮ ಆಹಾರ ಪದ್ಧತಿಗಳಲ್ಲಿ ಆಗುತ್ತಿರುವ ಬದಲಾವಣೆಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಫಾಸ್ಟ್ ಫುಡ್, ಸ್ಟೋರ್ ಆಹಾರಗಳು, ಹುರಿದ ತಿಂಡಿಗಳು, ಜಂಕ್ ಫುಡ್ ಇವು ಈಗ ಸಾಮಾನ್ಯ ಜೀವನಶೈಲಿಯ ಭಾಗವಾಗಿವೆ. ಈ ರೀತಿಯ ಆಹಾರ ಪದ್ಧತಿಯ ಪರಿಣಾಮವಾಗಿ ಮಧುಮೇಹ, ರಕ್ತದೊತ್ತಡ ಮಾತ್ರವಲ್ಲದೇ, ಯಕೃತ್ತು (Liver) ಸಂಬಂಧಿತ ಕಾಯಿಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನವರು ಯಕೃತ್ತಿಗೆ ಹಾನಿ ಆಗುವುದಕ್ಕೆ ಮೊದಲ ಮತ್ತು ಏಕೈಕ ಕಾರಣ ಆಲ್ಕೋಹಾಲ್ ಎಂದು ನಂಬುತ್ತಾರೆ. ಆದರೆ ಇತ್ತೀಚಿನ ಆರೋಗ್ಯ ಅಧ್ಯಯನಗಳು ಹೇಳುವುದೇ ಬೇರೆ ವಿಷಯ. ನಾವು ಪ್ರತಿದಿನ, ನಿರಂತರವಾಗಿ ಅಡುಗೆಯಲ್ಲಿ ಬಳಸುವ ಒಂದು ಪದಾರ್ಥ ಆಲ್ಕೋಹಾಲ್‌ಗಿಂತಲೂ ಹೆಚ್ಚು ಅಪಾಯಕಾರಿ. ಹೌದು, ಸಾಮಾನ್ಯವಾಗಿ ಮನೆ ಮತ್ತು ಹೋಟೆಲ್‌ಗಳಲ್ಲಿ ಬಳಸುವ ಅಡುಗೆ ಎಣ್ಣೆ (Refined Cooking Oil) ನಮ್ಮ ಜೀವಕ್ಕೆ ಅಪಾಯಕಾರಿ.

ರಿಫೈನ್ಡ್ ಎಣ್ಣೆ ಯಕೃತ್ತಿಗೆ ಹೇಗೆ ಹಾನಿ ಮಾಡುತ್ತದೆ?:

ವೈದ್ಯಕೀಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಲಭಿಸುವ ಹೆಚ್ಚಿನ Refined Oils ನಮ್ಮ ದೇಹಕ್ಕೆ ಸಹಜವಾಗಿರುವ ಎಣ್ಣೆಯಲ್ಲ. ವಿಧಾನಬದ್ಧವಾಗಿ ಸಂಸ್ಕರಿಸುವಾಗ ಎಣ್ಣೆಗೆ High Heat processing, ಕೆಮಿಕಲ್ Filteration, ಮತ್ತು Hexane (ಪೆಟ್ರೋಲ್‌ನಲ್ಲಿ ಬಳಸುವ ರಾಸಾಯನಿಕ) ಬಳಕೆ ಮಾಡಲಾಗುತ್ತದೆ. ಈ ರಾಸಾಯನಿಕ ಪರಿಣಾಮದಿಂದ, ಎಣ್ಣೆಯಲ್ಲಿರುವ ಒಮೇಗಾ-6 Fats ಹಾನಿಕಾರಕ Trans Fat ರೂಪಕ್ಕೆ ಬದಲಾಗುತ್ತದೆ. ಇವು ದೇಹದಲ್ಲಿ ಸಂಗ್ರಹವಾಗಿ ಯಕೃತ್ತಿನಲ್ಲಿ ಕೊಬ್ಬು ಜಮಾಗುವಿಕೆ (Fatty Liver), ಉರಿಯೂತ (Inflammation) ಮತ್ತು ದೀರ್ಘಾವಧಿಯಲ್ಲಿ Liver Cirrhosis ಮತ್ತು NAFLD ಉಂಟುಮಾಡಬಹುದು.

ಯಾರಿಗೂ ತಿಳಿಯದ ಅಪಾಯಕಾರಿ ಎಣ್ಣೆಗಳು:

ವೈದ್ಯರು ಎಚ್ಚರಿಕೆ ನೀಡಿರುವ ಎಣ್ಣೆಗಳ ಪಟ್ಟಿ ಹೀಗಿದೆ
ಸೋಯಾಬೀನ್ ಎಣ್ಣೆ
ಕ್ಯಾನೋಲಾ ಎಣ್ಣೆ
ಕಾರ್ನ್ ಎಣ್ಣೆ
ಹತ್ತಿಬೀಜ ಎಣ್ಣೆ
ಸೂರ್ಯಕಾಂತಿ ಎಣ್ಣೆ
ದ್ರಾಕ್ಷಿ ಬೀಜದ ಎಣ್ಣೆ

ಈ ಎಣ್ಣೆಗಳನ್ನು ಯಾವ ಯಾವ ಆಹಾರದಲ್ಲಿ ಹೆಚ್ಚು ಬಳಸಲಾಗುತ್ತದೆ:

ಪ್ಯಾಕ್ ಸಾಂಬಾರ್ ಪೌಡರ್
ಪ್ಯಾಕ್ ಮಾಡಿದ ಚಿಪ್ಸ್ ಮತ್ತು ನಮ್‌ಕೀನ್
ಹೋಟೆಲ್ ತಿಂಡಿಗಳು
ಮೇಯೋನೇಸ್
ಬಿಸ್ಕಿಟ್ಸ್
ಬರ್ಗರ್ ಮತ್ತು ಫ್ರೈಡ್ ಐಟಮ್ಸ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ. ಕೊಬ್ಬಿನ ಯಕೃತ್ತಿನ ಸಮಸ್ಯೆ ಇರುವವರಿಗೆ ಇವು ಇನ್ನೂ ಅಪಾಯಕಾರಿ.

ಯಕೃತ್ತಿಗೆ ಉತ್ತಮ ಪರ್ಯಾಯ ಎಣ್ಣೆಗಳು ಯಾವುವು?:

ತಜ್ಞರ ಪ್ರಕಾರ ಅಡುಗೆಯಲ್ಲಿ ಬಳಸಬಹುದಾದ ಉತ್ತಮ ಎಣ್ಣೆಗಳು:
ತೆಂಗಿನ ಎಣ್ಣೆ
ಆಲಿವ್ ಎಣ್ಣೆ
ಬೆಣ್ಣೆ/ತುಪ್ಪ (Desi Ghee)
ಶೇಂಗಾ ಎಣ್ಣೆ

ಲಿವರ್‌ಗೆ ನೆರವಾಗುವ ಪೂರಕಗಳು:

ಕೊಬ್ಬಿನ ಯಕೃತ್ತು ಇರುವವರಿಗೆ ವೈದ್ಯರು ಕೆಲವೊಮ್ಮೆ TUDCA (Tauroursodeoxycholic Acid) ಎಂಬ ಪೂರಕವನ್ನು ಶಿಫಾರಸು ಮಾಡುತ್ತಾರೆ. ಇದು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ಸ್ವತಃ ತೆಗೆದುಕೊಳ್ಳಬಾರದು ವೈದ್ಯರ ಸಲಹೆ ಅಗತ್ಯ.

ಯಕೃತ್ತು ಆರೋಗ್ಯವಾಗಿರಲು ಮುಖ್ಯ ಸಲಹೆಗಳು:

ಅತಿಯಾಗಿ ಹುರಿದ ಆಹಾರಗಳನ್ನು ತಪ್ಪಿಸಿರಿ
ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ
ಹೆಚ್ಚು ನೀರು ಕುಡಿಯುವುದು
ಸಕ್ಕರೆ ಮತ್ತು ಜಂಕ್ ಫುಡ್ ಕಡಿಮೆ ಮಾಡುವುದು
ಹಸಿರು ತರಕಾರಿ, ಸಲಾಡ್, ಬಾಳೆಹಣ್ಣು, ಬೀಟ್‌ರೂಟ್‌ ಸೇವನೆ ಹೆಚ್ಚಿಸಿ
ಆದರೆ, ಸ್ವಯಂ ಔಷಧ ಸೇವನೆ ಮಾಡುವುದು ಅಪಾಯಕಾರಿ. ವೈದ್ಯರನ್ನು ಸಂಪರ್ಕಿಸಿದ ಬಳಿಕವೇ ಬಳಸಬೇಕು.

ಗಮನಿಸಿ:

ಈ ಮಾಹಿತಿಯನ್ನು ವೈದ್ಯಕೀಯ ಜರ್ನಲ್‌ಗಳು, ಆರೋಗ್ಯ ವರದಿಗಳು ಮತ್ತು ತಜ್ಞರ ಶಿಫಾರಸುಗಳಿಂದ ಸಂಗ್ರಹಿಸಲಾಗಿದೆ. ಇದು ಕೇವಲ ಜಾಗೃತಿ ಮೂಡಿಸುವ ಸಲುವಾಗಿ ನೀಡಲಾಗುತ್ತಿದೆ. ಯಾವುದೇ ಆಹಾರ ಅಥವಾ ಜೀವನಶೈಲಿ ಬದಲಾವಣೆ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ನೀರಿನ ಸೇವನೆ ಮತ್ತು ಸರಿಯಾದ ವಿಶ್ರಾಂತಿ ಇವು ಯಕೃತ್ತಿಗೆ ಅತ್ಯುತ್ತಮ ಪ್ರಾಕೃತಿಕ ಔಷಧ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories