Picsart 25 11 22 22 22 28 460 scaled

ಬಾಡಿಗೆ ಮನೆಯಲ್ಲಿ ವಾಸಿಸುವವರೇ ಗಮನಿಸಿ: ಹೊಸ ಬಾಡಿಗೆ ಒಪ್ಪಂದ 2025 ಜಾರಿಗೆ — ನಿಯಮ ಉಲ್ಲಂಘನೆಗೆ ದಂಡ!

Categories:
WhatsApp Group Telegram Group

ನಗರಗಳಲ್ಲಿ ದಿನೇದಿನೇ ಮನೆ ಬೆಲೆಗಳು ಗಗನಕ್ಕೇರುತ್ತಿರುವಾಗ, ಸ್ವಂತ ಮನೆ ಖರೀದಿಸುವುದು ಅನೇಕ ಮಧ್ಯಮವರ್ಗದ ಕುಟುಂಬಗಳ ಕನಸಾಗಿಯೇ ಉಳಿದಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಾಡಿಗೆ ಮನೆಗಳ ಅವಲಂಬನೆ ಹೆಚ್ಚಾಗಿದ್ದು, ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಡೆಪಾಸಿಟ್ ಗೊಂದಲ, ಬಾಡಿಗೆ ಏರಿಕೆ, ನೋಟಿಸ್‌ ವಿವಾದಗಳು, ಅನಧಿಕೃತವಾಗಿ ಮನೆ ಖಾಲಿ ಮಾಡುವ ಒತ್ತಡ ಇತ್ಯಾದಿ ಸಮಸ್ಯೆಗಳು ವರ್ಷಗಳಿಂದ ಸಾಗುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂತಹ ಗೊಂದಲಗಳಿಗೆ ಕಡಿವಾಣ ಹಾಕಲು ಹಾಗೂ ಬಾಡಿಗೆ ವ್ಯವಸ್ಥೆಗೆ ಶಿಸ್ತಿನ ಚೌಕಟ್ಟು ತರಲು ಕೇಂದ್ರ ಸರ್ಕಾರವು ಇದೀಗ ಹೊಸ ಬಾಡಿಗೆ ಒಪ್ಪಂದ 2025 ಅನ್ನು ಜಾರಿಗೆ ತರಲು ತೀರ್ಮಾನಿಸಿದೆ. ಈ ನಿಯಮಗಳು Model Tenancy Act (MTA) ಅನ್ನು ಆಧಾರವಾಗಿಸಿಕೊಂಡಿದ್ದು, ದೇಶದಾದ್ಯಂತ ಬಾಡಿಗೆ ವ್ಯವಸ್ಥೆ ಪಾರದರ್ಶಕ ಮತ್ತು ಕಾನೂನಿನ ನಿಯಮಗಳೊಂದಿಗೆ ಮುಂದುವರಿಯುವುದು ಮುಖ್ಯ ಗುರಿ.

ಹೊಸ ನಿಯಮಗಳ ಮುಖ್ಯಾಂಶಗಳು ಹೀಗಿವೆ (highlights):

ಬಾಡಿಗೆ ಒಪ್ಪಂದ ನೋಂದಣಿ ಕಡ್ಡಾಯ:
ಒಪ್ಪಂದ ಮಾಡಿದ ನಂತರ 2 ತಿಂಗಳೊಳಗೆ ನೋಂದಣಿ ಮಾಡಿಸಲೇಬೇಕು. ತಪ್ಪಿಸಿದರೆ ₹5,000 ದಂಡ ವಿಧಿಸುವ ಸಾಧ್ಯತೆ.

ಆನ್‌ಲೈನ್ ನೋಂದಣಿ ವ್ಯವಸ್ಥೆ :
ಬಾಡಿಗೆ ಒಪ್ಪಂದವನ್ನು ರಾಜ್ಯ ಸರ್ಕಾರದ ಆಸ್ತಿ ನೋಂದಣಿ ಪೋರ್ಟಲ್‌ನಲ್ಲಿ ಅಥವಾ ಸಮೀಪದ Sub-Registrar ಕಚೇರಿಯಲ್ಲಿ ನೋಂದಾಯಿಸಬಹುದು.

ಬಾಡಿಗೆದಾರರಿಗೆ ಸಿಗುವ ಪ್ರಮುಖ ಲಾಭಗಳು ಯಾವುವು?:

ಡೆಪಾಸಿಟ್ ಮಿತಿ
ವಾಸದ ಮನೆಗಳಿಗೆ: ಗರಿಷ್ಠ 2 ತಿಂಗಳ ಬಾಡಿಗೆ
ವಾಣಿಜ್ಯ ಜಾಗಗಳಿಗೆ: ಗರಿಷ್ಠ 6 ತಿಂಗಳ ಬಾಡಿಗೆ
ಬಾಡಿಗೆ ಏರಿಕೆಯ ನಿಯಂತ್ರಣ ಮಾಲೀಕರು ಮುಂಚಿತವಾಗಿ  ಬರೆಹದ ನೋಟಿಸ್ ನೀಡಿದ ಬಳಿಕವೇ ಬಾಡಿಗೆ ಹೆಚ್ಚಿಸಬಹುದು.
ರಾತ್ರೋರಾತ್ರಿ ಮನೆ ಖಾಲಿ ಮಾಡಿಸುವಂತಿಲ್ಲ ಕಾನೂನು ಪ್ರಕ್ರಿಯೆ ಮತ್ತು ಸರಿಯಾದ ಕಾರಣವಿಲ್ಲದೆ ಯಾರನ್ನೂ ತೆರವುಗೊಳಿಸಲಾಗದು.
ತ್ವರಿತ ಕಾನೂನು ಪರಿಹಾರ ವಿವಾದಗಳಿಗಾಗಿ ವಿಶೇಷ ಬಾಡಿಗೆ ನ್ಯಾಯಾಲಯಗಳು, 60 ದಿನಗಳಲ್ಲಿ ತೀರ್ಪು ನೀಡಬೇಕು.
11 ತಿಂಗಳು ಪೂರ್ಣವಾದರೆ ಹೊಸ ಒಪ್ಪಂದ ಅಗತ್ಯ.

ಮನೆ ಮಾಲೀಕರಿಗೆ ಸಿಗುವ ಸೌಲಭ್ಯಗಳು ಯಾವುವು?:

TDS ವಿನಾಯಿತಿ ಮಿತಿ ಹೆಚ್ಚಳ:
ಹಿಂದಿನ ₹2.4 ಲಕ್ಷ ಮಿತಿಯನ್ನು ಈಗ ₹6 ಲಕ್ಷಕ್ಕೆ ಏರಿಸಲಾಗಿದೆ.
ಬಾಕಿ ಬಾಡಿಗೆಗೆ ತ್ವರಿತ ಕ್ರಮ ಬಾಡಿಗೆದಾರರು 3 ತಿಂಗಳು ಬಾಡಿಗೆ ಕೊಡದಿದ್ದರೆ, ನ್ಯಾಯಾಲಯದ ಮೂಲಕ ತಕ್ಷಣ ಕ್ರಮ.
ಸರ್ಕಾರಿ ಸೌಲಭ್ಯಗಳಲ್ಲಿ ಆದ್ಯತೆ ನೋಂದಾಯಿತ ಬಾಡಿಗೆ ಒಪ್ಪಂದ ಹೊಂದಿರುವ ಮಾಲೀಕರು ಕೆಲವು ಯೋಜನೆಗಳಲ್ಲಿ ಆದ್ಯತೆ ಪಡೆಯಬಹುದು.

ಒಪ್ಪಂದ ನೋಂದಣಿ ವಿಧಾನ (Step-by-Step):

ಮೊದಲಿಗೆ ಆಸ್ತಿ ನೋಂದಣಿ ಪೋರ್ಟಲ್‌ಗೆ ಭೇಟಿ.
ಮಾಲೀಕರು ಮತ್ತು ಬಾಡಿಗೆದಾರರ ದಾಖಲೆ ಅಪ್‌ಲೋಡ್ ಮಾಡಿ
ಬಾಡಿಗೆ ಮೊತ್ತ, ಅವಧಿ ಮೊದಲಾದ ವಿವರಗಳ ನಮೂದು ಮಾಡಿ
ಡಿಜಿಟಲ್ ಸಹಿ ಮಾಡಿ ಸಲ್ಲಿಕೆ ಬಟನ್ ಕ್ಲಿಕ್ ಮಾಡಿ

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಚರ್ಚೆ :

ಈ ನಿಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಕೆಲವರು ಇದನ್ನು ಬಾಡಿಗೆದಾರರಿಗೆ ದೊಡ್ಡ ಗೆಲುವು ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಮಾಲೀಕರ ಹಕ್ಕುಗಳಿಗೆ ಹೊಡೆತ ಎಂದು ಟೀಕಿಸುತ್ತಿದ್ದಾರೆ.
ಮತ್ತೊಂದು ಗುಂಪು ಇದನ್ನು AI ಜನರೇಟ್ ಮಾಡಿರುವ ಸುಳ್ಳು ಸುದ್ದಿ ಎಂದು ಅನುಮಾನಿಸುತ್ತಿದ್ದಾರೆ. ಆದ್ದರಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹಾಗೂ ಮನೆ ನೀಡುವವರು, ಹೊಸ ನಿಯಮಗಳನ್ನು ತಿಳಿದುಕೊಳ್ಳಲೇಬೇಕು.

ಒಟ್ಟಾರೆಯಾಗಿ, ಹೊಸ ನಿಯಮಗಳು ಜಾರಿಗೆ ಬಂದ ನಂತರ ಬಾಡಿಗೆ ವಲಯದಲ್ಲಿ ಕಾನೂನು ಸ್ಪಷ್ಟತೆ, ಪಾರದರ್ಶಕತೆ ಮತ್ತು ಪರಸ್ಪರ ಜವಾಬ್ದಾರಿ ಹೆಚ್ಚುವ ನಿರೀಕ್ಷೆ ಇದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories