how to know your phone hacked

Tech Tips – ಮೊಬೈಲ್ ಹ್ಯಾಕ್ ಆಗಿರೋದನ್ನು ಹೀಗೆ ಕಂಡು ಹಿಡಿಯಿರಿ.! ಇಲ್ಲಿದೆ ಬೆಸ್ಟ್ ಟ್ರಿಕ್ಸ್

Categories:
WhatsApp Group Telegram Group

ಎಲ್ಲರಿಗೂ ನಮಸ್ಕಾರ. ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ(Technology) ತುಂಬಾನೇ ಮುಂದುವರಿಯುತ್ತಾ ಇದೆ. ಎಲ್ಲಿ ನೋಡಿದರೂ ಡಿಜಿಟಲಿಕರನಾ ಆವರಿಸಿಕೊಂಡಿದೆ. ಈ ಡಿಜಿಟಲ್ ಯುಗದಲ್ಲಿ, ನಮ್ಮ ಸ್ಮಾರ್ಟ್‌ಫೋನ್‌ಗಳು(smart phones) ಬೇರೆ ರೀತಿಯಲ್ಲಿಯೇ ಜನರ ಜೀವನವನ್ನು ಬದಲಾಯಿಸಿ ಬಿಡುತ್ತಾ ಇದೆ ಎನ್ನುವುದು ನಮಗೆ ಎಲ್ಲರಿಗೂ ತಿಳಿದಿರುವ ಸಂಗತಿ ಆಗಿಬಿಟ್ಟಿದೆ. ನಮ್ಮ ಮೊಬೈಲ್ ಫೋನ್ ಗಳು ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತವೆ. ಸ್ಮಾರ್ಟ್‌ಫೋನ್‌ಗಳು ನಮ್ಮ ಅನುಕೂಲತೆಗೆ ಮತ್ತು ಸಂಪರ್ಕವನ್ನು ನೀಡುತ್ತವೆ. ಎಷ್ಟೇ ಸುರಕ್ಷಿತವಾಗಿ ನಮ್ಮ ಸ್ಮಾರ್ಟ್ ಫೋನ್ ಗಳನ್ನ ಇಟ್ಟರು ಕೂಡಾ ಇವುಗಳು ಹ್ಯಾಕರ್‌ಗಳಿಗೆ(Hacker’s) ಪ್ರಮುಖ ಗುರಿಯಾಗಿ ಕಂಡು ಬರುತ್ತಿದೆ. ನಿಮ್ಮ ಡೇಟಾ, ಗೌಪ್ಯತೆ ಮತ್ತು ವೈಯಕ್ತಿಕ ಭದ್ರತೆಯನ್ನು ರಕ್ಷಿಸಿದರು ಕೂಡಾ ನಮ್ಮ ಫೋನ್‌ಗೆ ಯಾವುದಾದರೂ ತೊಂದರೆ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬ ಅನುಮಾನ ಇದ್ದರೆ ಹೀಗೆ ಮಾಡಿ :

ಇವತ್ತಿನ ವರದಿಯಲ್ಲಿ, ಹ್ಯಾಕ್ ಮಾಡಿದ ಫೋನ್‌ ಗಳನ್ನು ಹೇಗೆ ಗುರುತಿಸಬಹುದು ಮತ್ತು ಒಂದುವೇಳೆ ನಿಮ್ಮ ಫೋನ್‌ ಹ್ಯಾಕ್ ಆಗಿರಬಹುದು ಅಥವಾ ಆಗಿದೆ ಎಂದು ನೀವು ಅನುಮಾನಿಸಿದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಇಲ್ಲವೇ ಎಂದು ತಿಳಿಯುವುದಕ್ಕೆ ಈ ಕೆಳಗೆ ನೀಡಿರುವ ಮಾಹಿತಿಯನ್ನು ತಿಳಿದುಕೊಳ್ಳಿ:

ನಿಮ್ಮ ಫೋನ್ ಹ್ಯಾಕ್ ಆಗಿದ್ದಾರೆ ಸಾಮಾನ್ಯವಾಗಿ ನಿಮ್ಮ ಸ್ಮಾರ್ಟ್ ಫೋನ್ ಬಳಕೆಯಲ್ಲಿ ಏರು ಪೇರು ಆಗಲು ಶುರುವಾಗುತ್ತದೆ, ಆಗ ಈ ಕೆಳಗೆ ನೀಡಿರುವ ಕೆಲವು ಮಾಹಿತಿ ಪ್ರಕಾರ ಬದಲಾವಣೆಯನ್ನು ಕಾಣುತ್ತೀರಿ. ನಿಮ್ಮ ಫೋನ್‌ ಅನ್ನು ಹ್ಯಾಕ್ ಮಾಡಿದ್ದಾರೆ ಎಂದು ನೀವು ಆರಾಮವಾಗಿ ಗಮನಿಸಬಹುದು, ಹೇಗೆಂದರೆ
ನೀವು ಡೌನ್‌ಲೋಡ್ ಮಾಡದೆ ಇರುವ ಅಪ್ಲಿಕೇಶನ್‌ಗಳು ಕಂಡು ಬರುತ್ತವೆ, ನೀವು ಕಳುಹಿಸದೆ ಇರದ ಮೆಸ್ಸೇಜ್ ಗಳು, ನೀವು ಏನು ಖರೀದಿ ಮಾಡದೆ ಇದ್ದರೂ ಖರೀದಿ ಮಾಡಿರುವಿರಿ ಎಂದು ತೋರಿಸುತ್ತದೆ. ಮತ್ತು ಅನುಮಾನಾಸ್ಪದ ಫೋನ್ ಕರೆಗಳು ಬರುತ್ತವೆ.

ನಿಮ್ಮ ಸ್ಮಾರ್ಟ್ ಫೋನ್ ಅಲ್ಲಿ ವಿಚಿತ್ರ ನಡವಳಿಕೆ ಕಾಣಲು ಶುರುವಾಗಿರುವುದನ್ನು ನೀವು ಕಾಣಬಹುದು, ಹೌದು ಅಪ್ಲಿಕೇಶನ್‌ಗಳು ತಾವು ಬಳಕೆ ಮಾಡಿದಂತೆ, ಮಾಡಬೇಕಾದ ರೀತಿಯಲ್ಲಿ ರನ್ ಆಗುವುದಿಲ್ಲ, ಮತ್ತು ನಾವು ಡೌನ್ಲೋಡ್ ಮಾಡದೆ ಇರುವ ಆ್ಯಪ್ ಗಳು ಕಾಣುತ್ತವೆ. ಅನಿರೀಕ್ಷಿತವಾಗಿ ಆನ್ ಮತ್ತು ಆಫ್ ಅಥವಾ ಕ್ರ್ಯಾಶ್ ಆಗುತ್ತವೆ ಮತ್ತು ಲೋಡ್ ಆಗಲು ವಿಫಲವಾಗುವುದನ್ನು ಕಂಡರೆ ನಾವು ತಿಳಿದು ಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ – Lava Mobile – ಬರೀ 9,999/- ಕ್ಕೆ ಲಾವಾದ ಹೊಸ 5G ಮೊಬೈಲ್, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಮತ್ತು ನಿಮ್ಮ ಸ್ಮಾರ್ಟ್ ಫೋನ್ ಅಸಾಧಾರಣವಾಗಿ ನಿಧಾನವಾಗಿ ರನ್ ಆಗುತ್ತಿರುತ್ತದೆ, ಬೇಗ ಬೇಗ ವರ್ಕ್ ಆಗುತ್ತಿರುವದಿಲ್ಲ ಮತ್ತು ಅದರ ಜೊತೆಗೆ, ಫೋನ್ ಹೆಚ್ಚು ಸಂಪನ್ಮೂಲಗಳು ಮತ್ತು ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ ಮತ್ತು ಸಾಮಾನ್ಯಕ್ಕಿಂತ ಬಿಸಿಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಮಾಲ್ವೇರ್ ಅದರ ಶಕ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ತಿಳಿಯಬಹುದು.

ನಿಮ್ಮ ಪರದೆಯ ಮೇಲೆ ಸಾಕಷ್ಟು ಪಾಪ್-ಅಪ್‌ಗಳು ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿದರೆ, ನೀವು ಬಹುಶಃ ಸ್ಪೈವೇರ್ ಅಥವಾ ಮಾಲ್‌ವೇರ್ ಅನ್ನು ಹೊಂದಿರಬಹುದು ಎಂದು ಗುರುತಿಸಲು ಪಡಬೇಕಾಗುತ್ತದೆ.

ನಿಮ್ಮ ಫೋನ್ ನಲ್ಲಿಯೂ ಕೂಡ ಹೀಗೆ ಆಗುತ್ತಿದೆಯೇ?:

ಬಳಕೆದಾರರು ತಮ್ಮ ಫೋನ್ಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಇತರ ಅನೇಕ ಖಾತೆಗಳನ್ನು ಹೊಂದಿರುತ್ತಾರೆ. ನಿಮ್ಮ ಖಾತೆಯ ಮೂಲಕ ನೀವು ಮಾಡಿದ ಪೋಸ್ಟ್ ಗಳನ್ನು ಹೊರತುಪಡಿಸಿ, ನಿಮಗೆ ಗೊತ್ತಿಲ್ಲದ ಪೋಸ್ಟ್ ಗಳನ್ನು ನೀವು ನೋಡಿದರೆ ಜಾಗರೂಕರಾಗಬೇಕಾಗುತ್ತದೆ. ಇದು ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂಬುದರ ಸಂಕೇತವಾಗಿರಬಹುದು. ನಿಮ್ಮ ಫೋನ್ ನಿಂದ ಇಮೇಲ್ ಗಳನ್ನು ಕಳುಹಿಸಲಾಗುತ್ತಿದೆ ಮತ್ತು ನೀವು ಅದನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ಹ್ಯಾಕರ್ ಗಳು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ನಿಮ್ಮ ಗ್ಯಾಲರಿಯಲ್ಲಿ ನೀವು ಸೆರೆಹಿಡಿಯದ ಫೋಟೋಗಳು ಮತ್ತು ವೀಡಿಯೊಗಳನ್ನು ನೀವು ಕಂಡುಕೊಂಡರೆ, ಎಚ್ಚರಿಕೆಯಿಂದಿರಿ, ಏಕೆಂದರೆ ಅದು ನಿಮ್ಮ ಕ್ಯಾಮರಾವನ್ನು ಹ್ಯಾಕ್ ಮಾಡಿರುವ ಸಾಧ್ಯತೆಯನ್ನು ನಾವು ಕಾಣಬಹುದು.ಹೆಚ್ಚುವರಿಯಾಗಿ, ನಿಮ್ಮ ಫೋನ್‌ನ ಫ್ಲಾಶ್‌ನ ಹಠಾತ್ ಸಕ್ರಿಯಗೊಳಿಸುವಿಕೆಯು ರಿಮೋಟ್ ಕಂಟ್ರೋಲ್ ಅನ್ನು ಸೂಚಿಸುತ್ತದೆ.

ಇದನ್ನೂ ಓದಿ –  JEE Mains Exam – ಜೆಇಇ ಮೇನ್ಸ್‌ 2024 ಪರೀಕ್ಷೆಗೆ ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ.!

ನಿಮ್ಮ ಫೋನ್ ಹ್ಯಾಕ್ ಆಗಿದೆ ಅನಿಸಿದರೆ ಈ ಕೆಳಗಿನಂತೆ ಮಾಡಿ :

ಮೊದಲನೆಯದಾಗಿ, ಇಂಟರ್ನೆಟ್‌ನಿಂದ ಸಂಪರ್ಕ ಕಡಿತಗೊಳಿಸಿ. ನಿಮ್ಮ ಫೋನ್‌ನ ವೈ-ಫೈ ಮತ್ತು ಮೊಬೈಲ್ ಡೇಟಾವನ್ನು ಆಫ್ ಮಾಡಿ.

ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಯಾವುದೇ ಬೇರೆ ಅಪ್ಲಿಕೇಶನ್‌ಗಳಿಗಾಗಿ ನಿಮ್ಮ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿ.

ಪೂರ್ಣ ಸ್ಕ್ಯಾನ್ ಅನ್ನು ರನ್ ಮಾಡಿ.

ಸಾಫ್ಟ್‌ವೇರ್ ಅನ್ನು ನವೀಕರಿಸಿ.

ಭದ್ರತೆಯ ಹೆಚ್ಚುವರಿ ಪದರಕ್ಕಾಗಿ ನಿಮ್ಮ ಎಲ್ಲಾ ಪ್ರಮುಖ ಖಾತೆಗಳಲ್ಲಿ 2FA ಅನ್ನು ಸಕ್ರಿಯಗೊಳಿಸಿ.

ನಿಮ್ಮ ಅಪ್ಲಿಕೇಶನ್‌ಗಳಿಗೆ ನೀಡಲಾದ ಅನುಮತಿಗಳನ್ನು ಪರಿಶೀಲಿಸಿ ಮತ್ತು ಅನಗತ್ಯ ಪ್ರವೇಶವನ್ನು ನಿಷ್ಕ್ರಿಯಗೊಳಿಸಿ.

ನಿಮ್ಮ ಬ್ಯಾಂಕ್ ಖಾತೆಗಳು, ಇಮೇಲ್ ಮತ್ತು ಇತರ ಸೂಕ್ಷ್ಮ ಖಾತೆಗಳ ಮೇಲೆ ನಿಗಾ ಇರಿಸಿ.

ನಿಮ್ಮ ಡೇಟಾವನ್ನು ರಕ್ಷಿಸಲು ನಿಮ್ಮ ಫೋನ್ ಅನ್ನು ನಿಯಮಿತವಾಗಿ ಬ್ಯಾಕಪ್ ಮಾಡಿ.

ನೀವು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಅಥವಾ ನಿಮ್ಮನ್ನು ಗುರಿಯಾಗಿಸಿಕೊಂಡಿರುವಿರಿ ಎಂದು ನಂಬಲು ಬಲವಾದ ಕಾರಣಗಳನ್ನು ಹೊಂದಿದ್ದರೆ, ಸೈಬರ್ ಭದ್ರತೆ ತಜ್ಞರನ್ನು ಸಂಪರ್ಕಿಸಬಹುದು.

ಈಗಿನ ದಿನಮಾನದಲ್ಲಿ ಎಷ್ಟು ಸುರಕ್ಷಿತವಾಗಿದ್ದರೂ ಕಠಿಣವಾಗಿರುತ್ತದೆ, ಆದರಿಂದ ಜಾಗರೂಕರಾಗಿರಿ ಮತ್ತು ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಹ್ಯಾಕಿಂಗ್‌ಗೆ ಬಲಿಯಾಗುವ ಅಪಾಯವನ್ನು ನೀವು ಕಡಿಮೆ ಮಾಡಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Popular Categories