ಸಾಮಾನ್ಯವಾಗಿ ನವೆಂಬರ್ ಅಂತ್ಯದ ಬಳಿಕವೇ ರಾಜ್ಯದಲ್ಲಿ ಚಳಿಗಾಲದ ವಾತಾವರಣ ಶುರುವಾಗುತ್ತದೆ. ಆದರೆ ಈ ಬಾರಿ ಹವಾಮಾನ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ವಾಡಿಕೆಗಿಂತಲೂ 15–20 ದಿನ ಮುಂಚಿತವಾಗಿಯೇ ಕರ್ನಾಟಕದಾದ್ಯಂತ ಚಳಿಯ ಅಬ್ಬರ ತೀವ್ರಗೊಂಡಿದ್ದು ಜನತೆ ಈಗಾಗಲೇ ಚಳಿಗಾಲದ ತಂಪನ್ನು ಅನುಭವಿಸುತ್ತಿದ್ದಾರೆ. ಮುಂಗಾರು ಹಾಗೂ ಹಿಂಗಾರ ಎರಡೂ ವರ್ಷಧಾರೆಯು ಹೆಚ್ಚಾಗಿ ದಾಖಲಾಗಿರುವುದು, ಪದೇ ಪದೇ ಬರುತ್ತಿರುವ ಚಂಡಮಾರುತಗಳ ಪರಿಣಾಮ ಮತ್ತು ಭೂಮಿಯ ಮೇಲ್ಮೈ ತೇವಾಂಶ ಹೆಚ್ಚಾದ ಕಾರಣ ರಾಜ್ಯದಲ್ಲಿ ಅಸ್ವಭಾವಿಕ ವಾತಾವರಣ ಉಂಟಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಇಳಿದಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಹವಾಮಾನ ಇಲಾಖೆಯ ಹೆಚ್ಚು ಗಮನಹರಿಸುತ್ತಿದೆ. ಮುಂದಿನ 48 ಗಂಟೆಗಳ ಕಾಲ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ತೀವ್ರ ತಂಡಿಯ ಎಚ್ಚರಿಕೆ ನೀಡಲಾಗಿದೆ. ಹಾಗಿದ್ದರೆ ಯಾವ ಯಾವ ಜಿಲ್ಲೆಗಳಲ್ಲಿ ತಾಪಮಾನ ಎಷ್ಟುಕ್ಕೆ ಇಳಿದಿದೆ? ಇದರ ಕಾರಣಗಳೇನು? ಮುಂದಿನ ದಿನಗಳಲ್ಲಿ ಚಳಿ ಹೇಗಿರಲಿದೆ? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಉತ್ತರ ಕರ್ನಾಟಕದಲ್ಲಿ ತೀವ್ರ ಚಳಿ, ಬೀದರ್ ನಲ್ಲಿ ಅತಿ ಕನಿಷ್ಠ ತಾಪಮಾನ:
ಹವಾಮಾನ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ಬೀದರ್ ಜಿಲ್ಲೆಯಲ್ಲಿ 10°C ಆಗಿ ದಾಖಲಾಗಿದೆ. ಅದರ ನಂತರ ಉಳಿದ ಜಿಲ್ಲೆಗಳ ಸ್ಥಿತಿ ಹೀಗಿದೆ
ವಿಜಯಪುರ – 11.6°C
ಧಾರವಾಡ – 11.8°C
ಬೆಳಗಾವಿ – 13.8°C
ಗದಗ – 14.4°C
ಗಂಗಾವತಿ – 15°C
ಬೆಳಗಿನ ಜಾವ ಈ ಭಾಗಗಳಲ್ಲಿ ಗಟ್ಟಿ ಮಂಜು ಆವರಿಸಿಕೊಂಡಿದ್ದು, ವಾಹನ ಸವಾರರಿಗೆ ಸಂಚಾರದಲ್ಲಿ ತೊಂದರೆ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಬರಲು ಹಿಂಜರಿಯುವ ಮಟ್ಟಿಗೆ ತಂಡಿ ಹೆಚ್ಚಿದೆ.
ಮುಂದಿನ ಒಂದು ವಾರ ರಾಜ್ಯದಲ್ಲಿ ಚಳಿ ಮುಂದುವರಿಕೆ:
ಮುಂದಿನ 48 ಗಂಟೆಗಳ ಕಾಲ ವಿಶೇಷವಾಗಿ ಬೀದರ್, ವಿಜಯಪುರ, ಕಲಬುರ್ಗಿ, ಧಾರವಾಡ, ಬೆಳಗಾವಿ ಭಾಗಗಳಲ್ಲಿ ತಾಪಮಾನ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಒಂದು ವಾರ ರಾಜ್ಯದಲ್ಲಿ ಇದೇ ರೀತಿಯ ತಂಪಾದ ವಾತಾವರಣ ಮುಂದುವರೆಯಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಬದಲಾವಣೆ ಕಂಡುಬರುವುದಿಲ್ಲ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ:
ರಾಜಧಾನಿ ಬೆಂಗಳೂರಿನಲ್ಲೂ ಚಳಿ ಅನುಭವ ಹೆಚ್ಚಾಗಿದೆ.
ಮುಂದಿನ 3 ದಿನಗಳ ಅವಧಿಯಲ್ಲಿ,
ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ
ದಿನವಿಡೀ ಭಾಗಶಃ ಮೋಡಕವಿದ ಆಕಾಶ
ಗರಿಷ್ಠ ತಾಪಮಾನ : ಸುಮಾರು 28°C
ಕನಿಷ್ಠ ತಾಪಮಾನ : 17°C
ಡಿಸೆಂಬರ್–ಜನವರಿಯಲ್ಲಿ ಇನ್ನಷ್ಟು ತೀವ್ರ ಚಳಿ:
ಹವಾಮಾನ ತಜ್ಞರ ಪ್ರಕಾರ ಈ ವರ್ಷದ ಚಳಿಗಾಲ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಜೋರಾಗಿ ಕಾಣಿಸಿಕೊಳ್ಳಲಿದೆ.
2022 ಮತ್ತು 2023ರಂತೆ ಈಗಲೂ ದಾಖಲೆ ಮಟ್ಟದ ಚಳಿ ಕಾಣುವ ಸಾಧ್ಯತೆ ಇದೆ.
ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗಿ ಇಳಿಯಬಹುದು.
ಈ ಬಾರಿ ಚಳಿ ಹೆಚ್ಚಾಗಲು ಕಾರಣವೇನು?:
ಮುಂಗಾರು ಮಳೆಯ ಹೆಚ್ಚಾದ ಪ್ರಮಾಣ
ಹಿಂಗಾರದಲ್ಲೂ ಹೆಚ್ಚಿದ ಮಳೆ
ಪದೇ ಪದೇ ಚಂಡಮಾರುತಗಳ ರಚನೆ
ತೇವಾಂಶದ ಹೆಚ್ಚಿದ ಕಾರಣ ರಾತ್ರಿಯ ತಾಪಮಾನ ವೇಗವಾಗಿ ಇಳಿಕೆ.
ಯಾವ ಜಿಲ್ಲೆಗಳಲ್ಲಿ ಹೆಚ್ಚು ಚಳಿ ಇರಲಿದೆ:
ಈ ಬಾರಿ ಕರ್ನಾಟಕದಲ್ಲಿ ತಂಡಿಯ ಆರ್ಭಟ ಪರಮಾವಧಿಗೆ ತಲುಪುವ ಜಿಲ್ಲೆಗಳ ಪಟ್ಟಿ ಹೀಗಿದೆ:
ಕಲ್ಯಾಣ ಕರ್ನಾಟಕ
ಬೀದರ್
ವಿಜಯಪುರ
ಕಲಬುರ್ಗಿ
ರಾಯಚೂರು
ಬಾಗಲಕೋಟೆ
ಕೊಪ್ಪಳ
ಮಧ್ಯ ಕರ್ನಾಟಕ
ಹಾವೇರಿ
ದಾವಣಗೇರಿ
ಶಿವಮೊಗ್ಗ
ದಕ್ಷಿಣ ಕರ್ನಾಟಕ
ಮೈಸೂರು
ಮಂಡ್ಯ
ಹಾಸನ
ತಜ್ಞರ ಪ್ರಕಾರ, ಈ ಬಾರಿ ಮಧ್ಯ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬೆಂಗಳೂರಿಗಿಂತಲೂ ಹೆಚ್ಚು ಚಳಿ ಇರಬಹುದು.
ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಕ್ರಮಗಳು:
ವೃದ್ಧರು ಮತ್ತು ಮಕ್ಕಳಿಗೆ ಬೆಚ್ಚಗಿನ ಉಡುಪು ಕಡ್ಡಾಯ.
ಬೆಳಗಿನ ಮಂಜು ಇರುವ ಸಮಯದಲ್ಲಿ ವಾಹನ ಸವಾರರು ಜಾಗ್ರತೆ.
ಶೀತದ ಹಾವಳಿಯಿಂದ ತಪ್ಪಿಸಿಕೊಳ್ಳಲು ಬಿಸಿ ಪಾನೀಯಗಳು, ಸೂಪ್, ಬೆಚ್ಚಗಿನ ನೀರು ಸೇವನೆ.
ಅನಗತ್ಯವಾಗಿ ರಾತ್ರಿ ಹೊತ್ತು ಹೊರಗೆ ಹೋಗುವುದನ್ನು ತಪ್ಪಿಸುವುದು.
ಒಟ್ಟಾರೆಯಾಗಿ, ಮುಂದಿನ ಒಂದು ವಾರ ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ಆರ್ಭಟ ತೀವ್ರವಾಗಿರಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜನರು ಹೆಚ್ಚುವರಿ ಜಾಗ್ರತೆ ವಹಿಸಲು ಹವಾಮಾನ ಇಲಾಖೆ ಸೂಚನೆ ನೀಡಿದೆ
Nikhil.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




