ಇಂದಿನ ದಿನಗಳಲ್ಲಿ ಭೂಮಿ ಖರೀದಿ ಎನ್ನುವುದು ಸಾಮಾನ್ಯ ಕುಟುಂಬಕ್ಕೆ ಕನಸಾಗಿಯೇ ಉಳಿದುಕೊಂಡಿದೆ. ನಗರ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿರುವುದರಿಂದ ಭೂಮಿ ಮತ್ತು ಸೈಟುಗಳ ಬೆಲೆಗಳು ಚಿನ್ನದ ದರದಂತೆ ಏರಿಕೆಯಾಗುತ್ತಿವೆ. ಖಾಸಗಿ ಅಭಿವೃದ್ಧಿಪರರು ನೀಡುವ ಪ್ರೀಮಿಯಂ ಬೆಲೆಗಳನ್ನು ಭರಿಸುವುದು ಬಹುತೇಕ ಜನರಿಗೆ ಸಾಧ್ಯವಾಗತ್ತಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.….
ಈ ಹಿನ್ನೆಲೆಯಲ್ಲೇ ಕರ್ನಾಟಕ ಗೃಹ ಮಂಡಳಿ (KHB) ಹಲವು ಜಿಲ್ಲೆಗಳಲ್ಲಿ ಪಾರದರ್ಶಕ ಇ–ಹರಾಜು ವ್ಯವಸ್ಥೆಯ ಮೂಲಕ ಸೈಟುಗಳನ್ನು ಮಾರಾಟಕ್ಕೆ ಹಾಕಿದ್ದು, ಸಾಮಾನ್ಯ ನಾಗರಿಕರಿಗೂ ಭದ್ರ ಮತ್ತು ಕಾನೂನುಬದ್ಧವಾಗಿ ಭೂಮಿ ಪಡೆಯುವ ಅವಕಾಶವನ್ನು ಒದಗಿಸಿದೆ.
ಇ-ಹರಾಜ, ಎಲ್ಲರಿಗೂ ಮುಕ್ತ ಅವಕಾಶ:
ಕರ್ನಾಟಕ ಗೃಹ ಮಂಡಳಿ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ವಾಸಯೋಗ್ಯ ಮತ್ತು ವಾಣಿಜ್ಯ ನಿವೇಶನಗಳನ್ನು ಇದೀಗ ಇ–ಹರಾಜು (e-Auction) ಮೂಲಕ ಮಾರಾಟ ಮಾಡುತ್ತಿದೆ.
ಈ ಹರಾಜಿನಲ್ಲಿ, ಮೂಲೆಯ ನಿವೇಶನಗಳು (Corner sites), ಸಾಮಾನ್ಯ ಮಧ್ಯಂತರ ಸೈಟುಗಳು, ಮನೆ ಅಳವಡಿಸಲು ಸೂಕ್ತವಾದ ವಾಸಯೋಗ್ಯ ಸೈಟುಗಳು, ವಾಣಿಜ್ಯ ಬಳಕೆಗೆ ಅನುಕೂಲಕರವಾದ ಪ್ಲಾಟುಗಳು ಎಲ್ಲವೂ ಸೇರಿವೆ.
ನವೆಂಬರ್ 17 ಬೆಳಗ್ಗೆ 11 ಗಂಟೆಯಿಂದ ಇ ಹರಾಜು ನೋಂದಣಿ ಆರಂಭವಾಗಿದ್ದು,ನವೆಂಬರ್ 29ರ ಮಧ್ಯಾಹ್ನ 12 ಗಂಟೆಯವರೆಗೆ ಯಾರೇ ಆಗಲೀ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಹರಾಜಿನಲ್ಲಿ ಹೇಗೆ ಭಾಗವಹಿಸಬಹುದು?:
ಗೃಹ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು,
kppp.karnataka.gov.in
(ಸೈಟ್‌ನಲ್ಲಿ ಲಾಗಿನ್ ಆಗಿ e-Auction ವಿಭಾಗಕ್ಕೆ ಹೋಗಬೇಕು)
ನೋಂದಣಿ ಬಳಿಕ ನಿರ್ದಿಷ್ಟ ಸೈಟುಗಳ ವಿವರ, ಎಸ್ಟಿಮೇಟ್ ಬೆಲೆ, ಹರಾಜು ದಿನ-ಸಮಯ ಮತ್ತು ನಿಯಮಗಳು ಎಲ್ಲವೂ ಸ್ಪಷ್ಟವಾಗಿ ಲಭ್ಯ.
ಯಾವ ಯಾವ ಜಿಲ್ಲೆಗಳಲ್ಲಿ ಸೈಟ್ ಹರಾಜು?:
ಗೃಹ ಮಂಡಳಿ ರಾಜ್ಯದ ವಿವಿಧ ನಗರಗಳಲ್ಲಿ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿನ ಸೈಟುಗಳನ್ನು ಹರಾಜಿಗೆ ಇಡಲಾಗಿದೆ.
ಬೆಂಗಳೂರು
ಸೂರ್ಯ ನಗರ ಬಡಾವಣೆ
ತುಮಕೂರು ಜಿಲ್ಲೆ
ಗೂಳೂರು ಬಡಾವಣೆ
ಪಾವಗಡ ಬಡಾವಣೆ (ಮೂಲೆ ನಿವೇಶನ)
ಮಂಗಳೂರು
ಅಮ್ಮಾಡಿ ಬಟ್ವಾ ಬಡಾವಣೆ
ಕೊಪ್ಪಳ
ಡಿಸಿ ಆಫೀಸ್ ಹಿಂಭಾಗದ ಬಡಾವಣೆ
ಕಲಬುರ್ಗಿ
ಕಾಳಗನೂರು–ಕುಸನೂರು ಬಡಾವಣೆ
ಧಾರವಾಡ
ಕುಂದಗೋಳ ಬಡಾವಣೆ
ದಾವಣಗೆರೆ
ಹರಿಹರ – ಅಮರಾವತಿ ಬಡಾವಣೆ
ಚಿತ್ರದುರ್ಗ
ಕೆಳಗೋಟೆ ಬಡಾವಣೆ
ಹಿರಿಯೂರು – ಯರದಕಟ್ಟೆ ಬಡಾವಣೆ (ಮೂಲೆ ನಿವೇಶನ)
ಮದಕರಿಪುರ ಬಡಾವಣೆಯ ಮೂಲೆ ನಿವೇಶನಗಳು
ಪ್ರತಿ ಬಡಾವಣೆಯಲ್ಲಿಯೂ ಬೇರೆ ಬೇರೆ ಗಾತ್ರದ ಸೈಟುಗಳು ಲಭ್ಯವಿದ್ದು, ಬೆಲೆಗಳು ಹರಾಜಿನ ಅವಧಿಯಲ್ಲಿ ಸ್ಪರ್ಧಾತ್ಮಕವಾಗಿ ಏರಿಳಿತವಾಗುತ್ತವೆ.
ಸಾಮಾನ್ಯರಿಗೆ ಏಕೆ ಇದು ಉತ್ತಮ ಅವಕಾಶ?:
ಸರ್ಕಾರದ ಸಂಸ್ಥೆಯ ಮೂಲಕ ಹರಾಜು ಆಗುವುದರಿಂದ ಕಾನೂನು ಸಮಸ್ಯೆಗಳಿರುವುದಿಲ್ಲ.
ಪಾರದರ್ಶಕ ಇ–ಹರಾಜು ಮಾಡುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆ.
ಬೆಲೆ ಹೆಚ್ಚಾದರೂ ಮಾರುಕಟ್ಟೆಗಿಂತ ಬಹು ಕಡೆ ಕಡಿಮೆ ದರದಲ್ಲಿ ಸೈಟ್ ಸಿಗುವ ಸಾಧ್ಯತೆ.
ವಾಸಯೋಗ್ಯ ಹಾಗೂ ಅಭಿವೃದ್ಧಿಪಡಿಸಿದ ಬಡಾವಣೆಗಳು ಸಿಗುತ್ತವೆ.
ಒಟ್ಟಾರೆಯಾಗಿ, ಮಾರುಕಟ್ಟೆಯಲ್ಲಿ ನಿತ್ಯ ಏರಿಕೆಯಾಗುತ್ತಿರುವ ಬೆಲೆಯನ್ನು ನೋಡಿದರೆ, ಸರಕಾರದ ಹರಾಜು ಮೂಲಕ ಸೈಟ್ ತೆಗೆದುಕೊಳ್ಳುವುದು ಸಾಮಾನ್ಯ ಜನರಿಗೆ ಹೆಚ್ಚು ಸುರಕ್ಷಿತ ಮತ್ತು ಲಾಭದಾಯಕ. ನಿಮ್ಮ ಜಿಲ್ಲೆಗಳಲ್ಲಿ ಲಭ್ಯವಿರುವ ನಿವೇಶನಗಳನ್ನು ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ನೋಂದಣಿ ಮಾಡಿ, ನಿಮ್ಮ ಮನೆ ಕನಸನ್ನು ನನಸಾಗಿಸಿಕೊಳ್ಳಿ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




