ANUKAMPADA

ಅನುಕಂಪದ ಆಧಾರದ ನೇಮಕಾತಿ: ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳ ಸಂಪೂರ್ಣ ಲಿಸ್ಟ್

WhatsApp Group Telegram Group

ಕರ್ನಾಟಕ ಸರ್ಕಾರಿ ನೌಕರನೊಬ್ಬ ವೃತ್ತಿಯಲ್ಲಿರುವಾಗಲೇ ಅಕಾಲಿಕ ಮರಣ ಹೊಂದಿದರೆ, ಅವಲಂಬಿತ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಅಥವಾ ಡಿ ಹುದ್ದೆಯಲ್ಲಿ ನೇಮಕಾತಿ ಮಾಡಿಕೊಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಮರಣದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು ಮತ್ತು ನಿಗದಿತ ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಮೊದಲು ತಿಳಿದಿರಲಿ

  • ನಿಯಮ 5ರ ಅನ್ವಯ ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬೇಕು
  • ನಮೂನೆ-2ರಲ್ಲಿ ಸಂಪೂರ್ಣ ವರದಿ ಸಲ್ಲಿಸಬೇಕು
  • ದಿವಂಗತ ನೌಕರನ ಮರಣ ದಿನಾಂಕ, ಅಭ್ಯರ್ಥಿಯ ಜನ್ಮ ದಿನಾಂಕ ಸೇರಿದಂತೆ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ತುಂಬಬೇಕು

ಅನುಕಂಪದ ನೇಮಕಾತಿಗೆ ಕಡ್ಡಾಯ ದಾಖಲೆಗಳ ಸಂಪೂರ್ಣ ಚೆಕ್‌ಲಿಸ್ಟ್

  1. ದಿವಂಗತ ಸರ್ಕಾರಿ ನೌಕರನ ಮರಣ ಪ್ರಮಾಣ ಪತ್ರ (ಒರಿಜಿನಲ್ ಅಥವಾ ದೃಢೀಕೃತ ಪ್ರತಿ)
  2. ಮೃತ ನೌಕರನ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ (ತಹಶೀಲ್ದಾರ್ ನೀಡಿದ್ದು)
  3. ಅಭ್ಯರ್ಥಿಯು ಮೃತ ನೌಕರನ ಅವಲಂಬಿತ ಎಂಬುದಕ್ಕೆ ಸಂಬಂಧ ಪತ್ರ (ಜನ್ಮ ಪ್ರಮಾಣ ಪತ್ರ/ಕುಟುಂಬ ರೇಷನ್ ಕಾರ್ಡ್/ಆಧಾರ್)
  4. ಅಭ್ಯರ್ಥಿಯ ಎಲ್ಲಾ ಶೈಕ್ಷಣಿಕ ಅರ್ಹತಾ ಪ್ರಮಾಣ ಪತ್ರಗಳು (SSLC, PUC, ಪದವಿ ಅಂಕಪಟ್ಟಿಗಳು)
  5. ನಿಯಮ 4(3) ಅನ್ವಯ ಅಭ್ಯರ್ಥಿಯ ವಿದ್ಯಾರ್ಹತೆಯ ವಿವರ
  6. ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ (ತಹಶೀಲ್ದಾರ್ ನೀಡಿದ್ದು)
  7. ಕುಟುಂಬದ ಯಾವ ಸದಸ್ಯರೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿಲ್ಲ ಎಂಬ ತಹಶೀಲ್ದಾರ್ ಪ್ರಮಾಣ ಪತ್ರ
  8. ಅಭ್ಯರ್ಥಿಗೆ ಕುಟುಂಬದ ಇತರ ಸದಸ್ಯರಿಂದ ಯಾವುದೇ ಅಭ್ಯಂತರವಿಲ್ಲ ಎಂಬ ಒಪ್ಪಿಗೆ ಪತ್ರ (ಎಲ್ಲಾ ಜೀವಂತ ಸದಸ್ಯರ ಸಹಿ)
  9. ಅಭ್ಯರ್ಥಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ ಎಂಬ ಪೊಲೀಸ್ ವರದಿ
  10. ಅಭ್ಯರ್ಥಿ ವಿಧವೆಯಾಗಿದ್ದಲ್ಲಿ ಮರು ಮದುವೆಯಾಗಿಲ್ಲ ಎಂಬ ತಹಶೀಲ್ದಾರ್ ಪ್ರಮಾಣ ಪತ್ರ
  11. ಅಭ್ಯರ್ಥಿ ಮಗಳು/ಸಹೋದರಿ ಆಗಿದ್ದಲ್ಲಿ ಅವಿವಾಹಿತೆ ಎಂಬ ನಿಯಮ 3(2) ಅನ್ವಯ ತಹಶೀಲ್ದಾರ್ ಪ್ರಮಾಣ ಪತ್ರ
  12. ಸ್ಥಳೀಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರ
  13. ದಿವಂಗತ ನೌಕರನ ಸೇವಾ ಪುಸ್ತಕದ ದೃಢೀಕೃತ ಪ್ರತಿ
  14. ಕುಟುಂಬ ಪಿಂಚಣಿ ಮಂಜೂರಾತಿ ಆದೇಶದ ಪ್ರತಿ (ಇದ್ದಲ್ಲಿ)
  15. SSLC ಮತ್ತು ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಓದಿರುವ ಬಗ್ಗೆ ಪ್ರಮಾಣ ಪತ್ರ (ಕನ್ನಡ ಭಾಷಾ ಪರೀಕ್ಷೆಗೆ)

ಮುಖ್ಯ ಸೂಚನೆಗಳು

  • ಎಲ್ಲಾ ದಾಖಲೆಗಳು ದೃಢೀಕೃತ ಪ್ರತಿಗಳಾಗಿರಬೇಕು
  • ಅರ್ಜಿ ಸಲ್ಲಿಸುವಾಗ ಮೂಲ ದಾಖಲೆಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು
  • ಮರಣದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸದಿದ್ದರೆ ಸೌಲಭ್ಯ ರದ್ದಾಗುವ ಸಾಧ್ಯತೆ
  • ಎಲ್ಲಾ ಪ್ರಮಾಣ ಪತ್ರಗಳು ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದಿರಬೇಕು
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories