WhatsApp Image 2025 11 11 at 1.09.41 PM

ಎತ್ತಿನಹೊಳೆ–ಶರಾವತಿ ಯೋಜನೆಗೆ ಕೇಂದ್ರ ಬ್ರೇಕ್: ಪರಿಸರ ಉಲ್ಲಂಘನೆ ಆರೋಪದಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆ 

WhatsApp Group Telegram Group

ಕಳೆದ ಹಲವು ವರ್ಷಗಳಿಂದ ಕರ್ನಾಟಕದ ನೀರಾವರಿ, ಕುಡಿಯುವ ನೀರಿನ ಯೋಜನೆಗಳು ಹಾಗೂ ಹಸಿರು ಶಕ್ತಿಯ ಪರಿಕಲ್ಪನೆಗಳಿಗೆ ಪ್ರಮುಖವಾಗಿದ್ದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಳು ಇದೀಗ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿವೆ. ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಯೋಜನೆಗಳು ಎಂದು ಪರಿಗಣಿಸಿದ್ದ ಈ ಎರಡು ಯೋಜನೆಗಳ ಮುಂದಿನ ಹಂತಗಳಿಗೆ ಕೇಂದ್ರ ಸರ್ಕಾರ ನೇರವಾಗಿ ತಡೆ ಹಾಕಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಶ್ಚಿಮ ಘಟ್ಟದ ನೈಸರ್ಗಿಕ ಸಂರಕ್ಷಣೆ, ಅರಣ್ಯ ನಾಶ, ನೀರಿನ ಹರಿವು, ಜೀವ ವೈವಿಧ್ಯತೆ, ಬರಪೀಡಿತ ಜಿಲ್ಲೆಗಳ ಕುಡಿಯುವ ನೀರಿನ ಭರವಸೆ ಈ ಎಲ್ಲದರ ಮಧ್ಯೆ ಇದೀಗ ಹೊಸ ಸಂಕಷ್ಟ ಎದುರಾಗಿದೆ.

ಎತ್ತಿನಹೊಳೆ ಯೋಜನೆಗೆ ಬ್ರೇಕ್: ಮೊದಲ ಹಂತದ ಅನಧಿಕೃತ ಕಾಮಗಾರಿಗಳೇ ಕಾರಣ:

ದಕ್ಷಿಣ ಕರ್ನಾಟಕದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದ ಎತ್ತಿನಹೊಳೆ ಯೋಜನೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದು. ಆದರೆ, ಈ ಯೋಜನೆಯ ಹಂತ 1‌ರಲ್ಲಿ ಕೈಗೊಂಡ ಕೆಲವು ಕಾಮಗಾರಿಗಳು ನಿಯಮಾನುಸಾರವಾಗಿಲ್ಲ ಎಂಬ ಗಂಭೀರ ಆರೋಪಗಳು ಕೇಂದ್ರ ಪರಿಸರ ಇಲಾಖೆ ಮುಂದಿಟ್ಟಿದೆ.

ಅಕ್ಟೋಬರ್ 27ರಂದು ನಡೆದ ಸಭೆಯಲ್ಲಿ, ಪರಿಸರ ಇಲಾಖೆಯ ಸಲಹಾ ಸಮಿತಿ ಅನಧಿಕೃತ ಕಾಮಗಾರಿಗಳಿರುವುದನ್ನು ದೃಢಪಡಿಸಿದೆ. ಇದರಿಂದ ಪರಿಸರದ ಮೇಲೆ ಗಂಭೀರ ಹಾನಿ ಉಂಟಾಗುತ್ತಿದೆ.  ಆದ್ದರಿಂದ ನಿಯಮ ಪಾಲಿಸದೇ ಮುಂದುವರಿದ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಹಂತಕ್ಕೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಯೋಜನೆ ನಿರ್ವಹಣೆಯಲ್ಲಿನ ಪಾರದರ್ಶಕತೆ ಬಗ್ಗೆ ಗೊಂದಲವನ್ನು ಸೃಷ್ಟಿ ಮಾಡಿದೆ.

ಶರಾವತಿ ಪಂಪ್ ಸ್ಟೋರೇಜ್, ಪಶ್ಚಿಮ ಘಟ್ಟದಲ್ಲಿ 54 ಹೆಕ್ಟೇರ್ ಅರಣ್ಯ ನಾಶಕ್ಕೆ ತಡೆ:

ಕರ್ನಾಟಕವು ಶರಾವತಿ ನದಿಯ ಬಳಿಯೇ ಪಂಪ್ ಸ್ಟೋರೇಜ್ ಪವರ್ ಯೋಜನೆ ಸ್ಥಾಪನೆಗೆ ಮುಂದಾಗಿತ್ತು. ಆದರೆ ಯೋಜನೆಗಾಗಿ, 54 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆ, 15,000ಕ್ಕೂ ಹೆಚ್ಚು ಮರಗಳ ಕಡಿತ, ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ನಾಶ, ಭೂಸವಕಳಿ, ಭೂಕುಸಿತಗಳ ಅಪಾಯ ಎಂಬ ಕಾರಣಗಳಿಂದ ಅರಣ್ಯ ಸಲಹಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇನ್ನು, ಪಶ್ಚಿಮ ಘಟ್ಟ ವಿಶ್ವದ 34 ಹಾಟ್‌ಸ್ಪಾಟ್ ಜೀವ ವೈವಿಧ್ಯ ಕೇಂದ್ರಗಳಲ್ಲಿ ಒಂದು. ಅಪರೂಪದ ಪ್ರಾಣಿ, ಸಸ್ಯ ಜಾತಿಗಳ ನೆಲೆ. ಆದ್ದರಿಂದ ಅರಣ್ಯ ನಾಶವು ಸ್ಥಳೀಯ ಪರಿಸರ ವ್ಯವಸ್ಥೆ ಮತ್ತು ಜನರ ಬದುಕಿಗೆ ನೇರ ಪರಿಣಾಮ ಬೀರುತ್ತದೆ ಹೀಗಾಗಿ, ಕೇಂದ್ರ ಪರಿಸರ ಸಚಿವಾಲಯ ಯೋಜನೆಯನ್ನು ನಿರಾಕರಿಸಿದೆ.

ಇನ್ನು, ಎತ್ತಿನಹೊಳೆ ಮತ್ತು ಶರಾವತಿ ಎರಡೂ ಯೋಜನೆಗಳು ರಾಜ್ಯ ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳಾಗಿದ್ದರೂ, ಪರಿಸರದ ಕಾಳಜಿ ಹಾಗೂ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೇಂದ್ರದಿಂದ ಬಂದಿರುವ ಈ ತಡೆ, ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಒಟ್ಟಾರೆಯಾಗಿ, ಪರಿಸರದ ಸುರಕ್ಷತೆ vs ಅಭಿವೃದ್ಧಿ ಈ ಚರ್ಚೆಯಲ್ಲೇ ರಾಜ್ಯದ ಎರಡು ದೊಡ್ಡ ಯೋಜನೆಗಳು ಈಗ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ನೀಡುವ ಸ್ಪಷ್ಟೀಕರಣ ಮತ್ತು ಕೇಂದ್ರದ ಮುಂದಿನ ನಿರ್ಧಾರ ಈ ಯೋಜನೆಗಳ ಭವಿಷ್ಯ ನಿರ್ಧರಿಸಲಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories