Picsart 25 11 09 21 40 53 716 scaled

ಜನವರಿ 1, 2026ರಿಂದ ಈ ಜನರ ಪ್ಯಾನ್ ನಿಷ್ಕ್ರಿಯ! ಯಾವೆಲ್ಲ ಸಮಸ್ಯೆಗಳು ಎದುರಾಗುತ್ತವೆ.? ಇಲ್ಲಿದೆ ಮಾಹಿತಿ

Categories:
WhatsApp Group Telegram Group

ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಪ್ಯಾನ್ ಕಾರ್ಡ್ ಇಂದು ಕೇವಲ ಗುರುತಿನ ಚೀಟಿ ಮಾತ್ರವಲ್ಲ, ಇದು ಪ್ರತಿಯೊಬ್ಬ ನಾಗರಿಕನಿಗೂ ಅತ್ಯಗತ್ಯವಾಗಿರುವ ಹಣಕಾಸು ದಾಖಲೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ದೊಡ್ಡ ಮೊತ್ತದ ವಹಿವಾಟುಗಳವರೆಗೆ, ಹೂಡಿಕೆ, ಸಾಲ, ಆಸ್ತಿ ಖರೀದಿ, ತೆರಿಗೆ ಪಾವತಿ ಎಲ್ಲದಕ್ಕೂ ಪ್ಯಾನ್ ಅವಶ್ಯಕ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂತಹ ಸಂದರ್ಭದಲ್ಲಿ, ಕೇಂದ್ರ ಸರ್ಕಾರದಿಂದ ಬಂದಿರುವ ಹೊಸ ಎಚ್ಚರಿಕೆ ದೇಶದ ಕೋಟ್ಯಂತರ ಜನರಿಗೆ ಜಾಗ್ರತೆಯಿಂದ ಇರುವಂತೆ ಮಾಡಿದೆ. ಆದಾಯ ತೆರಿಗೆ ಇಲಾಖೆ ಪ್ಯಾನ್–ಆಧಾರ್ ಲಿಂಕ್ ಕಡ್ಡಾಯ ನಿಯಮದ ಅಂತಿಮ ಗಡುವನ್ನು ಸ್ಪಷ್ಟಪಡಿಸಿದ್ದು, ಈ ನಿಯಮ ಪಾಲಿಸದಿದ್ದರೆ ಪ್ಯಾನ್ ಸ್ವತಃ ನಿಷ್ಕ್ರಿಯಗೊಳ್ಳುವ ಸಂಭವ ನೂರಕ್ಕೆ ನೂರು.

2025ರ ಡಿಸೆಂಬರ್ 31ಆಧಾರ್ ಲಿಂಕ್ ಮಾಡಲು ಕೊನೆಯ ದಿನ. ಈ ದಿನಾಂಕದ ನಂತರ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜನವರಿ 1, 2026ರಿಂದ ಶಾಶ್ವತವಾಗಿ ನಿಷ್ಕ್ರಿಯ ಆಗಲಿವೆ. ಒಮ್ಮೆ ಪ್ಯಾನ್ ನಿಷ್ಕ್ರಿಯವಾದರೆ, ಸಾಮಾನ್ಯ ನಾಗರಿಕರಿಗೆ ಮಾತ್ರವಲ್ಲ, ಉದ್ಯಮಿಗಳು, ವ್ಯಾಪಾರಿಗಳು, ಹೂಡಿಕೆದಾರರು ಎಲ್ಲರೂ ಹಣಕಾಸು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ಸರ್ಕಾರ ಈ ಕ್ರಮ ತೆಗೆದುಕೊಳ್ಳಲು ಕಾರಣ ಏನು? ಲಿಂಕ್ ಮಾಡದಿದ್ದರೆ ಏನಾಗುತ್ತದೆ? ಲಿಂಕ್ ಮಾಡುವ ಪ್ರಕ್ರಿಯೆ ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ಯಾನ್–ಆಧಾರ್ ಲಿಂಕ್ ಕಡ್ಡಾಯ ಯಾಕೆ?

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಪಡೆಯುವುದು ತಡೆಯಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ನಕಲಿ/ಕಳ್ಳ ಪ್ಯಾನ್ ಕಾರ್ಡ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು.
ದೇಶದ ಹಣಕಾಸು ವ್ಯವಹಾರಗಳು ಪಾರದರ್ಶಕವಾಗುವಂತೆ ಮಾಡಲು.
ತೆರಿಗೆ ವಂಚನೆ ನಿಯಂತ್ರಣಕ್ಕೆ ತರಲು ಈ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
ಜೀವನದ ಪೂರ್ತಿ ಆಧಾರ್ ಸಂಖ್ಯೆ ಒಂದೇ ಇರುತ್ತದೆ. ಆದ್ದರಿಂದ ಇದನ್ನು ಪ್ಯಾನ್‍ಗೆ ಜೋಡಿಸುವ ಮೂಲಕ, ಸರ್ಕಾರ ಹಣಕಾಸು ವ್ಯವಹಾರಗಳನ್ನು ಸರಳವಾಗಿ ಮ್ಯಾಪ್ ಮಾಡಬಹುದು.

ಲಿಂಕ್ ಮಾಡದಿದ್ದರೆ ಎದುರಾಗುವ 5 ಪ್ರಮುಖ ಸಂಕಷ್ಟಗಳು ಯಾವುವು?:

ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ:
ನಿಮ್ಮ ಪ್ಯಾನ್ INVALD ಅಥವಾ INOPERATIVE ಸ್ಥಿತಿಗೆ ಹೋಗುತ್ತದೆ.

ITR ಸಲ್ಲಿಸಲು ಸಾಧ್ಯವಿಲ್ಲ:
ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಅವಕಾಶವಿಲ್ಲ.

ಹೆಚ್ಚಿದ TDS ಕಡಿತ:
ಬ್ಯಾಂಕ್‌ ಬಡ್ಡಿ, ಸಂಬಳ ಹಾಗೂ ಇತರ ಪಾವತಿಗಳ ಮೇಲೆ 20% ಟಿಡಿಎಸ್ ಕಡಿತಗೊಳ್ಳುತ್ತದೆ.
ಹಣಕಾಸು ವಹಿವಾಟು ಸ್ಥಗಿತ:
ಹೊಸ ಬ್ಯಾಂಕ್ ಖಾತೆ ತೆರೆಯುವುದು, ಹೂಡಿಕೆ (FD, MF, Stocks), ಸಾಲ ಪಡೆಯುವುದು, ಆಸ್ತಿ ಖರೀದಿ/ಮಾರಾಟ ಇವೆಲ್ಲವೂ ಸಾಧ್ಯವಾಗುವುದಿಲ್ಲ.

ತೆರಿಗೆ ಮರುಪಾವತಿ ತಡೆ:
ರೀಫಂಡ್ ಬಂದರೂ ಅದು ಬಿಡುಗಡೆ ಆಗುವುದಿಲ್ಲ.

ಪ್ಯಾನ್–ಆಧಾರ್ ಲಿಂಕ್ ಮಾಡುವುದು ಹೇಗೆ?:

ಮೊದಲು ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
Income Tax e-filing portal,
https://www.incometax.gov.in/iec/foportal/
ನಂತರ Link Aadhaar ಆಯ್ಕೆ ಮಾಡಿ.
ಹೋಮ್‌ಪೇಜ್‌ನ Quick Links ವಿಭಾಗದಲ್ಲಿ ದೊರೆಯುತ್ತದೆ.
ವಿವರಗಳನ್ನು ನಮೂದಿಸಿ,
10 ಅಂಕಿಯ ಪ್ಯಾನ್
12 ಅಂಕಿಯ ಆಧಾರ್
ನಿಖರವಾಗಿ ನಮೂದಿಸಿ.

ಶುಲ್ಕ ಪಾವತಿಸಿ:

ಪ್ರಸ್ತುತ ವಿಳಂಬ ಶುಲ್ಕ: ₹1,000
ಇ-ಪೇ ಟ್ಯಾಕ್ಸ್ ಮೂಲಕ ಪಾವತಿಸಬೇಕು.
ವಿನಂತಿಯನ್ನು ಸಲ್ಲಿಸಿ.
ಪಾವತಿ ಯಶಸ್ವಿಯಾದ ನಂತರ, ಲಿಂಕ್ ವಿನಂತಿ ಸ್ವೀಕರಿಸಲಾಗುತ್ತದೆ.
ಕೆಲವೇ ದಿನಗಳಲ್ಲಿ ಲಿಂಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಲಿಂಕ್ ಸ್ಥಿತಿ ಹೇಗೆ ಪರಿಶೀಲಿಸುವುದು?:

ಆನ್‌ಲೈನ್ ಮೂಲಕ
ಪೋರ್ಟಲ್‌ನಲ್ಲಿ Link Aadhaar Status ಕ್ಲಿಕ್ ಮಾಡಿ.
ಪ್ಯಾನ್, ಆಧಾರ್ ನಮೂದಿಸಿ, ಸ್ಥಿತಿ ತಕ್ಷಣ ಕಾಣಿಸುತ್ತದೆ.

SMS ಮೂಲಕ:
ಈ ಮಾದರಿಯಲ್ಲಿ SMS ಕಳುಹಿಸಿ,
UIDPAN <12-ಅಂಕಿಯ ಆಧಾರ್ ಸಂಖ್ಯೆ> <10-ಅಂಕಿಯ ಪ್ಯಾನ್ ಸಂಖ್ಯೆ>
567678 ಅಥವಾ 56161 ಗೆ ಕಳುಹಿಸಿ.

ಮುಖ್ಯ ದಿನಾಂಕಗಳು:

ಕೊನೆಯ ದಿನಾಂಕ: ಡಿಸೆಂಬರ್ 31, 2025
ಪ್ಯಾನ್ ನಿಷ್ಕ್ರಿಯಗೊಳ್ಳುವ ದಿನ: ಜನವರಿ 1, 2026

ಒಟ್ಟಾರೆಯಾಗಿ, ತಾಂತ್ರಿಕ ದೋಷಗಳು, OTP ಸಮಸ್ಯೆ, ಪೋರ್ಟಲ್ ಲೋಡ್ ಸಮಸ್ಯೆ ಈ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚು  ಆದ್ದರಿಂದ ಕೊನೆಯ ಕ್ಷಣದವರೆಗೆ ಕಾಯಬೇಡಿ. ತಕ್ಷಣವೇ ಪ್ಯಾನ್–ಆಧಾರ್ ಲಿಂಕ್ ಮಾಡಿ, ನಿಮ್ಮ ಹಣಕಾಸು ವ್ಯವಹಾರಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಿ.

WhatsApp Image 2025 09 05 at 10.22.29 AM 3 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories