ಬೆಂಗಳೂರು: ರಾಜ್ಯದ ರೇಷನ್ ಕಾರ್ಡ್ ಹೊಂದಿರುವ ನಾಗರಿಕರಿಗೆ ನವೆಂಬರ್ ತಿಂಗಳ ರೇಷನ್ ಸರಕುಗಳು ಸಿಗುವುದು ಅನಿಶ್ಚಿತವಾಗಿದೆ. ರಾಜ್ಯ ಸರ್ಕಾರದಿಂದ ಕಮಿಷನ್ ಪಾವತಿ ಸಿಗದ ಕಾರಣ, ನವೆಂಬರ್ ತಿಂಗಳ ರೇಷನ್ ವಿತರಣೆ ನಡೆಸದಿರಲು ರೇಷನ್ ಅಂಗಡಿ ಮಾಲಿಕರ ಸಂಘ ತೀರ್ಮಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ರೇಷನ್ ಅಂಗಡಿ ಮಾಲಿಕರಿಗೆ ರಾಜ್ಯ ಸರ್ಕಾರದಿಂದ ಬರಬೇಕಾದ ಕಮಿಷನ್ ಪಾವತಿ ನಿಲುಗಡೆಯಾಗಿದೆ. ಇದರ ಪರಿಣಾಮವಾಗಿ, ಸಗಟು ಮಳಿಗೆಗಳಿಂದ ನವೆಂಬರ್ ತಿಂಗಳ ರೇಷನ್ ಸರಕುಗಳನ್ನು ತೆಗೆದುಕೊಳ್ಳದೆ, ರಾಜ್ಯದ ಎಲ್ಲ ಪ್ರದೇಶಗಳಲ್ಲಿ ರೇಷನ್ ವಿತರಣೆಯನ್ನು ನಿಲ್ಲಿಸಲು ರೇಷನ್ ಅಂಗಡಿ ಮಾಲಿಕರ ಸಂಘ ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕ ಸರ್ಕಾರಿ ರೇಷನ್ ವಿತರಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ನಿರ್ದೇಶಕ ಆರ್. ಮಹಾದೇವಪ್ಪ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ ಎಲ್ಲ ರೇಷನ್ ವಿತರಕರಿಗೆ ಕಮಿಷನ್ ಪಾವತಿ ಸಿಗದೆ ಹೋಗುತ್ತಿರುವುದರಿಂದ ಗಂಭೀರ ತೊಂದರೆ ಉಂಟಾಗಿದೆ. ಈ ಸಮಸ್ಯೆಯ ಕುರಿತು ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮ ಕಂಡಿಲ್ಲ. ಈ ಕಾರಣದಿಂದಾಗಿ ನವೆಂಬರ್ ತಿಂಗಳ ರೇಷನ್ ವಿತರಣೆಯನ್ನು ನಿಲ್ಲಿಸಲು ಸಂಘ ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕರ್ನಾಟಕದಲ್ಲಿ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಹಿಂದುಳಿದ ವರ್ಗಗಳ ನಿಜವಾದ ಸ್ಥಿತಿ ಶಿಕ್ಷಣ, ಉದ್ಯೋಗ, ಸಮಾಜ ಆರ್ಥಿಕ ಬೆಳವಣಿಗೆಯ ಬೇಕಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




